Mango Chicken Pepper Fry Recipe: ಮಾವಿನಕಾಯಿ ಚಿಕನ್ ಪೆಪ್ಪರ್ ಫ್ರೈ ರೆಸಿಪಿ: ಹುಳಿ ಖಾರ ಹಾಹಾ... ತಿಂದರೇನು ಮಜಾ...
ಸಾಮಾನ್ಯವಾಗಿ ನಾವು ವಾರಾಂತ್ಯದಲ್ಲಿ ತಡವಾಗಿ ಎದ್ದೇಳುತ್ತೇವೆ. 11 ಅಥವಾ 12 ಗಂಟೆಗೆ ತಿಂಡಿ ತಿಂದು ನಂತರ ಅಡುಗೆ ಮಾಡಲು ಶುರು ಮಾಡುತ್ತೇವೆ. ಮಧ್ಯಾಹ್ನದ ಊಟ ಬಹುತೇಕರ ಮನೆಯಲ್ಲಿ ತಡವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ಯಾರೆಲ್ಲಾ ತಡವಾಗಿ ಮಾಂಸಾಹಾರ ಮಾಡಲು ಶುರು ಮಾಡಿದ್ದೀರೋ ಅವರಿಗೆಲ್ಲಾ ರುಚಿಯಾದ ಪಾಕವಿಧಾನವನ್ನು ನಾವು ಹೇಳಿ ಕೊಡಲಿದ್ದೇವೆ. ಅದುವೇ ಮಾವಿನಕಾಯಿ ಚಿಕನ್ ಪೆಪ್ಪರ್ ಫ್ರೈ.
ಹೆಸರಿಗೆ ತಕ್ಕಂತೆ ಇದರಲ್ಲಿ ಮಾವಿನಕಾಯಿಯನ್ನು ಬಳಸಲಾಗುತ್ತದೆ. ಹೀಗಾಗಿ ಇದರ ರುಚಿ ಮತ್ತಷ್ಟು ಹೆಚ್ಚಾಗಲಿದೆ. ಇದು ಮಾವಿನ ಸೀಸನ್ ಆಗಿರುವುದರಿಂದ ಮನೆಯಲ್ಲಿ ಮಾವಿನ ಕಾಯಿ ಇದ್ದೇ ಇರುತ್ತದೆ. ಹಾಗಾದರೆ ತಡ ಮಾಡುವುದೇ ಬೇಡ. ಮಾವಿನಕಾಯಿ ಚಿಕನ್ ಪೆಪ್ಪರ್ ಫ್ರೈ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ನೀವು ಕೂಡ ಮನೆಯಲ್ಲಿ ಇದನ್ನ ಒಮ್ಮೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ಹುಳಿ ಖಾರದೊಂದಿಗೆ ಚಿಕನ್ ಫ್ರೈ ಮಾಡಲು ಶುರು ಮಾಡೋಣ.
ಮಾವಿನಕಾಯಿ ಚಿಕನ್ ಪೆಪ್ಪರ್ ಫ್ರೈ ತಯಾರಿಸಲು ಬೇಕಾಗುವ ಪದಾರ್ಥಗಳು:
* ಚಿಕನ್ ಒಂದು ಕೆಜಿ (ಉದ್ದಕೆ ಹೆಚ್ಚಿದ)
* ಮಾವಿನ ಕಾಯಿ ಒಂದು (ಚಿಕ್ಕ ಗಾತ್ರ)
* ಖಾರದ ಪುಡಿ 3 ಟೇಬಲ್ ಸ್ಪೂನ್
* ಕಾಳುಮೆಣಸು ಪುಡಿ ಸ್ವಲ್ಪ
* ಲವಂಗ 3
* ಶುಂಠಿ- ಅರ್ಧ tbsn ತುಂಡು
* ಬೆಳ್ಳುಳ್ಳಿ ಸ್ವಲ್ಪ
* ಕರಿಬೇವು ಸ್ವಲ್ಪ
* ಲಿಂಬೆ ಹಣ್ಣು 1
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಸ್ವಲ್ಪ
* ಎಣ್ಣೆ

ತಯಾರಿಸುವ ವಿಧಾನ:
*ಮೊದಲಿಗೆ ಚಿಕನ್ ಚೆನ್ನಾಗಿ ತೊಳಿದು ಅದಕ್ಕೆ ಲಿಂಬೆ ಹಣ್ಣಿನ ರಸವನ್ನು ಹಿಂಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಹದಿನೈದು ನಿಮಿಷ ಮುಚ್ಚಿಡಿ.
* ಒಂದು ತವಾ ಮೇಲೆ ಹೆಚ್ಚೂ ಎಣ್ಣೆ ಹಾಕಿ ಬಿಸಿಯಾದ ಬಳಿಕ ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದು ಬಿಡಿ.
* ಆ ಎಣ್ಣೆಗೆ ಚೆಳ್ಳುಳ್ಳಿ ಹಾಕಿ ಫ್ರೈ ಮಾಡಿ ತೆಗೆಯಿರಿ. ನಂತರ ಅದೇ ಎಣ್ಣೆಗೆ ಚಿಕನ್ ತುಂಡುಗಳನ್ನು ಸಣ್ಣ ಉರಿಯಲ್ಲಿ ಎರಡೂ ಬದಿ ಚೆನ್ನಾಗಿ ಬೇಯಿಸಿ.
* ಚಿಕನ್ ಬೆಂದ ನಂತರ ಇದಕ್ಕೆ ಖಾರದ ಪುಡಿ, ಕಾಳುಮೆಣಸು ಪೌಡರ್, ಲವಂಗ, ಶುಂಠಿ, ಅರಿಶಿಣ ಹಾಕಿ ಚೆನ್ನಾಗಿ ಕಲಸಿ. ಬಳಿಕ ಇದಕ್ಕೆ ಉದ್ದಕೆ ಹೆಚ್ಚಿದ ಮಾವಿನ ಕಾಯಿ ತುಂಡುಗಳನ್ನು ಹಾಕಿ. ಅದರಿಂದ ಹತ್ತು ನಿಮಿಷಗಳ ಕಾಲ ಪಾತ್ರೆ ಮುಚ್ಚಿ ಬಿಡಿ.
* ಇದರಲ್ಲಿ ನೀರು ಅವಶ್ಯಕತೆ ಇದ್ದಲ್ಲಿ ಮಾತ್ರ ಹಾಕಿಕೊಳ್ಳಿ. ಇಲ್ಲವಾದಲ್ಲಿ ಬೇಡ. ಕೊನೆಯಲ್ಲಿ ಫ್ರೈ ಮಾಡಿದ ಬೆಳ್ಳುಳ್ಳಿ ಹಾಗೂ ಕರಿಬೇವಿನ ಎಲೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಮಾವಿನಕಾಯಿ ಚಿಕನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.












Click it and Unblock the Notifications