Mesha Sankranti 2025: ಮೇಷ ಸಂಕ್ರಾಂತಿ- ಇಂದು ಈ ವಸ್ತುಗಳನ್ನು ದಾನ ಮಾಡಿ
ಇಂದು ಬಹಳ ವಿಶೇಷವಾದ ದಿನ. ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಈ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಮೇಷ ಸಂಕ್ರಾಂತಿಯು ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಏಪ್ರಿಲ್ 14ರಂದು ಶುಭ ಸಮಯ ಬೆಳಿಗ್ಗೆ 05:17 ರಿಂದ ಬೆಳಿಗ್ಗೆ 11:37 ರವರೆಗೆ ಇರುತ್ತದೆ. ಈ ಸಮಯದಲ್ಲಿ ಸೂರ್ಯದೇವರನ್ನು ಪೂಜಿಸುವುದು ತುಂಬಾ ಶುಭ ಫಲಗಳನ್ನು ನೀಡುತ್ತದೆ.
ಭಕ್ತರು ಗಂಗಾ, ಜಮುನಾ ಮತ್ತು ಗೋದಾವರಿ ನದಿಗಳ ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಅಲ್ಲದೆ ಈ ದಿನ 'ಪಾನ' ಎಂಬ ನಿರ್ದಿಷ್ಟ ಪಾನೀಯವನ್ನು ತಯಾರಿಸಲಾಗುತ್ತದೆ. ಇದನ್ನು ನೀಡಿ ಎಲ್ಲರೂ ಸೇವಿಸುತ್ತಾರೆ. ಈ ದಿನದ ಪ್ರಯೋಜನಗಳನ್ನು ಪಡೆಯಲು ಶುಭ ಮಹೂರ್ತದಲ್ಲಿ ದಾನದಂತಹ ಪುಣ್ಯದ ಕೆಲಸಗಳನ್ನು ಮಾಡಲಾಗುತ್ತದೆ. ಈ ದಿನದಂದು ದಾನ ಧರ್ಮಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಾಡಿದ ದಾನ ದೇವರ ಮೆಚ್ಚಿಗೆ ಪಡೆದುಕೊಳ್ಳಲಿದೆ. ಹಾಗಾದರೆ ಯಾವ ವಸ್ತುಗಳನ್ನು ಈ ದಿನ ದಾನ ಮಾಡುವುದು ಶುಭ ಎಂದು ತಿಳಿಯೋಣ.

* ಈ ದಿನ ಕಲ್ಲಂಗಡಿ, ಹೂಜಿ, ಶರಬತ್ತು, ನೀರು ಮುಂತಾದವುಗಳನ್ನು ದಾನವಾಗಿ ನೀಡಿದರೆ ಶುಭವೆಂದು ಪರಿಗಣಿಸಲಾಗುತ್ತದೆ.
*ಏಪ್ರಿಲ್ 14 ರಂದು ನೀವು ನಿಮ್ಮ ಇಚ್ಛೆಯಂತೆ ಸಕ್ಕರೆ, ಬೆಲ್ಲ, ಮಾವು ಮತ್ತು ಮಾವಿನ ಹಣ್ಣಿನ ಸಿಹಿ ಇತ್ಯಾದಿಗಳನ್ನು ದಾನ ಮಾಡಬಹುದು.
*ಈ ದಿನದಂದು ಬಟ್ಟೆ, ಅಗತ್ಯ ಇರುವ ವಸ್ತುಗಳನ್ನು ದಾನ ಮಾಡುವುದನ್ನು ಸಹ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಹಬ್ಬದಂದು ಬಾರ್ಲಿ(ಜವೆ) ಯನ್ನು ದಾನ ಮಾಡುವುದು ಚಿನ್ನವನ್ನು ದಾನ ಮಾಡಿದ್ದಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ.
*ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯು ರೋಗಗಳಿಂದ ಮುಕ್ತನಾಗುತ್ತಾನೆ. ಮೇಷ ಸಂಕ್ರಾಂತಿಯ ಕಾರಣ ಈ ದಿನದಂದು ಪೂಜೆ, ಜಪ, ತಪಸ್ಸು, ದಾನ ಮತ್ತು ಸ್ನಾನ-ಧ್ಯಾನದ ಆಚರಣೆ ಇರುತ್ತದೆ.
*ಮೇಷ ಸಂಕ್ರಾಂತಿಯಂದು ಬೇಳೆ, ಗೋಧಿ, ಬೆಲ್ಲ, ಅಕ್ಕಿ ಮತ್ತು ಕೆಂಪು ಬಣ್ಣಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬಹುದು.
ರೈತರು ತಾವು ಪಡೆದ ಉತ್ತಮ ಫಸಲಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಭೂಮಿ ತಾಯಿ ಸೂರ್ಯ ದೇವನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಭಾರತದ ಅನೇಕ ಪ್ರದೇಶಗಳಲ್ಲಿ ಈ ದಿನದಂದು ಮೊದಲ ಬಿತ್ತನೆ ಚಕ್ರ ಪ್ರಾರಂಭವಾಗುತ್ತದೆ.












Click it and Unblock the Notifications