Navratri 2023: ನೀವು ದುರ್ಗಾ ದೇವಿ ಕೋಪಕ್ಕೆ ಗುರಿಯಾಗಲು ಬಯಸದಿದ್ದರೆ ಈ 5 ವಸ್ತುಗಳನ್ನು ಮನೆಯಿಂದ ತೆಗೆದುಹಾಕಿ
ಹಿಂದೂಗಳ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾದ ನವರಾತ್ರಿ ಮತ್ತು ವಿಜಯದಶಮಿ ಆಗಮಿಸಲಿವೆ. ಶಾರದೀಯ ನವರಾತ್ರಿಯು ಅಕ್ಟೋಬರ್ 15 ರಿಂದ ಪ್ರಾರಂಭವಾಗುತ್ತಿದ್ದು ಈ ಹಬ್ಬ ಮಂಗಳವಾರ ಅಕ್ಟೋಬರ್ 24ರಂದು ವಿಜಯದಶಮಿಯೊಂದಿಗೆ ಕೊನೆಗೊಳ್ಳುತ್ತದೆ.
ಪ್ರತಿ ವರ್ಷವೂ ಶಾರದೀಯ ನವರಾತ್ರಿಯು ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಿಂದ ಆರಂಭವಾಗಿ ನವಮಿ ತಿಥಿಯವರೆಗೆ ನಡೆಯುತ್ತದೆ. ವಿಜಯದಶಮಿಯನ್ನು ನವಮಿಯ ದಿನದಂದು ಅಂದರೆ ದಶಮಿಯಂದು ಆಚರಿಸಲಾಗುತ್ತದೆ. ಇದನ್ನು ದೇಶದ ಅನೇಕ ಭಾಗಗಳಲ್ಲಿ ದಸರಾ ಎಂದು ಕರೆಯಲಾಗುತ್ತದೆ.

ಈ ವರ್ಷ ಶಾರದೀಯ ನವರಾತ್ರಿಯಲ್ಲಿ ಶಕ್ತಿ ದೇವತೆಯಾದ ದುರ್ಗಾ ದೇವಿಯನ್ನು ಪೂಜಿಸುವ ಮೊದಲು ನೀವು ನಿಮ್ಮ ಮನೆಯ ವಾಸ್ತುವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ದುರ್ಗೆಯ ಆಶೀರ್ವಾದವನ್ನು ಪಡೆಯುವ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಈ ದಸರಾ ಹಬ್ಬದಲ್ಲಿ ನೀವು ದುರ್ಗಾ ದೇವಿ ಕೋಪಕ್ಕೆ ಗುರಿಯಾಗಲು ಬಯಸದಿದ್ದರೆ ಈ 5 ವಸ್ತುಗಳನ್ನು ಮನೆಯಿಂದ ತೆಗೆದುಹಾಕಿ. ಹಾಗಾದರೆ ಆ ವಸ್ತುಗಳು ಯಾವವು ಎಂದು ತಿಳಿಯೋಣ.
ಈ 5 ವಸ್ತುಗಳನ್ನು ಮನೆಯಿಂದ ತೆಗೆದುಹಾಕಿ:-
*ಪೂಜಾ ಕೋಣೆಯನ್ನು ಆದಷ್ಟು ಸ್ವಚ್ಚವಾಗಿ ಅಚ್ಚುಕಟ್ಟಾಗಿ ಇಡಬೇಕು. ಒಂದು ವೇಳೆ ಪೂಜಾ ಕೋಣೆಯಲ್ಲಿ ಅಥವಾ ಮನೆಯಲ್ಲಿ ಹಳೆಯ ರಕ್ಷಾ ಸೂತ್ರಗಳು, ಮುರಿದ ಫೋಟೋ ಫ್ರೇಮ್‌ಗಳು, ಹಳೆಯ ಹರಿದ ಬಟ್ಟೆಗಳು ಇತ್ಯಾದಿ ಹಳೆಯ ಬೇಡವಾದ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ. ಅಲ್ಲದೆ, ತುಂಬಾ ಹಳೆಯದಾದ ಪೂಜಾ ಸಾಮಗ್ರಿಯನ್ನು ತೆಗೆದುಹಾಕಿ. ಇದರಿಂದ ಪೂಜೆ ಸ್ಥಳದಲ್ಲಿ ಸಕಾರಾತ್ಮಕತೆ ಇರುತ್ತದೆ.
*ಮನೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಅಥವಾ ಹಳೆಯ ಒಡೆದ ವಸ್ತುಗಳು ಇದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ. ಈ ಶುಭ ದಿನಗಳಲ್ಲಿ ಹೊಸತನದ ವಾತಾವರಣ ಇರಬೇಕು. ಅಲ್ಲದೆ ಕಸದ ರಾಶಿಗಳು ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ.
*ಅಡುಗೆ ಮನೆ ಅನ್ನಪೂರ್ಣ ದೇವಿಯ ವಾಸಸ್ಥಾನವಾಗಿದೆ. ಆದ್ದರಿಂದ ಅಡುಗೆಮನೆಯಲ್ಲಿ ಒಡೆದ ಪಾತ್ರೆಗಳು ಬಿದ್ದಿದ್ದರೆ, ಅವುಗಳನ್ನು ತೆಗೆದುಹಾಕಿ.
*ಮನೆಯಲ್ಲಿ ಯಾವುದೇ ಬಳಕೆಯಾಗದ ಯಂತ್ರೋಪಕರಣಗಳಿದ್ದರೆ, ಇವು ದೇಔಇಯ ಕೋಪಕ್ಕೆ ಗುರಿಯಾಗುತ್ತವೆ. ಹೀಗಾಗಿ ನೀವು ದೇವಿ ಕೋಪಗೊಳ್ಳಲು ಬಯಸದಿದ್ದರೆ ತಕ್ಷಣ ಅದನ್ನು ತೆಗೆದುಹಾಕಿ.
*ಮನೆಯಲ್ಲಿ ಎಲ್ಲವನ್ನೂ ವಾಸ್ತು ಪ್ರಕಾರ ಆಯೋಜಿಸಬೇಕು ಮತ್ತು ನಂತರ ಈ ಸಂಘಟಿತ ವಾತಾವರಣದಲ್ಲಿ ದೇವಿಯನ್ನು ಪೂಜಿಸುವುದರಿಂದ ದಾರಿದ್ರ್ಯ ದೂರವಾಗುತ್ತದೆ ಮತ್ತು ಎಲ್ಲವೂ ಶುಭವಾಗುತ್ತದೆ.
(ಗಮನಿಸಿ: ಈ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ತಲುಪಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ)












Click it and Unblock the Notifications