Onion Pakoda Recipe: ಈ ಮಳೆಗೆ ಗರಿಗರಿ ಈರುಳ್ಳಿ ಪಕೋಡ, ರುಚಿಯಾದ ಚಟ್ನಿ ತಿನ್ನದಿದ್ದರೇನು ಮಜಾ ?!

Onion Pakoda Recipe: ಬೆಂಗಳೂರು ಸೇರಿ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಳೆ ಬಂದಾಗ ಏನಾದರು ಬಿಸಿ ಬಿಸಿ ಆಹಾರ ತಿನ್ನಲು ಮನಸ್ಸಾಗುತ್ತದೆ. ವಿಶೇಷವಾಗಿ ಬಜ್ಜಿ ಪಕೋಡ ನೆನಪಾಗೋದು ಮಳೆಗಾಲದಲ್ಲಿ. ಅದರಲ್ಲೂ ಮನೆಯಲ್ಲಿಯೇ ಈರುಳ್ಳಿ ಪಕೋಡ ಮಾಡಿಕೊಂಡು ತಿನ್ನುವುದರಲ್ಲಿ ಇರುವ ಮಜಾವೇ ಬೇರೆ. ಚಳಿ ಮಳೆಗೆ ಬಿಸಿ ಬಿಸಿ.. ಈರುಳ್ಳಿ ಪಕೋಡ ಜೊತೆಗೆ ರುಚಿಯಾದ ಚಟ್ನಿ ಇದ್ದರೆ ಒಳ್ಳೆಯ ಕಾಂಬಿನೇಷನ್.

ಸಾಮಾನ್ಯವಾಗಿ ಈರುಳ್ಳಿ ಪಕೋಡ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ಗರಿಗರಿಯಾಗಿ, ರುಚಿಯಾಗಿ ಈರುಳ್ಳಿ ಪಕೋಡ ಮಾಡುವುದು ಸವಾಲಿನ ಕೆಲಸ. ಇದರೊಂದಿಗೆ ಯಾವ ಚಟ್ನಿ ಚೆನ್ನಾಗಿರುತ್ತೆ ಎನ್ನುವುದು ಕೂಡ ಕೆಲ ಬಾರಿ ಗೊತ್ತಾಗುವುದಿಲ್ಲ. ಈ ರೀತಿ ನಿಮಗೂ ಅನಿಸಿದ್ದರೆ ಸುಲಭವಾಗಿ ಅತ್ಯಂತ ಸರಳ ವಿಧಾನದಲ್ಲಿ ಈರುಳ್ಳಿ ಪಕೋಡ ಹಾಗೂ ಇದರೊಂದಿಗೆ ರುಚಿಯಾದ ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ. ಹಾಗಾದರೆ ಈರುಳ್ಳಿ ಪಕೋಡ ಹಾಗೂ ಚಟ್ನಿ ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.

Onion Pakoda Recipe How to make crispy onion bajji and delicious chutney in rainy season

ಈರುಳ್ಳಿ ಬಜ್ಜಿ ತಯಾರಿಸಲು ಬೇಕಾಗುವ ಪದಾರ್ಥಗಳು:-

* ಈರುಳ್ಳಿ 3

* ಕಡಲೆಬೇಳೆ ಹಿಟ್ಟು 3 ಟೇಬಲ್ ಚಮಚ

* ಕೊತ್ತಂಬರಿ ಸೊಪ್ಪು ಸ್ವಲ್ಪ

* ಹಸಿಮೆಣಸಿನಕಾಯಿ 2

* ಉಪ್ಪು ರುಚಿಗೆ

* ಅಡುಗೆ ಸೋಡ ಚಿಟಿಕೆ

* ಅಡುಗೆ ಎಣ್ಣೆ

ಈರುಳ್ಳಿ ಬಜ್ಜಿ ತಯಾರಿಸುವ ವಿಧಾನ:-

* ಒಂದು ಪಾತ್ರೆಯಲ್ಲಿ ತೆಳುವಾಗಿ ಉದ್ದಕೆ ಹೆಚ್ಚಿದ ಈರುಳ್ಳಿ ಹಾಕಿ, ಇದಕ್ಕೆ ಕಡಲೆಬೇಳೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

* ಇದಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ, ರುಚಿಗೆ ಉಪ್ಪು, ಚಿಟಿಕೆ ಅಡುಗೆ ಸೋಡಾ ಹಾಕಿ, 1 ಟೇಬಲ್ ಚಮಚದಷ್ಟು ನೀರು ಚುಮುಕಿಸಿ ಕಲಸಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ 5 ನಿಮಿಷ ಬಿಡಿ.

* ಒಂದು ಪಾತ್ರೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ ಉಂಡೆಗಳನ್ನು ಹಾಕಿ ಕರೆದರೆ ಈರುಳ್ಳಿ ಬಜ್ಜಿ ರೆಡಿ. ಈಗ ಚಟ್ನಿ ತಯಾರಿಸುವ ವಿಧಾನ ತಿಳಿಯೋಣ.

ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು:-

* ಈರುಳ್ಳಿ 1

* ಟೊಮೆಟೊ 1

* ಹಸಿ ಮೆಣಸಿನಕಾಯಿ 5

* ಪುದೀನಾ ಸ್ವಲ್ಪ

* ಶುಂಠಿ ಒಂದು ಇಂಚು

* ಬೆಳ್ಳುಳ್ಳಿ 5 ಎಸಳು

* ಶೆಂಗಾ 5 ಟೇಬಲ್ ಸ್ಪೂನ್

* ಹುರಿಗಡಲೆ 3 ಟೇಬಲ್ ಸ್ಪೂನ್

* ಉಪ್ಪು ರುಚಿಗೆ

* ಅಡುಗೆ ಎಣ್ಣೆ

* ಜೀರಿಗೆ ಕಾಲ್ ಟೇಬಲ್ ಸ್ಪೂನ್

* ಸಾಸಿವೆ ಕಾಲ್ ಟೇಬಲ್ ಸ್ಪೂನ್

* ಕರಿಬೇವು

ಚಟ್ನಿ ತಯಾರಿಸುವ ವಿಧಾನ:

* ಒಂದು ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ, ಸಿಪ್ಪೆ ತೆಗೆದ 3 ಬೆಳ್ಳುಳ್ಳಿ, ಚಿಕ್ಕದಾಗಿ ಹೆಚ್ಚಿದ ಶುಂಠಿ, ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ, ರುಚಿಗೆ ಉಪ್ಪು, ಪುದೀನಾ ಫ್ರೈ ಮಾಡಬೇಕು.

* ನಂತರ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಹುರಿದ ಶೆಂಗಾ, ಹುರಿಗಡಲೆ ಹಾಕಿ ರುಬ್ಬಿಕೊಳ್ಳಬೇಕು.

* ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಮಿಕ್ಸ್ ಮಾಡಿದರೆ ರುಚಿಯಾದ ಚಟ್ನಿ ಸಿದ್ಧ. ಈರುಳ್ಳಿ ಬಜ್ಜಿ ಜೊತೆಗೆ ಈ ಚಟ್ನಿ ಅದ್ಭುತವಾಗಿರುತ್ತದೆ. ಒಮ್ಮೆ ಟ್ರೈ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+