Krishna Janmashtami 2023: ಈ 5 ವಸ್ತುಗಳಿಂದ ಕೃಷ್ಣನನ್ನು ಪೂಜಿಸಿದರೆ ನಿಮ್ಮ ಪಾಪಗಳು ತೊಲಗುತ್ತವೆ...!
ಕೊಳಲು ನಾದದಿಂದ ಗೋಪಿಕಾ ಸ್ತ್ರೀಯರನ್ನು ಸೆಳೆದ ಗೋಪಿ. ಬೆಣ್ಣೆ ಕದ್ದು ತುಂಟತನಕ್ಕೆ ತಾಯಿಯ ನೆಚ್ಚಿನ ಮಗನಾದ ಲೋಲ. ಪಾಪಗಳಿಗೆ ಶಿಕ್ಷೆ ನೀಡಿ, ಜನರನ್ನು ರಕ್ಷಿಸಿದ ಶ್ರೀಕೃಷ್ಣನ ಜನ್ಮ ದಿನ ಬಂದೇ ಬಿಡ್ತು.
ಕೃಷ್ಣ ಜಯಂತಿ ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರೀಕೃಷ್ಣ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಎಂಟನೇ ಅವತಾರ. ಬಹುತೇಕ ಹಿಂದೂಗಳಿಗೆ ಕೃಷ್ಣ ನೆಚ್ಚಿನ ದೇವರು. ಅದರಲ್ಲೂ ಉತ್ತರ ಭಾರತದಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಬಹಳ ವೈಭವೋಪೇತವಾಗಿ ಆಚರಿಸುತ್ತಾರೆ.

ಕೃಷ್ಣನು ಭಾದ್ರಪದ ಮಾಸದ ಅಷ್ಟಮಿ ತಿಥಿಯಂದು ಜನಿಸಿದನು. ಈ ದಿನ ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. ಈ ವರ್ಷ ಕೃಷ್ಣ ಜಯಂತಿ ಸೆಪ್ಟೆಂಬರ್ 6ರಂದು ಬಂದಿದೆ. ದೇಶದೆಲ್ಲೆಡೆ ಈ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
ಈ ದಿನ ಶ್ರೀ ಕೃಷ್ಣನಿಗೆ ಪ್ರೀತಿ, ನಂಬಿಕೆ ಮತ್ತು ಸಕಾರಾತ್ಮಕ ಉದ್ದೇಶದಿಂದ ಏನೇ ಅರ್ಪಿಸಿದರೂ ಎಲ್ಲವನ್ನೂ ಸ್ವೀಕರಿಸಿ ಆಶೀರ್ವದಿಸುತ್ತಾನೆ. ಆದಾಗ್ಯೂ ಶ್ರೀಕೃಷ್ಣ ತುಂಬಾ ಇಷ್ಟಪಡುವ ಕೆಲವು ವಸ್ತುಗಳಿವೆ. ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಆತನ ಆಶೀರ್ವಾದವನ್ನು ಪಡೆಯಬಹುದು. ಹಾಗಾದರೆ ಆ ವಸ್ತುಗಳು ಯಾವವು ಎಂದು ತಿಳಿಯೋಣ.
ಬೆಣ್ಣೆ
ಹೆಸರೇ ಹೇಳುವಂತೆ ಬೆಣ್ಣೆ ಕದಿಯುವ ಕೃಷ್ಣನಿಗೆ ಬೆಣ್ಣೆ ಅಂದರೆ ತುಂಬಾ ಇಷ್ಟ. ಕೃಷ್ಣನ ಬೆಣ್ಣೆಯ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಅವನ ಕೃಷ್ಣ ಲೀಲೆ ಬೆಣ್ಣೆಯೊಂದಿಗಿನ ಅವನ ಒಡನಾಟದಿಂದ ತುಂಬಿದೆ. ಇದು ಭಕ್ತ ಮತ್ತು ಭಗವಂತನ ನಡುವೆ ಸುಂದರವಾದ ಮತ್ತು ಉತ್ಸಾಹಭರಿತ ಸಂಪರ್ಕವನ್ನು ಸೃಷ್ಟಿಸುತ್ತದೆ.

ಕೃಷ್ಣ ಜಯಂತಿಯಂದು ಬೆಣ್ಣೆಯೊಂದಿಗೆ ಶ್ರೀ ಕೃಷ್ಣನನ್ನು ಪೂಜಿಸುವುದರಿಂದ ನಿಮ್ಮ ಬೌದ್ಧಿಕ ಸಾಮರ್ಥ್ಯ ಸುಧಾರಿಸುತ್ತದೆ ಮತ್ತು ಜೀವನದಲ್ಲಿ ಶಾಂತಿಯನ್ನು ತರುತ್ತದೆ.
ಕಮಲದ ಬೀಜಗಳು
ಕಮಲದ ಬೀಜಗಳನ್ನು ಸೇರಿಸಿದ ಪಾಯಸವು ಶ್ರೀ ಕೃಷ್ಣನಿಗೆ ಪ್ರಿಯವಾದ ಮತ್ತೊಂದು ಸಿಹಿ ಖಾದ್ಯವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕಮಲದ ಬೀಜಗಳು ಗುರು ಮತ್ತು ಶುಕ್ರರಿಂದ ಆಳಲ್ಪಡುತ್ತದೆ ಮತ್ತು ಅದನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದರಿಂದ ನೀವು ಜೀವನದ ಪ್ರತಿಯೊಂದು ಅಂಶದಲ್ಲಿ ಹೆಸರು, ಕೀರ್ತಿ ಮತ್ತು ಸಂಪತ್ತನ್ನು ಹೊಂದುವಿರಿ.
ರಕ್ಷಾ ಸೂತ್ರ
ಹೆಸರೇ ಸೂಚಿಸುವಂತೆ ಇದು ಮನುಷ್ಯನ ಸುತ್ತ ದೈವಿಕ ರಕ್ಷಣೆಯನ್ನು ಒದಗಿಸುವ ಪವಿತ್ರ ರಕ್ಷಣಾ ಸೂತ್ರವಾಗಿದೆ. ಮಹಾಭಾರತದಲ್ಲಿ ದ್ರೌಪದಿ ಶ್ರೀ ಕೃಷ್ಣನಿಗೆ ಬಟ್ಟೆಯನ್ನು (ರಕ್ಷಾ ಸೂತ್ರದ ಆಕಾರದಲ್ಲಿ) ಕಟ್ಟಿದಳು. ಕೃಷ್ಣ ಜನ್ಮಾಷ್ಟಮಿಯಂದು ಅದನ್ನು ಶ್ರೀಕೃಷ್ಣನಿಗೆ ಒಪ್ಪಿಸುವುದು ಶ್ರೀಕೃಷ್ಣನೊಂದಿಗೆ ಬಲವಾದ ಸಂಬಂಧವನ್ನು ಸೃಷ್ಟಿಸುತ್ತದೆ. ಎಲ್ಲಾ ಹತಾಶ ಸಂದರ್ಭಗಳಲ್ಲಿ ದೇವರು ಬಂದು ರಕ್ಷಿಸುತ್ತಾನೆ ಎಂಬ ಭರವಸೆಯನ್ನು ನೀಡುತ್ತದೆ. ಸರ್ವಶಕ್ತನೊಂದಿಗಿನ ಈ ಪವಿತ್ರ ಬಂಧವು ನಿಮಗೆ ಬಲವಾದ ರಕ್ಷಣೆ ನೀಡುತ್ತದೆ.
ಪಂಚಾಮೃತ
ಪಂಜಾಮೃತವನ್ನು ಹಸುವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಬೆಲ್ಲದಿಂದ ಮಾಡಿದ ಪವಿತ್ರ ನೈವೇದ್ಯವಾಗಿದೆ. ಪಂಚಾಮೃತವನ್ನು ಪ್ರಸಾದವಾಗಿ ಮತ್ತು ದಕ್ಷಿಣಾವರ್ತಿ ಸಂಘದಿಂದ ಶ್ರೀಕೃಷ್ಣನಿಗೆ ಅಭಿಷೇಕವಾಗಿ ಬಳಸಬಹುದು. ಅಲ್ಲದೆ ಶ್ರೀ ಕೃಷ್ಣನ ಪಂಚಾಮೃತ ಅಭಿಷೇಕದ ನಂತರ ಗುಲಾಬಿ ದಳಗಳು ಮತ್ತು ತುಳಸಿ ಎಲೆಗಳನ್ನು ಬೆರೆಸಿದ ಗಂಗಾಜಲವನ್ನು ಸಹ ಅಭಿಷೇಕ ಮಾಡಬಹುದು. ಶ್ರೀಕೃಷ್ಣನಿಗೆ ಪಂಚಾಮೃತವನ್ನು ಅಭಿಷೇಕಿಸಿ ಪ್ರಸಾದವಾಗಿ ಅರ್ಪಿಸುವುದರಿಂದ ಅವರಿಗೆ ಜೀವನದಲ್ಲಿ ಬೇಕಾದ ಎಲ್ಲವನ್ನೂ ಶ್ರೀಕೃಷ್ಣ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ.
ಹಳದಿ ಹಣ್ಣುಗಳು ಮತ್ತು ಬಟ್ಟೆ
ಹಳದಿ ಬಣ್ಣ ಗುರುಗ್ರಹದಿಂದ ಆಳಲ್ಪಡುತ್ತದೆ. ಗುರುವು ವ್ಯಕ್ತಿಯ ಜೀವನದಲ್ಲಿ ಬೌದ್ಧಿಕ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗೆ ಕಾರಣವಾಗಿದೆ. ಕೃಷ್ಣ ಜಯಂತಿಯಂದು ಶ್ರೀ ಕೃಷ್ಣನಿಗೆ ಹಳದಿ ಹಣ್ಣುಗಳು ಮತ್ತು ಬಟ್ಟೆಗಳನ್ನು ಅರ್ಪಿಸುವುದು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ. ಮಾವು ಮತ್ತು ಬಾಳೆಹಣ್ಣಿನಂತಹ ಹಳದಿ ಹಣ್ಣುಗಳು ಮತ್ತು ಹಳದಿ ಬಟ್ಟೆಗಳನ್ನು ಶ್ರೀ ಕೃಷ್ಣನಿಗೆ ಇಟ್ಟು ಪೂಜಿಸಬಹುದು. ಪೂಜೆಯ ನಂತರ ಈ ವಸ್ತುಗಳನ್ನು ಚಿಕ್ಕ ಮಕ್ಕಳಿಗೆ ದಾನ ಮಾಡಬೇಕು ಮತ್ತು ಇದು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications