ನೀವು ಇಡ್ಲಿ, ದೋಸೆ ಪ್ರಿಯರೇ ಗಮನಿಸಿ ಈ ತಪ್ಪುಗಳನ್ನು ಮಾಡಲೇಬೇಡಿ!
ನೀವು ಇಡ್ಲಿ ಅಥವಾ ದೋಸೆ ಪ್ರಿಯರೇ ಹಾಗಾದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. ಇಡ್ಲಿ ಹಾಗೂ ದೋಸೆಗೆ ಅಪಾರ ಪ್ರಮಾಣದ ಅಭಿಮಾನಿ ಬಳಗವೇ ಇದೆ. ಆದರೆ ಇಡ್ಲಿ ಹಾಗೂ ದೋಸೆಯ ಹಿಟ್ಟನ್ನು ತಯಾರಿಸುವಾಗ ಯಾವುದೇ ಕಾರಣಕ್ಕೂ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಿದ್ದಾರೆ ವೈದ್ಯರು. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಬಳಸುವ ವಿಧಾನದಲ್ಲಿ ತಪ್ಪಗಳು ನಡೆಯುತ್ತಿದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳು ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಇಡ್ಲಿ ಮತ್ತೆ ದೋಸೆ ಎರಡೂ ಬ್ರೇಕ್‌ಫಾಸ್ಟ್‌ಗೆ ಒಳ್ಳೆಯ ಆಹಾರವಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಸಹ ಇವೆ. ಆದರೆ ಇದರ ಹಿಟ್ಟನ್ನು ಬಳಸುವ ವಿಧಾನದಲ್ಲಿ ನೀವು ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಅದೇನು ಎನ್ನುವ ವಿವರ ಇಲ್ಲಿದೆ.
ಇಡ್ಲಿ ಹಾಗೂ ದೋಸೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಆಹಾರ ಪದ್ಧತಿಗಳಲ್ಲಿ ಒಂದಾಗಿದೆ. ಇಡ್ಲಿ ಮತ್ತೆ ದೋಸೆಯಲ್ಲಿ ಹಲವು ಉತ್ತಮ ಪೋಷಕಾಂಶಗಳಿವೆ. ಅಲ್ಲದೆ ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು ಕೂಡ. ಆದರೆ ಈ ಹಿಟ್ಟನ್ನು ನೀವು ಬಳಸುವ ವಿಧಾನದಲ್ಲಿ ತಪ್ಪು ಮಾಡಿದರೆ ಆರೋಗ್ಯ ಕೈಕೊಡುವ ಸಾಧ್ಯತೆ ಹೆಚ್ಚಾಗಿದೆ. ಇಷ್ಟಕ್ಕೂ ಈ ಹಿಟ್ಟನ್ನು ಯಾವ ರೀತಿ ಬಳಸಬಾರದು ಹಾಗೂ ಯಾವ ರೀತಿ ಬಳಸಿದರೆ ಉತ್ತಮ ಎನ್ನುವ ಗೊಂದಲಗಳಿಗೆ ಇಲ್ಲಿ ನಿಮಗೆ ಸರಳವಾದ ಉತ್ತರ ನೋಡೋಣ...

ದೋಸೆ ಹಾಗೂ ಇಡ್ಲಿ ಹಿಟ್ಟು ಬಳಕೆಯಲ್ಲಿ ತಪ್ಪು
ದೋಸೆ ಹಾಗೂ ಇಡ್ಲಿ ಈಗಾಗಲೇ ಹೇಳಿರುವಂತೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಾಗಿದೆ. ಆದರೆ ಈ ಹಿಟ್ಟು ಬಳಸುವಾಗ ನೀವು ಕೆಲವೊಂದು ಸರಳ ಹಾಗೂ ಕಡ್ಡಾಯ ಮಾರ್ಗಗಳನ್ನು ಅನುಸರಿಸಬೇಕು. ಟೈಮಿಲ್ಲ ಅಂತ ಕೆಲವರು ದೋಸೆ ಹಾಗೂ ಇಡ್ಲಿ ಹಿಟ್ಟನ್ನು ರುಬ್ಬಿ ವಾರಗಟ್ಟಲೆ ಬಳಸುತ್ತಿದ್ದಾರೆ. ಫ್ರಿಡ್ಜ್‌ನಲ್ಲಿ ಈ ರೀತಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾಡಿಕೊಂಡು ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೋಸೆ ಹಾಗೂ ಇಡ್ಲಿ ಹಿಟ್ಟು ಹೆಚ್ಚಾಗಿ ರುಬ್ಬಿಕೊಂಡು ಫ್ರಿಡ್ಜ್‌ನಲ್ಲಿ ಇರಿಸುವುದು ಹಾಗೂ ಅದನ್ನು ಪದೇ ಪದೇ ಬಳಸುವ ರೂಢಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಇರುವವರು ಹೆಚ್ಚಾಗಿ ಮಾಡುತ್ತಿದ್ದಾರೆ. ಈ ರೀತಿ ಮಾಡಿದರೆ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿ ಇದೆ.

ದೋಸೆ ಹಾಗೂ ಇಡ್ಲಿ ಹಿಟ್ಟನ್ನು ರುಬ್ಬಿದ ಮೇಲೆ ಒಂದು ರಾತ್ರಿ ಹುಳಿಯಾಗುವುದಕ್ಕೆ / ಹುದುಗುವುದಕ್ಕೆ (Fermentation) ಬಿಡುವುದು ಇದೆ. ಇದು ಸರಿಯಾದ ವಿಧಾನ. ಆದರೆ ಫ್ರಿಡ್ಜ್‌ನಲ್ಲಿ ವಾರಗಟ್ಟಲೆ ಅಥವಾ ಮೂರು - ನಾಲ್ಕು ದಿನಗಳ ಕಾಲ ಇರಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ಹಿಟ್ಟು ಹುದುಗುವಿಕೆ ಆದ ಮೇಲೆ ಒಮ್ಮೆ ಮಾತ್ರ ಬಳಸಬೇಕು. ಪದೇ ಪದೇ ಬಳಸಿದರೆ ಆ ಹಿಟ್ಟಿನಲ್ಲಿ ಹುಳಿ ಪ್ರಮಾಣ ಹೆಚ್ಚಳವಾಗುತ್ತದೆ. ಪ್ರತಿ ದಿನ ಹಿಟ್ಟಿನಲ್ಲಿ ಹುಳಿ ಪ್ರಮಾಣ ಹೆಚ್ಚಳವಾಗುತ್ತದೆ. ಈ ರೀತಿಯ ಹೆಚ್ಚು ಹುಳಿಯಾಗಿರುವ ಹಿಟ್ಟನ್ನು ದೋಸೆ ಅಥವಾ ಇಡ್ಲಿ ಮಾಡಿ ತಿಂದರೆ ದೇಹದಲ್ಲಿ ಪಿತ್ತದ ಅಂಶ ಹೆಚ್ಚಾಗುತ್ತದೆ. ಪಿತ್ತದ ಅಂಶ ಹೆಚ್ಚಾದಂತೆ ಅಸಿಡಿಟಿ, ಹುಳಿತೇಗು, ಎದೆಯುರಿ ಹಾಗೂ ಹೊಟ್ಟೆಯ ನೋವು ಸಮಸ್ಯೆಗಳು ಬರಲಿವೆ. ಹೀಗಾಗಿ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಸಾಧ್ಯವಾದಷ್ಟು ಒಂದೇ ದಿನಕ್ಕೆ ಆಗುವಂತೆ ಬಳಸುವುದು ಉತ್ತಮ ಎನ್ನುತ್ತಾರೆ ವೈದ್ಯರು.












Click it and Unblock the Notifications