Majjige Menasinakai Recipe: ಮಜ್ಜಿಗೆ ಮೆಣಸಿನಕಾಯಿ ರೆಸಿಪಿ: ತಿಂದರೆ ಖಾರ, ಹುರಿದರೆ ಘಮ ಘಮ
ಬೇಸಿಗೆ ಬಂತು ಬೇಗ ಬೇಗ ಮಜ್ಜಿಗೆ ಮೆಣಸಿನಕಾಯಿ ಹಾಕಲು ರೆಡಿ ಮಾಡಿಕೊಳ್ಳಿ. ಯಾಕೆಂದರೆ ಇದನ್ನು ಒಂದು ಬಾರಿ ಮನೆಯಲ್ಲಿ ಮಾಡಿ ಇಟ್ಟುಕೊಂಡರೆ ಸಾಕು ವರ್ಷವಿಡೀ ತಿನ್ನಬಹುದು. ಹಾಗಾದರೆ ಮಜ್ಜಿಗೆ ಮೆಣಸಿನಕಾಯಿ ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.
ಸಾಮಾನ್ಯವಾಗಿ ಅಂಗಡಿಗಳಲ್ಲಿ ಮಜ್ಜಿಗೆ ಮೆಣಸಿನಕಾಯಿ ಸಿಗುತ್ತದೆ. ಆದರೆ ಅದರಲ್ಲಿ ಹೆಚ್ಚು ಉಪ್ಪು ಇರುವುದರಿಂದ ಅದನ್ನು ಸೇವಿಸಲು ರುಚಿ ಬರುವುದಿಲ್ಲ. ಆದರೆ ಮನೆಯಲ್ಲೇ ಮಾಡುವ ಮಜ್ಜಿಗೆ ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ರುಚಿ ಕೂಡ ಅದ್ಭುತವಾಗಿರುತ್ತದೆ. ಹಾಗಾದರೆ ತಡ ಮಾಡುವುದು ಬೇಡ ಮಜ್ಜಿಗೆ ಮೆಣಸಿನಕಾಯಿ ಮನೆಯಲ್ಲಿ ತಯಾರಿಸುವುದು ಹೇಗೆ ಎನ್ನುವುದುನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಮೆಣಸಿನಕಾಯಿ 30
* ಜೀರಿಗೆ 3 ಟೇಬಲ್ ಸ್ಪೂನ್
* ಮೊಸರು ಅರ್ಧ ಲೀಟರ್
* ಉಪ್ಪು ಒಂದು ಟೇಬಲ್ ಸ್ಪೂನ್
* ಎಣ್ಣೆ ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ:-
* ಮೆಣಸಿನಕಾಯಿಯನ್ನು ಮೊದಲಿಗೆ ಚೆನ್ನಾಗಿ ತೊಳೆದು ಒಣಗಲು ಬಿಡಿ.
* ನಂತರ ಅದನ್ನು ಸೀಳಿಕೊಂಡು ಸ್ವಲ್ಪ ಹೊತ್ತು ಹರಡಿ ಬಿಡಿ
* ಜೀರಿಗೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಇದ್ದಕ್ಕೆ ಉಪ್ಪನ್ನು ಮಿಶ್ರಣ ಮಾಡಿ
* ಬಳಿಕ ಮೊಸರನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪ ಉಪ್ಪು ಮಿಶ್ರಣ ಮಾಡಿ
* ನಂತರ ಸೀಳಿದ ಮೆಣಸಿನಕಾಯಿ ತೆಗೆದುಕೊಂಡು ಅದರ ಒಳಗೆ ಜೀರಿಗೆ ಉಪ್ಪು ಮಿಶ್ರಣವನ್ನು ಸ್ವಲ್ಪ ಮಾತ್ರ ತುಂಬಿ
* ನಂತರ ಜೀರಿಗೆ ಪುಡಿ ತುಂಬಿದ ಮೆಣಸಿನಕಾಯಿಗಳನ್ನು ಮಜ್ಜಿಗೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
* ಬಳಿಕ ಅವುಗಳನ್ನು ತೆಗೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.
* ಇದಾದ ನಂತರ ಎಣ್ಣೆಯಲ್ಲಿ ಉರಿದರೆ ಮಜ್ಜಿಗೆ ಮೆಣಸಿನಕಾಯಿ ಸವಿಯಲು ಸಿದ್ಧ
ಮಜ್ಜಿಗೆ ಮೆಣಸಿನಕಾಯಿಗಳನ್ನು ಅನ್ನ-ಸಾಂಬರ್, ಹೋಳಿಗೆ, ಮಂಡಕ್ಕಿ ಮಿರ್ಚಿ ಇನ್ನಿತರ ಯಾವುದೇ ಖಾದ್ಯದೊಂದಿಗೆ ಸವಿಯಬಹುದು. ಈ ಮೆಣಸಿನಕಾಯಿ ಹುರಿದಾಗ ಬರುವ ಪರಿಮಳದಷ್ಟೇ ರುಚಿ ಕೂಡ ಅದ್ಭುತವಾಗಿರುತ್ತದೆ.












Click it and Unblock the Notifications