1 Cup Curd: ಒಂದು ಕಪ್ ಮೊಸರನ್ನು ತಿನ್ನುವುದರಿಂದ ಆಗುವ ಲಾಭವೇನು? ಯಾವಾಗ ತಿನ್ನಬೇಕು?
ಬದಲಾಗುತ್ತಿರುವ ಜಗತ್ತಿನಲ್ಲಿ ಜನರು ತಮ್ಮ ಜೀವನ ಶೈಲಿಯನ್ನು ಮರೆತು ಬಿಟ್ಟಿದ್ದಾರೆ. ಊಟ, ತಿಂಡಿ, ನಿದ್ರೆ ಸರಿಯಾದ ಸಮಯದಲ್ಲಿ ಆಗದೆ ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಮನುಷ್ಯನಿಗೆ ರೋಗ ಅಂಟಿಕೊಂಡ ಮೇಲೆ ಪರಿಹಾರವನ್ನು ಹುಡುಕುವ ಕೆಲಸ ಮಾಡುತ್ತಿದ್ದಾನೆ. ಆದರೆ ಈಗ ಕೊಂಚ ಡಿಫ್ರೆಂಟ್ ಆಗಿದೆ. ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ.
ಈ ಬಾರಿ ಜನರು ಆರೋಗ್ಯಕರ ಆಹಾರ ಕ್ರಮದ ಬಗ್ಗೆ ಗಮನ ಹರಿಸುತ್ತಾರೆ. ಹೀಗಾಗಿ ಹಲವು ಹಲವು ಹೆಲ್ತಿ ಫುಡ್‌ಗಳನ್ನು ಜನರು ಸೇವಿಸುತ್ತಾರೆ. ಇಂತಹವರಲ್ಲಿ ಹಲವರು ಮೊಸರನ್ನು ತಿನ್ನಲು ಕೊಂಚ ಹಿಂದೆಟು ಹಾಕುತ್ತಾರೆ. ಅದರು ಮೊಸರನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ.

ಹೆಚ್ಚಿನ ಜನರು ಇದನ್ನು ಮಧ್ಯಾಹ್ನ ಆಹಾರದ ತಿನ್ನಲು ಇಷ್ಟಪಡುತ್ತಾರೆ ಆದರೆ ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಬಯಸುತ್ತಾರೆ. ಮೊಸರು ಸಾಕಷ್ಟು ಪೋಷಕಾಂಶಗಳು ಹೊಂದಿರುತ್ತದೆ.
ಮೊಸರು ತಿನ್ನುವುದರಿಂದ ಏನೆಲ್ಲಾ ಪ್ರಯೋಜನ
ಬೆಳಗಿನ ಉಪಾಹಾರದಲ್ಲಿ ಪ್ರತಿದಿನ 1 ಬೌಲ್ ಮೊಸರು ತಿನ್ನುವುದು ನಿಮ್ಮ ಹೊಟ್ಟೆಯಲ್ಲಿನ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಮೊಸರು ತಿಂದ ನಂತರ ಹೊರಗೆ ಹೋದಾಗ, ಹೊರಗಿನ ತಾಪಮಾನ ಏನೇ ಇರಲಿ, ದೇಹವು ತನ್ನನ್ನು ತಾನೇ ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಆರೋಗ್ಯವು ಸಾಮಾನ್ಯವಾಗಿರುವವರೆಗೆ ಮತ್ತು ನೀವು ಸೀಮಿತ ಪ್ರಮಾಣದಲ್ಲಿ ಮೊಸರು ತಿನ್ನುತ್ತಿದ್ದರೆ, ಅದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಎಂದು ತಜ್ಞರ ಹೇಳಿದ್ದಾರೆ.
ಪ್ರತಿದಿನ 1 ಬೌಲ್ ಮೊಸರು ತಿನ್ನುವುದು ಶಾಖದ ಹೊಡೆತ ಮತ್ತು ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸುತ್ತದೆ, ದೇಹದಲ್ಲಿ ನೀರಿನ ಕೊರತೆಯಿದ್ದರೆ, ಮೊಸರು ಸೇವಿಸುವುದು ಬೆಸ್ಟ್. ಶಾಖದ ಹೊಡೆತ ಮತ್ತು ನಿರ್ಜಲೀಕರಣವನ್ನು ತಪ್ಪಿಸಲು, ನೀವು ಬೆಳಗಿನ ಉಪಾಹಾರಕ್ಕಾಗಿ ಮೊಸರು ತಿನ್ನಬೇಕು.
ಮೊಸರು ಸೇವನೆ ಯಾವಗ ಬೆಸ್ಟ್?
ಮೊಸರಿನಲ್ಲಿ ಹೊಟ್ಟೆಗೆ ಸಹಾಯ ಮಾಡುವ ಉತ್ತಮ ಬ್ಯಾಕ್ಟೀರಿಯಾಗಳಿವೆ. ಈ ಬ್ಯಾಕ್ಟೀರಿಯಾಗಳು ಜೀರ್ಣಾಂಗ ವ್ಯವಸ್ಥೆಯನ್ನು ವೇಗಗೊಳಿಸುತ್ತದೆ. ಇದನ್ನು ದಿನವೂ ಮಿತವಾಗಿ ಸೇವಿಸುವುದರಿಂದ ಚಯಾಪಚಯ ಕ್ರಿಯೆ ವೇಗ ಗೊಳ್ಳುತ್ತದೆ.
ಬೇಸಿಗೆ ಕಾಲದಲ್ಲಿ ಯಾವಾಗ ಬೇಕಾದರೂ ಮೊಸರನ್ನು ಸೇವಿಸಬಹುದು. ನಿಮ್ಮ ಆರೋಗ್ಯವನ್ನು ಒಮ್ಮೆ ನೋಡಿಕೊಂಡು ಮೊಸರು ತಿನ್ನುವುದು ಬೆಸ್ಟ್. ನೆಗಡಿ ಕೆಮ್ಮು ಇರುವವರು ರಾತ್ರಿ ತಿನ್ನಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.












Click it and Unblock the Notifications