Rice Payasa Recipe: ನಿಮ್ಮ ನೆಚ್ಚಿನ ಪಕ್ಷ ಗೆಲ್ಲುತ್ತಾ? ಹಾಗಾದರೆ ಈ ಸಿಹಿಯನ್ನು ಮನೆಯಲ್ಲಿ ಫಟಾಫಟ್ ಅಂತ ಮಾಡಿ...
ಇಂದು ಲೋಕಸಭಾ ಚುನಾವಣೆ ಫಲಿತಾಂಶ ಬಿಡುಗಡೆಗೆ ಮತ ಎಣಿಕೆ ಆರಂಭವಾಗಿದೆ. ಹೀಗಾಗಿ ನಿಮ್ಮ ನೆಚ್ಚಿನ ಪಕ್ಷ ಗೆಲ್ಲುವ ಸಂತೋಷದಲ್ಲಿ ನೀವೇನಾದರು ಇದ್ದರೆ ಮನೆಯಲ್ಲೇ ಸುಲಭವಾಗಿ ಸಿಹಿಯನ್ನು ತಯಾರಿಸಿ.
ಯಾಕೆಂದರೆ ಹೊರಗಡೆ ಸಿಗುವ ಸಿಹಿಯನ್ನು ತಿಂದು ಕ್ಷಣದ ಸಂತೋಷ ಆನಂದಿಸಿ, ನಂತರ ಹೊಟ್ಟೆ ಹಾಳು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲೇ ಫಟಾಫಟ್ ಅಂತ ಈ ಸಿಹಿಯನ್ನು ಮಾಡಿಬಿಡಿ. ಇದನ್ನು ಮಾಡುವುದು ಸುಲಭ. ಮನೆಯಲ್ಲೇ ಇರುವ ಪದಾರ್ಥಗಳಿಂದ ಈ ಸಿಹಿಯನ್ನು ಬೇಗ ತಯಾರಿಸಿಬಿಡಬಹುದು.

ಹಾಗಾದರೆ ತಡ ಮಾಡುವುದು ಬೇಡ. ಮನೆಯಲ್ಲಿ ಸುಲಭವಾಗಿ ತುಂಬಾ ರುಚಿಕರವಾಗಿ ಅಕ್ಕಿ ಪಾಯಸ ತಯಾರಿಸುವುದು ಹೇಗೆ ಎನ್ನುವುದನ್ನು ನೋಡೋಣ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಮಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಬೇಕಾಗುವ ಪದಾರ್ಥಗಳು:
* ಹಾಲು ಅರ್ಧ ಲೀಟರ್
* ಸಕ್ಕರೆ ಅರ್ಧ ಕಪ್ (ಅಗತ್ಯಕ್ಕೆ ಅನುಗುಣವಾಗಿ)
* ತುಪ್ಪ ಮೂರು ಚಮಚ
* ಏಲಕ್ಕಿ ಪುಡಿ
* ಗೋಡಂಬಿ, ದ್ರಾಕ್ಷಿ, ಬಾದಾಮಿ 15
* ಅಕ್ಕಿ ರವೆ ಒಂದು ಕಪ್
* ಕಲರ್ ಚಿಟಿಕೆ
* ಎಣ್ಣೆ
* ಕಲ್ಲು ಸಕ್ಕರೆ

ತಯಾರಿಸುವ ವಿಧಾನ
* ಅಕ್ಕಿ ರವೆಯನ್ನು ಜರಡಿ ಹಿಡಿದು ರವೆಯನ್ನು ಮಾತ್ರ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಹುರಿದುಕೊಳ್ಳಿ.
* ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಬಾದಾಮಿ ಹುರಿದುಕೊಳ್ಳಿ
* ನಂತರ ಒಂದು ಪತ್ರೇಕ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಹಾಲು ಹಾಕಿ ಚೆನ್ನಾಗಿ ಕುದಿಸಿ.
* ನಂತರ ಇದಕ್ಕೆ ಸಕ್ಕರೆ ಹಾಕಿ ಕರಗುವವರೆಗೂ ಕುದಿಯಲು ಬಿಡಿ.
* ಬಳಿಕ ಇದಕ್ಕೆ ಏಲಕ್ಕಿ ಪುಡಿ, ಕಲರ್ ಹಾಕಿ ಚೆನ್ನಾಗಿ ಕದಡಿ
* ನಂತರ ಇದಕ್ಕೆ ರವೆಯನ್ನು ಹಾಕಿ ಗಂಟಾಗದಂತೆ ಕದಡಿ.
* ಬಳಿಕ ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿ ಕುದಿಯಲು ಬಿಡಿ.
* ಸ್ವಲ್ಪ ಹೊತ್ತು ಇದನ್ನು ಚೆನ್ನಾಗಿ ಕುದಿಸಿ, ಹುರಿದ ಡ್ರೈ ಫ್ರೂಟ್ಸ್ ಹಾಕಿದರೆ ಅಕ್ಕಿ ಪಾಯಸ ಸವಿಯಲು ಸಿದ್ಧ.












Click it and Unblock the Notifications