ಪುದೀನಾ ಗಿಡ ಬೇಗ ಬೆಳೆಯಬೇಕಾ, ಈ ಸರಳ ಟಿಪ್ಸ್ ಫಾಲೋ ಮಾಡಿ

ಪುದೀನಾ ಸೊಪ್ಪು ಅಡುಗೆ ಮನೆಯಲ್ಲಿ ಯಾವಾಗಲೂ ಉಪಯೋಗವಾಗುವ ಸುಗಂಧಭರಿತ ಸಸ್ಯಗಳಲ್ಲಿ ಒಂದಾಗಿದೆ. ಚಟ್ನಿ, ಜ್ಯೂಸ್‌, ಚಹಾ ಅಥವಾ ವಿವಿಧ ಆಹಾರ ಪದಾರ್ಥಗಳಲ್ಲಿ ಬಳಸುವ ಪುದೀನಾವನ್ನು ಮನೆಯ ಬಾಲ್ಕನಿಯಲ್ಲೇ ಸುಲಭವಾಗಿ ಬೆಳೆಸಬಹುದು.

ವಿಶೇಷವೆಂದರೆ ಮಾರುಕಟ್ಟೆಯಿಂದ ತಂದ ಪುದೀನಾದ ಉಳಿದ ಕಾಂಡಗಳನ್ನು ಬಳಸಿಕೊಂಡೇ ಹೊಸ ಗಿಡವನ್ನು ಬೆಳೆಸಬಹುದು. ಸರಿಯಾದ ರೀತಿಯಲ್ಲಿ ಬೇಳೆಸಿದರೆ ಈ ಗಿಡವು ತಿಂಗಳುಗಳ ಕಾಲ ತಾಜಾ ಎಲೆಗಳನ್ನು ನೀಡುತ್ತಿರುತ್ತದೆ.

How to Grow Mint

ಪುದೀನಾ ಗಿಡವು ಬೇಗ ಬೆಳೆಯುವ ಸ್ವಭಾವ ಹೊಂದಿರುವುದರಿಂದ ಹೊಸ ಬರಿಗೂ ಇದನ್ನು ಬೆಳೆಸುವುದು ತುಂಬಾ ಸುಲಭ. ಅಡುಗೆಮನೆಯಲ್ಲೇ ಸಣ್ಣ ಹಸಿರು ತೋಟವನ್ನು ನಿರ್ಮಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಸರಿಯಾದ ಕಾಂಡಗಳನ್ನು ಆಯ್ಕೆ ಮಾಡಿ

ಹಸಿರು ಬಣ್ಣದ, ಗಟ್ಟಿಯಾದ ಮತ್ತು ಆರೋಗ್ಯಕರ ಪುದೀನಾ ಕಾಂಡಗಳನ್ನು ಆಯ್ಕೆ ಮಾಡಬೇಕು. ಸುಮಾರು 4 ರಿಂದ 6 ಇಂಚು ಉದ್ದದ ಕಾಂಡಗಳು ಬೆಳೆಸುವುದಕ್ಕೆ ಒಳ್ಳೆಯದು. ಹಳದಿ ಬಣ್ಣಕ್ಕೆ ತಿರುಗಿರುವ ಅಥವಾ ಹೂ ಬಿಟ್ಟಿರುವ ಕಾಂಡಗಳನ್ನು ಬಳಸಬಾರದು. ಕೆಳಭಾಗದ ಎಲೆಗಳನ್ನು ತೆಗೆದು ಮೇಲಿನ ಕೆಲವು ಎಲೆಗಳನ್ನು ಮಾತ್ರ ಉಳಿಸಬೇಕು.

ಮಧುಮೇಹಿಗಳು ಎಷ್ಟು ಮಾವು ತಿಂದರೆ ಬ್ಲಡ್‌ ಶುಗರ್‌ ಹೆಚ್ಚಾಗುವುದಿಲ್ಲ? ಹಣ್ಣು ಸವಿಯುವ ಸಮಯ ಇದಾಗಿರಬೇಕು
ಮಧುಮೇಹಿಗಳು ಎಷ್ಟು ಮಾವು ತಿಂದರೆ ಬ್ಲಡ್‌ ಶುಗರ್‌ ಹೆಚ್ಚಾಗುವುದಿಲ್ಲ? ಹಣ್ಣು ಸವಿಯುವ ಸಮಯ ಇದಾಗಿರಬೇಕು

ನೀರಿನಲ್ಲಿ ಬೇರು ಮೂಡಿಸಿ

ಒಂದು ಗಾಜಿನ ಗ್ಲಾಸ್ ಅಥವಾ ಜಾರಿಗೆ ಸ್ವಲ್ಪ ನೀರು ಹಾಕಿ ಪುದೀನಾ ಕಾಂಡಗಳನ್ನು ಅದರಲ್ಲಿ ಇಡಿ. ಕಾಂಡದ ಕೆಳಭಾಗ ಮಾತ್ರ ನೀರಿನಲ್ಲಿ ಮುಳುಗಿರಲಿ. ಇದನ್ನು ಕಿಟಕಿಯ ಹತ್ತಿರ ಬೆಳಕು ಬೀಳುವ ಸ್ಥಳದಲ್ಲಿ ಇಡಿ. ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು. ಸುಮಾರು ಒಂದು ವಾರದಲ್ಲಿ ಸಣ್ಣ ಬಿಳಿ ಬೇರುಗಳು ಮೂಡಲು ಆರಂಭವಾಗುತ್ತದೆ. ಬೇರುಗಳು ಒಂದು ಇಂಚು ಉದ್ದವಾದ ಬಳಿಕ ಮಣ್ಣಿಗೆ ವರ್ಗಾಯಿಸಬಹುದು.

ಕುಂಡದಲ್ಲಿ ನೆಡುವ ವಿಧಾನ

ಬೇರು ಬಂದ ಕಾಂಡಗಳನ್ನು ನೀರು ಹೊರ ಹೋಗುವ ರಂಧ್ರ ಇರುವ ಸಣ್ಣ ಕುಂಡದಲ್ಲಿ ನೆಡಬೇಕು. ಫಲವತ್ತಾದ ಮಣ್ಣನ್ನು ಬಳಸುವುದರಿಂದ ಗಿಡವು ಸಮೃದ್ದವಾದಗಿ ಬೆಳೆಯುತ್ತದೆ. ಗಿಡವನ್ನು ನೆಟ್ಟ ಬಳಿಕ ಸ್ವಲ್ಪ ನೀರು ಹಾಕಿ ಬೆಳಗಿನ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇಡಬೇಕು.

ಮಣ್ಣು ಯಾವಾಗಲೂ ಸ್ವಲ್ಪ ತೇವಾಂಶದಿಂದ ಇರಬೇಕು. ಆದರೆ, ಅತಿಯಾಗಿ ನೀರು ಹಾಕಬಾರದು. ಮೇಲಿನ ಎಲೆಗಳನ್ನು ಕತ್ತರಿಸುತ್ತಾ ಹೋದರೆ ಗಿಡ ಹೆಚ್ಚು ದಟ್ಟವಾಗಿ ಬೆಳೆಯುತ್ತದೆ.

ಮನೆ ಅಲಂಕರಿಸುವುದಷ್ಟೇ ಅಲ್ಲ: ಈ ಗಿಡಗಳು ಮನೆಗೆ ಹಣ ಮತ್ತು ಪಾಸಿಟಿವಿಟಿ ತರುತ್ತವೆ
ಮನೆ ಅಲಂಕರಿಸುವುದಷ್ಟೇ ಅಲ್ಲ: ಈ ಗಿಡಗಳು ಮನೆಗೆ ಹಣ ಮತ್ತು ಪಾಸಿಟಿವಿಟಿ ತರುತ್ತವೆ

ಸರಿಯಾದ ರೀತಿಯಲ್ಲಿ ಕೊಯ್ಯಿರಿ

ಪುದೀನಾವನ್ನು ನಿರಂತರವಾಗಿ ಬೆಳೆಯಲು ಸರಿಯಾದ ರೀತಿಯಲ್ಲಿ ಕೊಯ್ಯುವುದು ಮುಖ್ಯ. ಒಮ್ಮೆಗೇ ಗಿಡದ ಮೂರನೇ ಭಾಗಕ್ಕಿಂತ ಹೆಚ್ಚು ಕತ್ತರಿಸಬಾರದು. ಎಲೆಗಳ ಹತ್ತಿರದ ಭಾಗದಲ್ಲಿ ಕತ್ತರಿಸಿದರೆ ಹೊಸ ಕೊಂಬೆಗಳು ಬೇಗ ಬೆಳೆಯುತ್ತವೆ.

ಗಿಡದ ಆರೈಕೆ ಹೇಗೆ ?

ಪುದೀನಾಗೆ ಬೆಳಕು ಮತ್ತು ಗಾಳಿ ಸರಿಯಾಗಿ ಸಿಗಬೇಕು. ಮಣ್ಣು ಸಂಪೂರ್ಣವಾಗಿ ಒಣಗದಂತೆ ನೋಡಿಕೊಳ್ಳಬೇಕು. ಕೆಲವು ತಿಂಗಳುಗಳಿಗೊಮ್ಮೆ ಮಣ್ಣನ್ನು ಬದಲಾಯಿಸುವುದು ಅಥವಾ ಬೇರು ಸಮೇತ ಕೆಲವು ಕಾಂಡಗಳನ್ನು ಬೇರೆ ಕುಂಡಗಳಿಗೆ ವರ್ಗಾಯಿಸುವುದು ಉತ್ತಮ. ಹೀಗೆ ಮಾಡಿದರೆ ಒಂದೇ ಗಿಡದಿಂದ ಹಲವು ಪುದೀನಾ ಗಿಡಗಳನ್ನು ಬೆಳೆಸಬಹುದು.

ಕೀಟಗಳಿಂದ ರಕ್ಷಿಸಿ

ಕೆಲವೊಮ್ಮೆ ಪುದೀನಾ ಎಲೆಗಳ ಮೇಲೆ ಸಣ್ಣ ಕೀಟಗಳು ಕಾಣಿಸಬಹುದು. ಇಂತಹ ಸಂದರ್ಭದಲ್ಲಿ ನೀಮ್ ಎಣ್ಣೆ ಮಿಶ್ರಿತ ನೀರನ್ನು ಸಿಂಪಡಿಸುವುದು ಉತ್ತಮ. ಇದರಿಂದ ಗಿಡ ಆರೋಗ್ಯಕರವಾಗಿ ಬೆಳೆಯುತ್ತದೆ ಮತ್ತು ಎಲೆಗಳು ಹಾನಿಯಾಗುವುದಿಲ್ಲ.

ಸೂಚನೆ: ಈ ಮಾಹಿತಿ ಸಾಮಾನ್ಯ ತೋಟಗಾರಿಕೆ ಸಲಹೆಗಳ ಆಧಾರದ ಮೇಲೆ ನೀಡಲಾಗಿದೆ. ಹವಾಮಾನ, ಮಣ್ಣು, ನೀರು ಮತ್ತು ಸೂರ್ಯನ ಬೆಳಕಿನ ಪ್ರಕಾರ ಗಿಡದ ಬೆಳವಣಿಗೆ ಬದಲಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+