Special Rice Bath Recipe: ನಿಮ್ಮ ಸಂಗಾತಿಗಾಗಿ ಈ ರಾತ್ರಿ ನಿಮ್ಮ ಕೈಯಾರೆ ತಯಾರಿಸಿ ಸ್ಪೆಷಲ್ ರೈಸ್ ಬಾತ್....
ಇವತ್ತು ಪ್ರೇಮಿಗಳ ದಿನ. ನಿಮ್ಮ ಪ್ರೇಮಿಗೆ ನೀವು ಉಡುಗೊರೆ ನೀಡುವುದಿರಲಿ ಶುಭಾಶಯ ಕೂಡ ತಿಳಿಸಲು ಸಾಧ್ಯವಾಗಿಲ್ವಾ? ಹಾಗಾದರೆ ಚಿಂತಿಸಬೇಡಿ. ಯಾಕೆಂದರೆ ತಡವಾದರೂ ನಿಮ್ಮ ಶುಭಾಶಯ ನಿಮ್ಮ ಸಂಗಾತಿ ಮನಮುಟ್ಟುವಂತಿರಬೇಕು. ನೀವೇನಾದ್ರೂ ಇಂದು ನಿಮ್ಮ ಬಾಳ ಸಂಗಾತಿಗೆ ವಿಶೇಷವಾಗಿ ಶುಭಾಶಯ ತಿಳಿಸಬೇಕು ಅಂದಕೊಂಡಿದ್ದರೆ, ಅದು ನಿಮ್ಮ ಸಂಗಾತಿ ಮೆಚ್ಚಿಕೊಳ್ಳಬೇಕು ಅಂತಾದರೆ ಮನೆಯಲ್ಲಿ ನೀವೇ ನಿಮ್ಮ ಕೈಯಾರೆ ಅಡುಗೆ ಮಾಡಿ ತಿನ್ನಿಸಿ.
ಹೌದು... ಇದಕ್ಕಾಗಿ ಸರಳವಾಗಿ ಮನೆಯಲ್ಲಿ ತಯಾರಿಸಬಹುದಾದ ರೈಸ್ ಬಾತ್ ರೆಸಿಪಿ ಬಗ್ಗೆ ತಿಳಿಯಿರಿ. ಇದನ್ನು ಮಾಡಿ ರಾತ್ರಿ ಊಟಕ್ಕೆ ನಿಮ್ಮ ಸಂಗಾತಿಗೆ ಬಡಿಸಿ. ಸಾಧ್ಯವಾದರೆ ನೀವೇ ನಿಮ್ಮ ಕೈಯಾರೆ ತಿನ್ನಿಸಲೂಬಹುದು. ಹಾಗಾದರೆ ತಡ ಮಾಡುವುದು ಬೇಡ ಮನೆಯಲ್ಲಿ ಸ್ಪಷಲ್ ರೈಸ್ ಬಾತ್ ತಯಾರಿಸುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಎಲ್ಲವನ್ನು ತಿಳಿಯೋಣ.

ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ, ರುಚಿ ನೋಡಿ, ನಮ್ಮೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಹಾಗಾದರೆ ಮನೆಯಲ್ಲಿ ರೈಸ್ ಬಾತ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು:-
*ಎಣ್ಣೆ 50 ಗ್ರಾಮ್
* ಶೆಂಗಾ 50 ಗ್ರಾಮ್
* ಕರಬೇವು ಸ್ವಲ್ಪ
* ಈರುಳ್ಳಿ 2
* ಟೆಮ್ಯಾಟೋ 2
* ಅರಿಶಿನ ಪುಡಿ ಕಾಲ್ ಚಮಚ
* ಒಣ ದ್ರಾಕ್ಷಿ 15
* 2 ಚಮಚ ಬೆಲ್ಲ
* ಸಾಂಬರ್ ಪುಡಿ 1 ಚಮಚ
* ಗರಂ ಮಸಾಲೆ 1 ಚಮಚ
*ಅಕ್ಕಿ ಒಂದು ಕಪ್
* ಉಪ್ಪು ರುಚಿಗೆ ತಕ್ಕಷ್ಟು
* ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:-
* ಒಂದು ಕುಕ್ಕರ್ ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ಬಳಿಕ ಎಣ್ಣೆಯನ್ನು ಹಾಕಿ.
* ಇದಕ್ಕೆ ಶೆಂಗಾ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ.
* ಕರಿಬೇವು ಸ್ವಲ್ಪ ಹಾಕಿ, ಈರುಳ್ಳಿ ಹಾಕಿ ಫ್ರೈ ಮಾಡಿ.
* ಬಳಿಕ ಎರಡು ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ, ಬಳಿಕ ಅರಿಶಿನ ಪುಡಿ ಕಾಲ್ ಚಮಚ ಹಾಕಿ ಚೆನ್ನಾಗಿ ಹುರಿಯಿರಿ.
* ಒಣ ದ್ರಾಕ್ಷಿ 15 ಹಾಕಿ, ಎರಡು ಚಮಚ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 1 ಚಮಚ ಸಾಂಬರ್ ಪುಡಿ ಹಾಕಿ ಚೆನ್ನಾಗಿ ಕಲಸಿ. ಗರಂ ಮಸಾಲೆ 1 ಚಮಚ ಹಾಕಬೇಕು.
* ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನಸಿದ ಒಂದುವರೆ ಲೋಟ ಅಕ್ಕಿ ಹಾಕಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ನಾಲ್ಕು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಸಿಲ್ ಆಗುವವರೆಗೂ ಬಿಡಿ. ಬಳಿಕ ಕೊತ್ತಂಬರಿ ಸೊಪ್ಪು ಅದರ ಮೇಲೆ ಉದುರಿಸಿದರೆ ಬಿಸಿ ಬಿಸಿ ಸ್ಪೆಷಲ್ ರೈಸ್ ಬಾತ್ ಸವಿಯಲು ಸಿದ್ದ.
ಈ ಸ್ಪೆಷಲ್ ರೈಸ್ ಬಾತ್ ಅನ್ನು ಮನೆಯಲ್ಲಿ ತಯಾರಿಸಿ ನಿಮ್ಮ ಸಂಗಾತಿಗೆ ರಾತ್ರಿ ಊಟಕ್ಕಾಗಿ ಬಡಿಸಿ. ಇದು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲದೆ ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನೂ ಹೆಚ್ಚಿಸುತ್ತದೆ.












Click it and Unblock the Notifications