ಎಲ್ಲೆಂದರಲ್ಲಿ ಅಲೆಯುವ ಮನಸ್ಸಿಗೆ ಕಡಿವಾಣ ಹಾಕುವುದು ಹೇಗೆ?
ನಮ್ಮ ಬದುಕಲ್ಲಿ ನಡೆಯುವ ಎಲ್ಲ ವೈರುಧ್ಯಗಳಿಗೆ ಮನಸ್ಸೇ ಕಾರಣ ಎಂದು ನಿಸ್ಸಂದೇಹವಾಗಿ ಹೇಳಿಬಿಡಬಹುದು. ಏಕೆಂದರೆ ಹಲವು ತೊಂದರೆಗಳನ್ನು ಮೈಮೇಲೆ ಎಳೆದು ಕೊಂಡು ಅದರಿಂದ ಅನುಭವಿಸಬಾರದ ಸಂಕಷ್ಟ ಅನುಭವಿಸಿದ ಬಳಿಕ ಆ ಕ್ಷಣಕ್ಕೆ ನನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಇಷ್ಟೆಲ್ಲ ತಾಪತ್ರಯಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಎಂಬ ಮಾತನ್ನು ನಮಗೆ ನಾವೇ ಆಡಿಕೊಂಡಿರುತ್ತೇವೆ.
ಅದೊಂದು ಕ್ಷಣಗಳಲ್ಲಿ ನಮ್ಮ ಮನಸ್ಸನ್ನು ನಿಗ್ರಹಿಸಿ ಬಿಟ್ಟಿದ್ದೇ ಆದರೆ ಮುಂದೆ ನಮ್ಮ ಬದುಕಿನಲ್ಲಿ ಎದುರಾಗ ಬಹುದಾದ ಸಮಸ್ಯೆಗಳೇ ಹತ್ತಿರ ಸುಳಿಯದೆ ಅದರ ಪಾಡಿಗೆ ಹೋಗಿ ಬಿಡುತ್ತವೆ. ಬಹಳಷ್ಟು ಸಲ ನಾವು ಎದುರಿಸುವ ಸಮಸ್ಯೆಗಳಿಗೆ ನಮ್ಮ ಮನಸ್ಸು ಕಾರಣವಾಗಿ ಬಿಡುತ್ತದೆ. ಮನಸ್ಸಿನ ಆಟಕ್ಕೆ ತಕ್ಕಂತೆ ವರ್ತಿಸಿ ಕೆಲವೊಂದು ತೊಂದರೆಗಳಿಗೆ ತಲೆಕೊಡಬೇಕಾದ ಪರಿಸ್ಥಿತಿ ಎದುರಾಗಿ ಬಿಡುತ್ತದೆ.

ಒಂದು ಕ್ಷಣ ಆಲೋಚಿಸಿ ನೋಡಿದರೆ ಇದು ಶೇಕಡ ನೂರರಷ್ಟು ನಿಜವಾಗಿದೆ. ನಾವು ಎಳೆದುಕೊಳ್ಳುವ ಹತ್ತು ಹಲವು ಸಮಸ್ಯೆಗಳಿಗೆ, ದುರಂತಗಳಿಗೆ ನಮ್ಮ ಮನಸ್ಸೇ ಕಾರಣವಾಗಿದೆ. ಹಾಗಾಗಿ ಹುಚ್ಚು ಕುದುರೆಯಂತೆ ಓಡುವ ನಮ್ಮ ಮನಸ್ಸನ್ನು ಹತೋಟಿಗೆ ತಂದದ್ದೇ ಆದರೆ ಮುಂದೆ ಒದಗಬಹುದಾದ ದುರಂತಗಳನ್ನು ತಪ್ಪಿಸಲು ಸಾಧ್ಯವಿದೆ ಎನ್ನುವುದಂತು ನಿಜ.
ಮನಸ್ಸನ್ನು ಹತೋಟಿಗೆ ತರುವುದು ಸುಲಭನಾ?
ಇಷ್ಟಕ್ಕೂ ಎಲ್ಲೆಂದರಲ್ಲಿ ಅಂಡಲೆಯುವ ಮನಸ್ಸನ್ನು ಹತೋಟಿಗೆ ತರುವುದು ಅಷ್ಟು ಸುಲಭನಾ? ಖಂಡಿತಾ ಸಾಧ್ಯವಿಲ್ಲ ಎಂದೇ ಹೇಳಬೇಕು. ಆದರೆ ಕಠಿಣ ಪರಿಶ್ರಮದಿಂದ ಅದನ್ನು ಸಾಧ್ಯ ಮಾಡಿದ ಮಹಾನ್ ಯೋಗಿಗಳು ಇಲ್ಲದಿಲ್ಲ. ಲೌಕಿಕ ಪ್ರಪಂಚಕ್ಕೆ ತೆರೆದುಕೊಂಡಿರುವ ನಾವು ಅದರತ್ತ ಒಂದಷ್ಟು ಆಸ್ಥೆ ವಹಿಸುವ ಕೆಲಸ ಮಾಡಿದರೆ ನಮಗೆ ಸಹಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.

ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನು ಆಧ್ಯಾತ್ಮದಲ್ಲಿ ಮನೋನಿಗ್ರಹ ಎಂದು ಹೇಳಲಾಗುತ್ತದೆ. ಮನೋನಿಗ್ರಹ ಎಂಬುವುದು ಅಷ್ಟು ಸುಲಭವಾದ ಕೆಲಸವಲ್ಲ. ಹಾಗೆಂದು ಅಸಾಧ್ಯವಾದುದು ಅಲ್ಲ. ಆಸ್ತಿಕ-ನಾಸ್ತಿಕರೆಲ್ಲರೂ ಮಾಡಬಹುದಾಗಿದೆ. ಆದರೆ ದೈವದ ಬಗ್ಗೆ ಶ್ರದ್ಧೆಯುಳ್ಳವರು ಬಹುಬೇಗ ಯಶಸ್ಸುಗಳಿಸುತ್ತಾರೆ ಎಂಬುದು ಆಧ್ಯಾತ್ಮ ಜಗತ್ತು ನಮಗೆ ತೋರಿಸಿಕೊಟ್ಟಿದೆ. ವೇದಾಂತ ಹಾಗೂ ಯೋಗಗಳಲ್ಲಿ ಮನೋನಿಗ್ರಹ ಹೇಗೆ ಎಂಬ ಬಗ್ಗೆ ಹಲವು ಮಾಹಿತಿ ದೊರೆಯುತ್ತದೆ.
ಭಗವದ್ಗೀತೆಯಲ್ಲಿ ಮನೋನಿಗ್ರಹದ ರಹಸ್ಯ
ಮನೋನಿಗ್ರಹದ ರಹಸ್ಯದ ಬಗ್ಗೆ ಭಗವದ್ಗೀತೆಯ ಅಭ್ಯಾಸ ಮತ್ತು ವೈರಾಗ್ಯದ ಉಪದೇಶದಲ್ಲಿ ಶ್ರೀಕೃಷ್ಣ ಹೇಳಿರುವುದನ್ನು ನಾವು ಕಾಣಬಹುದು. ನಮ್ಮ ದಿನನಿತ್ಯದ ಬದುಕಿನಲ್ಲಿ ಅಭ್ಯಾಸ ಮತ್ತು ವೈರಾಗ್ಯದ ಬಗ್ಗೆ ಅರಿತು ಕೆಲವು ತಂತ್ರಗಳನ್ನು ರೂಢಿಸಿಕೊಂಡರೆ ಒಳ್ಳೆಯದು. ಅಲ್ಲದೆ ದೃಢವಾದ ಸಂಕಲ್ಪ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಸಂಕಲ್ಪ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾದರೆ ಇಂದ್ರಿಯ ಸುಖಗಳನ್ನು ತ್ಯಜಿಸಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವ ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಲಾಗಿದೆ.
ಮನೋನಿಗ್ರಹವನ್ನು ಸಾಧಿಸಲು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಅಭ್ಯಾಸಗಳನ್ನು ಕೈಗೊಳ್ಳುವ ಮುನ್ನ ನಮ್ಮ ಮನಸ್ಸನ್ನು ಆ ಕಾರ್ಯಕ್ಕೆ ಒಪ್ಪಿಕೊಳ್ಳುವಂತಹ ವಾತಾವರಣ ರೂಪಿಸಿಕೊಳ್ಳಬೇಕು. ಅದು ಹೇಗೆಂದರೆ ಬದುಕಿನ ಕೆಲವು ವಿಷಯಗಳಲ್ಲಿ ಅನಿವಾರ್ಯ ಎಂದು ಒಪ್ಪಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿರಬೇಕು. ಜತೆಗೆ ನಾವು ಎರಡು ಬಗೆಯ ಆಂತರಿಕ ಶಿಸ್ತುಗಳನ್ನು ಪಾಲಿಸಲು ತಯಾರಾಗಿರಬೇಕು. ಮೊದಲನೆಯದು ಮನಸ್ಸನ್ನು ಸದಾ ಸನ್ಮಾರ್ಗದಲ್ಲಿ ಕೊಂಡೊಯ್ಯುವುದು, ಎರಡನೆಯದು ಎಂತಹ ಅನಿವಾರ್ಯ ಸ್ಥಿತಿಯಲ್ಲಿಯೂ ನಮ್ಮನ್ನು ನಾವು ಕಾಯ್ದುಕೊಳ್ಳುವಂತಿರಬೇಕು.
ಶಿಸ್ತಿನ ಜೀವನ, ಆರೋಗ್ಯಕರ ಹವ್ಯಾಸ ಅಗತ್ಯ
ಮನಸ್ಸಿನಲ್ಲಿ ಕಲ್ಮಶ ತುಂಬಿಕೊಳ್ಳದೆ ಪರಿಶುದ್ಧವಾಗಿರಿಸಿಕೊಂಡಷ್ಟು ನಾವು ಕೈಗೊಳ್ಳುವ ಕಾರ್ಯಕ್ಕೆ ಅನುಕೂಲವಾಗುತ್ತದೆ. ಇದು ಹೇಗೆ ಎಂಬುವುದನ್ನು ವೇದಾಂತದಲ್ಲಿಯೂ ಹಾಗೂ ಪತಂಜಲಿಯ ಯೋಗ ಸೂತ್ರಗಳಲ್ಲಿಯೂ ಸೂಚಿಸಲಾಗಿದೆ. ಕೆಲವು ಕಠಿಣ ನಿಯಮಗಳ ಜತೆಗೆ ವಿವೇಚನೆಯ ಅಭ್ಯಾಸವೂ ಮುಂದುವರೆಸಬೇಕು. ಆಗ ಮಾತ್ರ ನಮ್ಮ ಮನಸ್ಸನ್ನು ನಮ್ಮ ವಶಕ್ಕೆ ಒಳಪಡುವಂತೆ ಮಾಡಿಕೊಳ್ಳಬಹುದು. ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ಇಂದ್ರಿಯ ಸುಖಗಳತ್ತ ವಾಲದಂತೆ ತಡೆಯಬಹುದು.
ಶಿಸ್ತು ಜೀವನ ಹಾಗೂ ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಧ್ಯಾನ ಮುಂತಾದವುಗಳನ್ನು ಅನುಸರಿಸುವುದು ಕೂಡ ಮನೋನಿಗ್ರಹಕ್ಕೆ ಸಹಕಾರಿಯಾಗುತ್ತದೆ. ಮನೋನಿಗ್ರಹ ಮೇಲ್ನೋಟಕ್ಕೆ ಕಾಣುವಂತಹದಲ್ಲ. ಅದು ನಮ್ಮಲ್ಲಿ ನಮ್ಮೊಳಗೆ ನಾವೇ ಮಾಡಿಕೊಳ್ಳುವಂತಹದ್ದು. ಹೀಗಾಗಿ ಸದಾ ಜಾಗೃತರಾಗಿ ಎಲ್ಲ ಕ್ಷಣಗಳಲ್ಲಿಯೂ ಎಚ್ಚರಿಕೆಯಿಂದಲೇ ನಾನು ಮನಸ್ಸನ್ನು ನಿಗ್ರಹಿಸುತ್ತಿದ್ದೇನೆ ಎಂಬ ಅರಿವು ನಮ್ಮಲ್ಲಿರಬೇಕು.
ದೇವರಲ್ಲಿ ನಂಬಿಕೆಯಿದ್ದರೆ ಯಶಸ್ಸು ಸಾಧ್ಯ
ನಮ್ಮಲ್ಲಿ ಕೆಟ್ಟ ಆಲೋಚನೆಗಳು ಉದ್ಭವಿಸಿದರೆ ತಕ್ಷಣ ಅದಕ್ಕೆ ವಿರುದ್ಧವಾದ ಒಳ್ಳೆಯ ವಿಚಾರಗಳತ್ತ ಮನಸ್ಸನ್ನು ಹರಿಸಬೇಕು. ಅಥವಾ ದೇವರ ನಾಮಸ್ಮರಣೆಯಲ್ಲಿ ತೊಡಗಬೇಕು. ಪವಿತ್ರವಾದ ವಿಚಾರಗಳನ್ನು ಸದಾ ಮನಸ್ಸಿನಲ್ಲಿ ತುಂಬಿಸಿಕೊಳ್ಳುತ್ತಾ ಭಕ್ತಿ ಮಾರ್ಗದಲ್ಲಿ ಮುನ್ನಡೆಯಬೇಕು. ಹಾನಿಕಾರಕ ಕಲ್ಪನೆಗಳನ್ನು ಮನಸ್ಸಿನಲ್ಲಿ ಕಟ್ಟಬಾರದು. ಬದುಕಿನ ಒಂದೊಂದು ಕ್ಷಣದಲ್ಲಿಯೂ ನೈತಿಕವಾಗಿ ಬದುಕುತ್ತಾ, ಮುಂದಿನ ಪ್ರತಿಕ್ಷಣದಲ್ಲಿಯೂ ಎಲ್ಲ ಬಗೆಯ ಅಪಾಯಗಳ ಸಾಧ್ಯತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು.
ದೇವರಲ್ಲಿ ನಂಬಿಕೆಯಿರುವವರು ಮನೋನಿಗ್ರಹದಲ್ಲಿ ಬಹುಬೇಗ ಯಶಸ್ವಿಯಾಗಿ ಬಿಡುತ್ತಾರೆ. ಏಕೆಂದರೆ ಮನಸ್ಸನ್ನು ನಿಗ್ರಹಿಸುವ ಅತ್ಯಂತ ಸರಳವೂ, ಖಚಿತವೂ ಆದ ವಿಧಾನ ಎಂದರೆ ಭಗವತ್ ಧ್ಯಾನ ಸದಾ ದೇವರ ಧ್ಯಾನದಲ್ಲಿದ್ದು ಮನಸ್ಸಿನ ಮೇಲೆ ಹಿಡಿತ ತಂದುಕೊಳ್ಳಬಹುದು. ಪತಂಜಲಿಯ ಪ್ರಕಾರ ಜಪ ಮನೋನಿಗ್ರಹಕ್ಕೆ ತುಂಬಾ ಅನುಕೂಲವಾಗಿದ್ದು, ಅದನ್ನು ಜಪಿಸುವ ಯೋಗಿಗೆ ಏಕಾಗ್ರತೆಯುಂಟಾಗುತ್ತದೆ. ಆ ಮೂಲಕ ಆತನ ಮನಸ್ಸು ಅಂತರಾತ್ಮದ ಕಡೆ ಹೊರಳಿ ಚಿತ್ತದ ಏಕಾಗ್ರತೆಗೆ ಅಡೆತಡೆಯಾದ ತೊಂದರೆಯಿಂದ ಬಿಡುಗಡೆ ಹೊಂದಲು ಸಾಧ್ಯವಾಗುತ್ತದೆಯಂತೆ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ











Click it and Unblock the Notifications