ಜನರಿಗೆ ನಾನ್ ವೆಜ್‌ಗಿಂತ ವೆಜ್ ಮೇಲೆ ಹೆಚ್ಚಾಯ್ತಾ ಪ್ರೀತಿ...! ಏನಿದು ಹೊಸ ವಿಷಯ?
ನವದೆಹಲಿ, ಫೆಬ್ರವರಿ 08: ಯಾವಾಗಲು ಜನರು ಹೇಳುವುದು ನಾನ್ ವೆಜ್ ಜಾಸ್ತಿ ಬೆಲೆ ಎಂದೇ. ಆದರೆ, ಕೆಲವೊಮ್ಮೆ ಇದು ಉಲ್ಟಾ ಪಲ್ಟಾ ಕೂಡ ಆಗುತ್ತದೆ. ಅದಕ್ಕೆ ಕಳೆದ ತಿಂಗಳು ಜನವರಿಯ ವರದಿಯೆ ಸಾಕ್ಷಿ. ಮನೆಯಲ್ಲಿ ಮಾಡಿದ ಸಸ್ಯಾಹಾರಿ ಥಾಲಿಯ ಬೆಲೆ ಜನವರಿಯಲ್ಲಿ ಏರಿಕೆಯಾಗಿದ್ದರೆ, ನಾನ್ ವೆಜ್ ಥಾಲಿ ಬೆಲೆ ಕುಸಿದಿದೆ.
ಹೌದು... ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ (MI&A) ಸಂಶೋಧನೆಯ 'ರೈಸ್ ರೊಟ್ಟಿ ರೇಟ್' ಅಂದಾಜಿನ ಪ್ರಕಾರ, ಜನವರಿಯಲ್ಲಿ ವೆಜ್ ಥಾಲಿಯ ಬೆಲೆ 5 ಪ್ರತಿಶತದಷ್ಟು ಹೆಚ್ಚಿದ್ದರೆ, ಅದೇ ನಾನ್ ವೆಜ್ ಥಾಲಿಯ ದರ ಶೇಕಡಾ 13 ರಷ್ಟು ಕಡಿಮೆಯಾಗಿದೆ ಎಂದು ವರದಿ ಮಾಡಿದೆ.

ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ (MI&A) ಸಂಶೋಧನೆಯ 'ರೈಸ್ ರೊಟ್ಟಿ ರೇಟ್' ಅಂದಾಜಿನ ಪ್ರಕಾರ, ಬೇಳೆಕಾಳುಗಳು, ಅಕ್ಕಿ, ಈರುಳ್ಳಿ ಮತ್ತು ಟೊಮೆಟೊಗಳಂತಹ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಜನವರಿಯಲ್ಲಿ ಮನೆಯಲ್ಲಿ ಮಾಡಿದ ಆಹಾರ ಅದರಲ್ಲೂ ಸಸ್ಯಾಹಾರಿ ಥಾಲಿಯ ಬೆಲೆಯನ್ನು ದುಬಾರಿ ಮಾಡಿದೆ.
ಇನ್ನು, ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆ ಸಮಯದಲ್ಲಿ ಕೋಳಿ ದರದಲ್ಲಿ ಕುಸಿತ ಕಂಡಿದ್ದು, ಇದು ನಾನ್ ವೆಜ್ ಥಾಲಿ ದರದಲ್ಲಿ ಕುಸಿತ ಕಾಣುವಂತೆ ಮಾಡಿದೆ ಎಂದು ಅಂದಾಜಿಸಿದೆ. ವರ್ಷದಿಂದ ವರ್ಷಕ್ಕೆ ಈರುಳ್ಳಿ ಮತ್ತು ಟೊಮೆಟೊ ಬೆಲೆಯಲ್ಲಿ ಕ್ರಮವಾಗಿ ಶೇ 35 ಮತ್ತು ಶೇ 20 ರಷ್ಟು ಏರಿಕೆಯಿಂದಾಗಿ ವೆಜ್ ಥಾಲಿಯ ಬೆಲೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಅಕ್ಕಿಯ ಬೆಲೆಗಳು (ವೆಜ್ ಥಾಲಿ ವೆಚ್ಚದ 12 ಪ್ರತಿಶತದಷ್ಟು) ಮತ್ತು ಬೇಳೆಕಾಳುಗಳು (ಶೇಕಡಾ 9) ಸಹ ಕ್ರಮವಾಗಿ 14 ಪ್ರತಿಶತ ಮತ್ತು 21 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಹೆಚ್ಚಿನ ಉತ್ಪಾದನೆಯ ನಡುವೆ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ, ಜನವರಿಯಲ್ಲಿ ಮಾಂಸಾಹಾರಿ ಥಾಲಿಯ ಬೆಲೆಯಲ್ಲಿ 26 % ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಇರಡರ ಹೋಲಿಕೆ ಬಿಟ್ಟು ನೋಡುವುದಾದರೆ, ಕಳೆದ ವರ್ಷಕ್ಕೆ ಅನುಕ್ರಮವಾಗಿ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳ ಬೆಲೆ ಕ್ರಮವಾಗಿ ಶೇಕಡಾ 6 ಮತ್ತು 8 ರಷ್ಟು ಕುಸಿತ ಕಂಡಿದೆ. ರಫ್ತು ನಿರ್ಬಂಧಗಳು, ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ತಾಜಾ ಟೊಮೆಟೊ ಆಗಮನ, ಈರುಳ್ಳಿಯ ಹೆಚ್ಚಿನ ದೇಶೀಯ ಪೂರೈಕೆಯೊಂದಿಗೆ ಈರುಳ್ಳಿ ಮತ್ತು ಟೊಮೇಟೊದ ಬೆಲೆಗಳು ಕ್ರಮವಾಗಿ ಶೇಕಡಾ 26 ಮತ್ತು ಶೇಕಡಾ 16 ರಷ್ಟು ಕಡಿಮೆಯಾದವು.












Click it and Unblock the Notifications