Khaju Masala Curry Recipe: ಖಾಜು ಮಸಾಲ ಕರಿ ರೆಸಿಪಿ- ತಯಾರಿಸಿ ತಿನ್ನಲು ಮರೆಯದಿರಿ
ಹೋಟೆಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಯಾವುದೇ ಖಾದ್ಯ ತೆಗೆದುಕೊಂಡರು ದುಬಾರಿಯಾಗಿರುತ್ತದೆ. ಆದರೆ ಅದೇ ರುಚಿಯಲ್ಲಿ ಮನೆಯಲ್ಲಿ ನೀವಿಷ್ಟಪಡುವ ಖಾದ್ಯವನ್ನು ತಯಾರಿಸಿದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ಇವತ್ತು ಹೋಟೆಲ್ ಸ್ಟೈಲ್‌ನಲ್ಲಿ ಖಾಜು ಮಸಾಲ ಕರಿ ಮಾಡೋ ರೆಸಿಪಿಯನ್ನು ತಿಳಿದುಕೊಳ್ಳೋಣ.
ಈ ಖಾಜು ಮಸಾಲ ಕರಿ ಚಪಾತಿ, ರೋಟಿ, ನಾನ್ ಜೊತೆಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇದನ್ನು ಮನೆಯಲ್ಲಿ ತಯಾರಿಸಿದರೆ ತುಂಬಾ ಖರ್ಚಾಗುವುದಿಲ್ಲ. ಹೋಟೆಲ್‌ನಲ್ಲಿ ಒಂದು ಖಾಜು ಮಸಾಲ ಕರಿಗೆ ನೀಡುವ ಹಣದಲ್ಲಿ ನೀವು ಮನೆ ಮಂದಿಗೆಲ್ಲಾ ಖಾಜು ಮಸಾಲ ಕರಿ ತಯಾರಿಸಬಹುದು. ಹಾಗಾದರೆ ತಡ ಮಾಡುವುದು ಬೇಡ ಖಾಜು ಮಸಾಲ ಕರಿ ಮನೆಯಲ್ಲಿ ತಯಾರಿಸುವುದು ಹೇಗೆ ಎಂದು ತಿಳಿಯೋಣ. ಇದಕ್ಕೆ ಬೇಕಾಗಿರುವ ಪದಾರ್ಥಗಳು ಹೀಗಿವೆ:-

ಬೇಕಾಗಿರುವ ಪದಾರ್ಥಗಳು:-
* ಗೋಡಂಬಿ ಒಂದು ಕಪ್
* ಈರುಳ್ಳಿ ಮೂರು
* ತುಪ್ಪ
* ಏಲಕ್ಕಿ ಮೂರು
* ಪಲಾವ್ ಎಲೆ ಒಂದು
* ಚಕ್ಕೆ ಒಂದು ಇಂಚು
* ಜೀರಿಗೆ ಅರ್ಧ ಟೇಬಲ್ ಸ್ಪೂನ್
* ಬೆಳ್ಳುಳ್ಳಿ ಒಂದು
* ಹಸಿ ಮೆಣಸಿನಕಾಯಿ ಮೂರು
* ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಟೊಮ್ಯಾಟೋ ಎರಡು
* ದನಿಯಾ ಪುಡಿ ಒಂದು ಟೇಬಲ್ ಸ್ಟೋನ್
* ಖಾರದ ಪುಡಿ ಒಂದು ಟೇಬಲ್ ಸ್ಟೋನ್
* ಉಪ್ಪು ರುಚಿಗೆ ತಕ್ಕಷ್ಟು
* ಕಸೂರಿ ಮೇಥಿ ಸ್ವಲ್ಪ
* ಗರಂ ಮಸಾಲಾ ಒಂದು ಟೇಬಲ್ ಸ್ಪೂನ್
* ಬೆಣ್ಣೆ ಎರಡು ಟೇಬಲ್ ಸ್ಪೂನ್
ತಯಾರಿಸುವ ವಿಧಾನ:-
* ಒಂದು ಕಪ್ ಗೋಡಂಬಿ ತೆಗೆದುಕೊಂಡು ಕಿಕ್ಕರ್‌ಗೆ ಹಾಕಿ ಅದಕ್ಕೆ ಎರಡು ಕಪ್ ನೀರು ಹಾಗೂ ಕಟ್ ಮಾಡಿದ ಎರಡು ಈರುಳ್ಳಿ ಹಾಕಿ ಮುಚ್ಚಳ ಮುಚ್ಚಿ ಎರಡು ವಿಸಿಲ್ ಬರುವವರೆಗೆ ಬಿಡಿ.
* ಬಳಿಕ ನೀರನ್ನು ಸೋಸಿಕೊಂಡು ಗೋಡಂಬಿ ಹಾಗೂ ಈರುಳ್ಳಿಯನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಬೇಕು.
* ನಂತರ ಈ ಈರುಳ್ಳಿ ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.
* ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಟೇಬಲ್ ಸ್ಪೂನ್ ತುಪ್ಪ ಹಾಕಿ ಹತ್ತರಿಂದ ಹದಿನೈದು ಗೋಡಂಬಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಇದನ್ನು ತೆಗೆದು ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಿ.
* ಇದಾದ ನಂತರ ಅದೇ ತುಪ್ಪದಲ್ಲಿ ಮೂರು ಏಲಕ್ಕಿ, ಪಲಾವ್ ಎಲೆ, ಚಕ್ಕೆ, ಜೀರಿಗೆ ಹಾಕಿ ಫ್ರೈ ಮಾಡಿ
* ನಂತರ ಇದಕ್ಕೆ ಸಣ್ಣಕೆ ಹೆಚ್ಚಿದ ಐದು ಎಸಳು ಬೆಳ್ಳುಳ್ಳಿ, ಸಣ್ಣಕೆ ಕಟ್ ಮಾಡಿದ ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ.
* ನಂತರ ಇದಕ್ಕೆ ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಹಾಕಿ ಬಾಡಿಸಿ.
* ಬಳಿಕ ಇದಕ್ಕೆ ಒಂದು ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು. ಹಸಿ ವಾಸನೆ ಹೋಗುವವರೆಗೂ ಬಾಡಿಸಿಕೊಳ್ಳಬೇಕು.
* ನಂತರ ಎರಡು ಕಟ್ ಮಾಡಿದ ಟೊಮ್ಯಾಟೋ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು.
* ಇದಾದ ಮೇಲೆ ದನಿಯಾ ಪುಡಿ, ಖಾರದ ಪುಡಿ ಹಾಕಬೇಕು.
* ಬಳಿಕ ರುಬ್ಬಿದ ಗೋಡಂಬಿ ಪೇಸ್ಟ್ ಅನ್ನು ಹಾಕಿ ಸ್ವಲ್ಪ ನೀರು ಸೇರಿಸಿ.
* ನಂತರ ರುಚಿಗೆ ತಕ್ಕಷ್ಟು ಉಪ್ಪು, ಕಸೂರಿ ಮೇಥಿ ಹಾಕಿ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಲು ಬಿಡಿ.
* ಗರಂ ಮಸಾಲಾ, ಬೆಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿ, ಹುರಿದಿಟ್ಟ ಗೋಡಂಬಿ ಹಾಕಿದರೆ ರುಚಿ ರುಚಿಯಾದ ಖಾಜು ಮಸಾಲ ಕರಿ ಸವಿಯಲು ಸಿದ್ಧ.












Click it and Unblock the Notifications