Korean Love Game: ಮಕ್ಕಳನ್ನು ಕಾಡುವ ಗೇಮಿಂಗ್ ವ್ಯಸನಕ್ಕೆ ಪೋಷಕರೂ ಕಾರಣ: ಡಾ.ರೂಪಾ ರಾವ್ ಬರಹ
ದೇಶದಲ್ಲಿ ಅಪಾಯಕಾರಿ ಗೇಮ್‌ವೊಂದು 3 ಜನ ಮಕ್ಕಳ ಬಲಿ ಪಡೆದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು 'ಕೊರಿಯನ್ ಲವರ್ ಗೇಮ್'ಗೆ ಬಲಿಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬ್ಲೂವೇಲ್ ಎನ್ನುವ ಗೇಮ್ ಹಲವು ಮಕ್ಕಳ ಸಾವಿಗೆ ಕಾರಣವಾಗಿತ್ತು. ಇದೀಗ ಆನ್‌ಲೈನ್ ಕೊರಿಯನ್ ಲವ್ ಗೇಮ್‌ಗೆ ಮೂವರು ಮೃತಪಟ್ಟಿದ್ದಾರೆ. ಇದು ದೇಶದಾದ್ಯಂತ ಮಕ್ಕಳು ಮೊಬೈಲ್ ಬಳಸುವುದು ಹಾಗೂ ಅಪಾಯಕಾರಿ ಆನ್‌ಲೈನ್ ಗೇಮ್‌ಗಳ ನಿಷೇಧದಂತ ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿದೆ. ಮಕ್ಕಳನ್ನು ಕಾಡುವ ಗೇಮಿಂಗ್ ವ್ಯಸನಕ್ಕೆ ಪೋಷಕರೂ ಕಾರಣ: ಡಾ.ರೂಪಾ ರಾವ್ ಅವರ ಬರಹ ಇಲ್ಲಿದೆ.
ವ್ಯಾಪಿಸುತ್ತಿದೆ ಮಕ್ಕಳಲ್ಲಿ ಗೇಮಿಂಗ್ ವ್ಯಸನ; ಎಲ್ಲಿ ತಪ್ಪಾಗುತ್ತಿದೆ? ಈ ವಾರದಲ್ಲಿ ನಾನು ನೋಡಿದ 5ನೇ ಪ್ರಕರಣ ಇದು.
9 ವರ್ಷದ ಮಕ್ಕಳಿಂದ ಹಿಡಿದು 18 ವರ್ಷದ ಹದಿಹರೆಯದವರೆಗೆ ಗೇಮಿಂಗ್ ಹಾಗೂ ಮೊಬೈಲ್ ಗೇಮಿಂಗ್ ವ್ಯಸನದಲ್ಲಿ ಮುಳುಗಿದ್ದಾರೆ. ವ್ಯಸನ ಅಷ್ಟು ಹೆಚ್ಚಾಗಿದೆ ಎಂದರೆ ಶಾಲೆಗೆ ಹೋಗೋದು ಬೇಡ, ಓದೋದು ಬೇಡ, ಪೋಷಕರ ಮಾತನ್ನ ಕೇಳೋದು ಬೇಡ, ಹೊರಗೆ ಆಟವಾಡೋದು ಬೇಡ. ಕೆಲವರು ಪೋಷಕರು ಆಟ ನಿಲ್ಲಿಸಲು ಹೇಳಿದರೆ ಕೋಪದಲ್ಲಿ ತಳ್ಳೋ, ಹೊಡೆದೋ ಅಥವಾ ಹಾನಿ ಮಾಡುವ ಮಟ್ಟಕ್ಕೆ ಬರುತ್ತಾರೆ.

ಪೋಷಕರು ಯಾವಾಗಲೂ ಕೇಳುತ್ತಾರೆ "ಮೇಡಮ್, ನನ್ನ ಮಗ/ಮಗಳನ್ನು ಹೇಗೆ ಬದಲಿಸೋದು? ಅವಳಿಗೆ ಅವರಿಗೆ ಕೌನ್ಸೆಲಿಂಗ್ ಕೊಡಿ"
ಆದರೆ ನಿಜ ಏನು ಗೊತ್ತಾ? ಪೋಷಕರಿಗೇ ಹೆಚ್ಚು ಸೈಕಾಲಜಿಸ್ಟ್ ಸಹಾಯ ಬೇಕು, ಮಕ್ಕಳಿಗಲ್ಲ. ಏಕೆಂದರೆ ಪೋಷಕರ ಗುರಿ ಕೇವಲ "ಮಗುವನ್ನು ಬದಲಿಸೋದು." ಆದರೆ ಮಗು ಯಾಕೆ ಗೇಮಿಂಗ್‌ಗೆ ಓಡುತ್ತಿದೆ ಎಂಬುದನ್ನು ನೋಡುವುದಲ್ಲ.
ಮಕ್ಕಳಲ್ಲಿ ಗೇಮಿಂಗ್ ವ್ಯಸನಕ್ಕೆ ಕಾರಣಗಳು
1. ಕುಟುಂಬದಲ್ಲಿ ಜಗಳ, ಕಿರಿಕ್, ಶಬ್ದ, ಪರಸ್ಪರದ ದೂರುವಿಕೆ, ಇಗೋ , ನೀನಾ? ನಾನಾ? ಎಂಬ ಪೈಪೋಟಿ. ಇವೆಲ್ಲವನ್ನು ಮಕ್ಕಳು ದಿನವೂ ನೋಡುತ್ತಾರೆ.
ಆದರೆ ಇದೊಂದೇ ಕಾರಣವಲ್ಲ, ಇನ್ನೂ ಹಲವಾರು ಕಾರಣಗಳಿವೆ. ಆರಾಮದ ವಲಯ (Comfort Zone): ಗೇಮ್ ಆಡುವುದು ಸುಲಭ, ಶ್ರಮ ಬೇಡ. ಕುರ್ಚಿಯಲ್ಲಿ ಕೂತು ಗಂಟೆಗಟ್ಟಲೆ ಕಾಲ ಕಳೆಯಬಹುದು. ಹೀಗಾಗಿ ಮಕ್ಕಳು ಅದನ್ನೇ ಆರಾಮದ ವಲಯವಾಗಿ ಮಾಡಿಕೊಂಡು, ಹೊರಗೆ ಹೋಗಿ ಆಟ ಆಡುವುದನ್ನ ಅಥವಾ ಬೇರೆ ಚಟುವಟಿಕೆ ಇಂದ ತಪ್ಪಿಸಿಕೊಳ್ಳುತ್ತಾರೆ.
ಡೋಪಮೈನ್ ಸ್ಟಿಮ್ಯುಲೇಶನ್: ಪ್ರತೀ ಗೆಲುವು, ಪ್ರತೀ ಲೆವೆಲ್ dopamine ಎಂಬ ಸಂತೋಷ ರಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೆದುಳಿಗೆ ತಕ್ಷಣದ ಆನಂದ ಸಿಗುತ್ತಾ ಹೋಗುತ್ತದೆ. ಕಾಲಕ್ರಮೇಣ ಮೆದುಳು ಇದನ್ನೇ ನಿರಂತರವಾಗಿ ಡೋಪಾಮೈನ್ ಬೇಕ ಅನ್ನೋ ಬಲೆಗೆ ಬೀಳುತ್ತದೆ.
ಓದಿನ ಅವಶ್ಯಕತೆಯ ಪ್ರಶ್ನೆ: "ಓದಿ ಏನು ಮಾಡಬೇಕು? ನನಗೆ ಬೇಕಾದ ಮಾಹಿತಿ ಇಲ್ಲೇ ಅಂಗೈನಲ್ಲಿಏ ಸಿಗ್ತಿದೆ" ಅನ್ನೋ ಮನೋಭಾವನೆ ಬರುತ್ತದೆ. ಹೀಗಾಗಿ ಮಕ್ಕಳಲ್ಲಿ ಓದಲು ಪ್ರೇರಣೆ ಕಡಿಮೆಯಾಗುತ್ತದೆ.
ತಕ್ಷಣದ ಖುಷಿ (Instant Gratification): ಅಧ್ಯಯನದಲ್ಲಿ ಫಲಿತಾಂಶ ನಿಧಾನವಾಗಿ ಸಿಗುತ್ತದೆ. ಅದಕ್ಕೆ ಕಷ್ಟ ಪಡಬೇಕು. ಆದರೆ ಗೇಮಿಂಗ್‌ನಲ್ಲಿ ತಕ್ಷಣದ ರಿವಾರ್ಡ್ ಸಿಗುತ್ತದೆ. ಇದರಿಂದ ಅವರಿಗೆ ತಕ್ಷಣದ ಸಂತೃಪ್ತಿ ಮಾತ್ರ ಮುಖ್ಯವಾಗುತ್ತದೆ.
ಎಲ್ಲವೂ ಸಿಗುತ್ತಿದೆ ಅನ್ನೋ ಭಾವನೆ: ಇಂದಿನ ಮಕ್ಕಳಿಗೆ ತಮ್ಮ ಜೀವನದಲ್ಲಿ ಬೇಕಾದಷ್ಟು ಸೌಲಭ್ಯ ಈಗಾಗಲೇ ಸಿಗುತ್ತಿದೆ. ಆದ್ದರಿಂದ ಓದೋದು ಅಥವಾ ಶ್ರಮಪಡುವುದಕ್ಕೆ "ಅಗತ್ಯವೇ ಇಲ್ಲ" ಅನ್ನಿಸುತ್ತದೆ.
ಗೇಮಿಂಗ್ ಅಡಿಕ್ಷನ್ ನಿಂದ ಮೆದುಳಿಗೆ ಆಗುವ ಹಾನಿಗಳೇನು?
ಗೇಮಿಂಗ್ ನ ಪ್ರತಿ ಗೆಲುವು, ಪ್ರತೀ ಲೆವೆಲಿಗೆಹೋಗುವುದು dopamine ರಾಸಾಯನಿಕ ಬಿಡುಗಡೆ ಮಾಡುತ್ತದೆ. ಮೆದುಳು ಅದನ್ನೇ ಹಂಬಲಿಸುತ್ತಾ ಹೋಗುತ್ತದೆ. ನಿಧಾನವಾಗಿ prefrontal cortex (ಮನಸ್ಸು ನಿಯಂತ್ರಿಸುವ ಭಾಗ) ದುರ್ಬಲವಾಗುತ್ತದೆ. ಹಾಗಾಗಿ ಮಕ್ಕಳು ತಮ್ಮ ಮನಸಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ, ಕೋಪಗೊಳ್ಳುತ್ತಾರೆ, ಓದುವುದು ಕಷ್ಟ ಅನಿಸುತ್ತದೆ ಬಿಟ್ಟು ಬಿಡುತ್ತಾರೆ.
ಇದರಿಂದಾಗಿ ಗೇಮ್ ಆಡಲಿಲ್ಲ ಅಂದರೆ ಬೇಸರ, ಸಿಟ್ಟು, ಭಯ, ಚಿಂತೆ, ರೆಸ್ಟ್ಲೆಸ್ನೆಸ್, ರಾತ್ರಿ ಹೊತ್ತು ನಿದ್ದೆ ಮಾಡದಿರುವುದು , ಕುಟುಂಬ, ಸ್ನೇಹಿತರಿಂದ ದೂರವಾಗಿ ವರ್ಚುಯಲ್ ಪ್ರಪಂಚದಲ್ಲಿ ಲೀನವಾಗುವುದು
ಪೋಷಕರು ಏನು ಮಾಡಬೇಕು?
1. ಮೊದಲು ಕುಟುಂಬವನ್ನು ಗುಣಪಡಿಸಿ. ಮಕ್ಕಳ ಮುಂದೆ ಜಗಳ ಆಡಿದರೂ ಅದು ತಾತ್ಕಾಲಿಕವಾಗಿರಲಿ, ಅವರ ಮುಂದೆಯೇ ಪರಿಹರಿಸಿಕೊಳ್ಳಿ. ಮನೆಯಲ್ಲಿ ಶಾಂತಿ, ಖುಶಿ ಇರಲಿ ,
ನೆನಪಿರಲಿ ಲಕ್ಸುರಿ ವಸ್ತುಗಳೂ ಕೇವಲ ಸುಖ ಕೊಡುತ್ತವೆ ಆದರೆ ನೆಮ್ಮದಿಗಾಗೀ ಮನೆಯಲ್ಲಿ ಕೊನೆಯಾಗದ ಗಲಾಟೆ ಜಗಳ ಇರದಿರಲಿ .
2. ಮಗುವಿನ ಲೋಕಕ್ಕೆ ಹೋಗಿ ಅವರ ಗೇಮಿಂಗ್ ಪ್ರಪಂಚದಲ್ಲಿ ಏನಿದೆ ಎಂದು ನೋಡಿ . ನಂತರ ನಿಧಾನವಾಗಿ ಮಿತಿಗಳನ್ನು ಇಡಿ. ಅವರ ಲೋಕಕ್ಕೆಹೋಗದೇ ಅವರನ್ನು ಅಲ್ಲಿಂದ ಹೊರತರಲಾರಿರಿ.
3. ಮಕ್ಕಳ ಜೊತೆ ನಂಬಿಕೆ ಬೆಳೆಸಿಕೊಳ್ಳಿ.
4. ಮಕ್ಕಳಿಗೆ ಕೌನ್ಸೆಲಿಂಗ್ ಕೊಡಿಸುವ ಮೊದಲು ಪೋಷಕರು ಕೌನ್ಸೆಲಿಂಗ್ ಪಡೆಯಬೇಕು.
ಮೊಬೈಲ್ ಕಿತ್ತುಕೊಂಡು ಗೇಮಿಂಗ್ ಅಡಿಕ್ಷನ್ ಅನ್ನು ತೆಗೆಯಲಾಗುವುದಿಲ್ಲ . ಪೋಷಕರು ತಮ್ಮ ಮನೆಯೊಳಗಿನ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಂಡಲ್ಲಿ ಮಾತ್ರ ಬಗೆಹರಿಸಬಹುದು.
ಮನೆ ಗುಣಪಟ್ಟಾಗ, ಮಗು ಬೇಗ ಗುಣಪಡುತ್ತದೆ.
(ತುಂಬಾ ಜನ ಪೋಷಕರು ಈಗಲೂ ಮಕ್ಕಳನ್ನು ಹೊಡೆಯುವುದರ ಮೂಲಕ ದಾರಿಗೆ ತರಬಹುದು ಎಂದುಕೊಂಡಿದ್ದಾರೆ. ಆಗಿನ ಕಾಲದಲ್ಲಿ ಹೊಡೆದರೂ ಬಡಿದರೂ ಪೋಷಕರನ್ನು ಬಿಟ್ಟರೆ ಬೇರೆಯವರು ಇಲ್ಲ ಎಂಬ ಅರಿವು ಇರುತ್ತಿತ್ತು. ಜೊತೆಗೆ ಪೋಷಕರ ಹಣಕಾಸಿನ ಸ್ಥಿತಿಯೂ ಮಕ್ಕಳಿಗೆ ಭವಿಷ್ಯದ ಬಗ್ಗೆ ಭಯ ಮತ್ತು ಓದಿ ಹಣ ಸಂಪಾದಿಸುವ ಛಲ ತರುತ್ತಿತ್ತು. ಆದರೆ ಈಗ ಹೊಡೆಯುವುದಿರಲಿ. , ಒಂದು ಮಾತು ಬೈದರೂ ಆತ್ಮ* ಹ*ತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುವ ಮಕ್ಕಳೇ ಜಾಸ್ತಿ . ಹಾಗಾಗಿ ಹೊಡೆತ ಬಡಿತದ ದಾರಿ ಹುಡುಕುವುದು ತಪ್ಪಾದೀತು.)
ಪೋಷಕರೇ ಗಮನಿಸಿ
ನಿಮ್ಮ ಮಗು ಸದಾ ಮೊಬೈಲ್ ಹಿಡಿದಿರುತ್ತೆ, ಮೊಬೈಲ್ ಗಾಗಿ ಹಟ ಮಾಡುತ್ತೆ, ಗೇಮಿಂಗ್ ವ್ಯಸನದ ಗೀಳಿನ ಅಪಾಯದಲ್ಲಿದೆ ಎನಿಸಿದರೆ ನಿರ್ಲಕ್ಷಿಸಬೇಡಿ. ನಿಮ್ಮ ಹತ್ತಿರದ ಆಪ್ತಸಮಾಲೋಚಕರ ನೆರವು ಪಡೆಯಿರಿ. ಡಾ ರೂಪಾ ರಾವ್ ಅವರ ಸಂಪರ್ಕ ಸಂಖ್ಯೆ: 97408 66990.
-
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications