Sprouts Horse Gram Pulao Recipe: ಮೊಳಕೆ ಹುರುಳಿಕಾಳು ಪಲಾವ್ ಮಾಡುವ ವಿಧಾನ: ತಿನ್ನಲು ರುಚಿ ಆರೋಗ್ಯಕ್ಕೆ ಶಕ್ತಿ
ಮನೆಯಲ್ಲಿ ಹುರುಳಿಕಾಳು ಇದಿಯಾ? ಮಧ್ಯಾಹ್ನಾ ಅಥವಾ ರಾತ್ರಿ ಊಟಕ್ಕೆ ಯಾವ ಅಡುಗೆ ತಯಾರಿಸುವುದು ಅಂತ ಯೋಚನೆ ಮಾಡ್ತಾಯಿದಿರಾ? ಮೊಳಕೆ ಹುರುಳಿಕಾಳು ಪಲಾವ್ ಮಾಡಿ. ಇದು ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಮನೆಯಲ್ಲಿ ಪ್ರತಿಯೊಬ್ಬರು ಇಷ್ಟಪಟ್ಟು ತಿಂತಾರೆ. ಇದನ್ನು ಬೇಕಾದಲ್ಲಿ ಬೆಳಗಿನ ತಿಂಡಿಗೂ ಕೂಡ ರೆಡಿ ಮಾಡಿಕೊಳ್ಳಬಹುದು. ಹುರುಳಿಕಾಳು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಬೊಜ್ಜು, ಶೀತ ಮತ್ತು ಇನ್ನಿತರ ಕಾಯಿಲೆಗಳಿಗೆ ಔಷಧಿಯಾಗಿದೆ.

ಅದ್ರಲ್ಲೂ ಮೊಳಕೆ ಬಂದ ಹುರುಳಿಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ತಡ ಮಾಡುವುದು ಬೇಡ. ಮೊಳಕೆ ಹುರುಳಿಕಾಳು ಪಲಾವ್ ಮಾಡುವ ಹೇಗೆ ಅಂತ ನೋಡೋಣ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನಿಮ್ಮ ಅನುಭವವನ್ನು ಕಾಮೆಮಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಮೊಳಕೆ ಹುರುಳಿಕಾಳು ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು:-
*ಮೊಳಕೆ ಹುರುಳಿಕಾಳು ಅರ್ಧ ಕಪ್
* ಅಕ್ಕಿ ಒಂದು ಕಪ್
* ಕಾಯಿ ತುರಿ 2 tbls
* ಒಣಮೆಣಸಿನಕಾಯಿ 2
* ಈರುಳ್ಳಿ 1
* ಟೊಮೆಟೊ 2
* ಪಲಾವ್ ಎಲೆ 1
* ಪಲಾವ್ ಹೂವು 1
* ಚಕ್ಕೆ ಒಂದು ಬೆರಳಿನ ಗಾತ್ರದ ಒಂದು
* ಸೋಂಪು, ಜೀರಿಗೆ 1 tbls
* ಏಲಕ್ಕಿ 2
* ಕೊತ್ತಂಬರಿ ಸೊಪ್ಪು ಒಂದು ಹಿಡಿ
* ಗರಂ ಮಸಾಲ ಅರ್ಧ tbls
* ದನಿಯಾ ಪೌಡರ್ ಅರ್ಧ tbls
* ಪಲಾವ್ ಪೌಡರ್ tbls
* ಲವಂಗಾ 5
* ಎಣ್ಣೆ
* ಉಪ್ಪು
* ತುಪ್ಪ 2 tbls

ಮೊಳಕೆ ಹುರುಳಿಕಾಳು ಪಲಾವ್ ಮಾಡುವ ವಿಧಾನ:-
* ಮೊದಲಿಗೆ ಕಾಯಿ ತುರಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮಿಕ್ಸಿಗೆ ಹಾಕಿಕೊಳ್ಳಬೇಕು.
* ಬಳಿಕ ಒಲೆಯ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ, ಪಲಾವ್ ಎಲೆ, ಪಲಾವ್ ಹೂವು, ಚಕ್ಕೆ, ಸೋಂಪು, ಜೀರಿಗೆ, ಏಲಕ್ಕಿ, ಲವಂಗಾ ಹಾಕಿ ಕಲಿಸಿ
* ಬಳಿಕ ಇದಕ್ಕೆ ಈರುಳ್ಳಿ ಹಾಕಿ ಕೆಂಪಾದ ಬಳಿಕ ಟೊಮೆಟೊ ಹಾಕಿ ಬಾಡಿಸಿ
* ಆಮೇಲೆ ಇದಕ್ಕೆ ರುಬ್ಬಿಕೊಂಡ ಕಾಯಿ ತುರಿ ಹಾಕಿ ಬೇಯಿಸಿಕೊಳ್ಳಬೇಕು ನೆನೆಸಿದ ಮೊಳಕೆ ಹುರುಳಿಕಾಳು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು

* ಬಳಿಕ ಇದಕ್ಕೆ ಗರಂ ಮಸಾಲ, ದನಿಯಾ ಪೌಡರ್, ಪಲಾವ್ ಪೌಡರ್ ಹಾಕಿ
* ಸ್ವಲ್ಪ ಹೊತ್ತಿ ಬಿಟ್ಟು ಇದಕ್ಕೆ ತೊಳಿದು ನೆನೆಸಿದ ಅಕ್ಕಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ತುಪ್ಪ ಹಾಕಿ ಎರಡು ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ.
* ಮೂರು ವಿಸಿಲ್ ಆದ ಬಳಿಕ ಗ್ಯಾಸ್ ಆಫ್ ಮಾಡಿದರೆ ರುಚಿ ರಚಿಯಾದ ಮೊಳಕೆ ಹುರುಳಿಕಾಳು ಪಲಾವ್ ಸವಿಯಲು ಸಿದ್ಧ












Click it and Unblock the Notifications