ಈ ಹಣ್ಣುಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಐಸ್ ಕ್ರೀಂ: ಇಲ್ಲಿದೆ ಸುಲಭದ ರೆಸಿಪಿ

2ಮಳೆಯಿರಲಿ, ಚಳಿಯಿರಲಿ, ಬೇಸಿಗೆಯಿರಲಿ ಐಸ್‌ ಕ್ರೀಂ ಅನ್ನು ನಿರಾಕರಿಸುವವರು ಬಹಳ ಕಡಿಮೆ. ಆದರೆ ಬೇಸಿಗೆಯಲ್ಲಿ ಐಸ್‌ ಕ್ರೀಂಗೆ ಸ್ವಲ್ಪ ಬೇಡಿಕೆ ಹೆಚ್ಚು. ಐಸ್ ಕ್ರೀಮ್ ಒಂದು ರುಚಿಕರವಾದ ಸಿಹಿತಿಂಡಿ. ಇದನ್ನು ಹಾಲು, ಕ್ರೀಮ್, ಸಕ್ಕರೆ ಮತ್ತು ಮತ್ತು ಕೆಲವು ಬಣ್ಣಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಳ ಐಸ್‌ ಕ್ರೀಂಗಳು ಲಭ್ಯವಿದೆ. ಆದರೂ ಮನೆಯಲ್ಲಿಯೇ ತಯಾರಿಸಿ ತಿಂದರೆ ಐಸ್‌ ಕ್ರೀಂನ ರುಚಿಯೇ ಬೇರೆ. ಐಸ್‌ ಕ್ರೀಂ ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಬಹಳ ಸುಲಭ ಸರಳ ರೆಸಿಪಿಯನ್ನು ಅನುಸರಿಸುವ ಮೂಲಕ ಆರೋಗ್ಯಕರ ಐಸ್‌ ಕ್ರೀಂ ಅನ್ನು ಮನೆಯಲ್ಲಿಯೇ ತಯಾರಿಸಬಹುದು.

ಕೆಲವು ಸರಳ ಐಸ್‌ ಕ್ರೀಂ ಪಾಕವಿಧಾನಗಳು ಇಲ್ಲಿವೆ:

1. ತೆಂಗಿನಕಾಯಿ ಐಸ್‌ ಕ್ರೀಂ:

ಬೇಕಾಗುವ ಪದಾರ್ಥಗಳು
• ತುರಿದ ತಾಜಾ ತೆಂಗಿನಕಾಯಿ - 1 ಕಪ್
• ತಾಜಾ ತೆಂಗಿನಕಾಯಿ ಕ್ರೀಮ್ ಅಥವಾ ತೆಂಗಿನ ಕಾಯಿಯ ದಪ್ಪಹಾಲು - 2 ಕಪ್
• ಜೇನುತುಪ್ಪ - 3/4 ಕಪ್‌

Healthy Homemade Ice Cream Recipes

ತೆಂಗಿನಕಾಯಿ ಐಸ್‌ ಕ್ರೀಂ ಮಾಡುವ ವಿಧಾನ:

• ತೆಂಗಿನಕಾಯಿಯ ಬಿಳಿ ಭಾಗವನ್ನು ಮಾತ್ರ ತುರಿದುಕೊಳ್ಳಿ.
• ಕಾಯಿಯನ್ನು ಸ್ವಲ್ಪ ಚಿನ್ನದ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನೆನಪಿರಲಿ ಕಾಯಿ ಪೂರ್ತಿಯಾಗಿ ಕಂದು ಬಣ್ಣಕ್ಕೆ ತಿರುಗುವ ಅವಶ್ಯಕತೆ ಇಲ್ಲ.
• ಜೇನುತುಪ್ಪ, ತೆಂಗಿನಕಾಯಿ ಕ್ರೀಮ್ ಅಥವಾ ದಪ್ಪ ತೆಂಗಿನ ಹಾಲನ್ನು ತೆಗೆದುಕೊಂಡು ಹ್ಯಾಂಡ್ ಬ್ಲೆಂಡರ್ ಮೂಲಕ ಸರಿಯಾಗಿ ಬ್ಲೆಂಡ್‌ ಮಾಡಿಕೊಳ್ಳಿ.
• ಇದಕ್ಕೆ ತುರಿದ ತೆಂಗಿನಕಾಯಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
• ನಂತರ ಈ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹರಡಿ.
• 6 ರಿಂದ 8 ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಇರಿಸಿದರೆ ತೆಂಗಿನ ಕಾಯಿ ಐಸ್‌ ಕ್ರೀಂ ತಯಾರಾಗುತ್ತದೆ.

2. ವೆನಿಲ್ಲಾ ಗೋಡಂಬಿ ಐಸ್‌ ಕ್ರೀಂ:

ಬೇಕಾಗುವ ಪದಾರ್ಥಗಳು
• ತಾಜಾ ಹಾಲಿನ ಕೆನೆ - 1 ಕಪ್
• ಗೋಡಂಬಿ - 150 ಗ್ರಾಂ
• ಬ್ರೌನ್‌ ಶುಗರ್‌ - 100 ಗ್ರಾಂ
• ವೆನಿಲ್ಲಾ ಬೀನ್ಸ್ - 2 ಗ್ರಾಂ

ವೆನಿಲ್ಲಾ ಗೋಡಂಬಿ ಐಸ್‌ ಕ್ರೀಂ ತಯಾರಿಸುವ ವಿಧಾನ:

• ತಾಜಾ ಕ್ರೀಮ್ ಅನ್ನು 2 ರಿಂದ 4 ನಿಮಿಷಗಳ ಕಾಲ ಬೀಟ್‌ ಮಾಡಿ.
• ಬೀಟ್‌ ಮಾಡಿಟ್ಟುಕೊಂಡ ಕ್ರೀಂಗೆ ವೆನಿಲ್ಲಾ ಬೀನ್ ಸಾರ ಸೇರಿಸಿ ಮಿಶ್ರಣ ಮಾಡಿ.
• ಬ್ರೌನ್‌ ಶುಗರ್‌ ಅನ್ನು ಕ್ಯಾರಮಲೈಸ್‌ ಮಾಡಿ ಅದಕ್ಕೆ ಗೋಡಂಬಿ ಸೇರಿಸಿ.
• ತಣ್ಣಗಾದ ನಂತರ ಈ ಮಿಶ್ರಣವನ್ನು ನುಣ್ಣಗೆ ಕತ್ತರಿಸಿ.
• ಈಗ ಕ್ಯಾರಮೆಲೈಸ್ ಮಾಡಿದ ಗೋಡಂಬಿಯನ್ನು ತಾಜಾ ವಿಪ್ಡ್ ಕ್ರೀಮ್‌ಗೆ ಸೇರಿಸಿ.
• ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ರಾತ್ರಿಯಿಡೀ ಫ್ರೀಜರ್‌ನಲ್ಲಿ ಇರಿಸಿ.
• ಐಸ್‌ ಕ್ರೀಂ ತಿನ್ನಲು ಕೊಡುವ ಮೊದಲು ಸ್ವಲ್ಪ ಹುರಿದ ಗೋಡಂಬಿಯನ್ನು ಸೇರಿಸಿ.

3. ಚೋಕೊ ಬಾದಾಮಿ ಆವಕಾಡೊ ಐಸ್ ಕ್ರೀಂ:

ಬೇಕಾಗುವ ಪದಾರ್ಥಗಳು
• ಬಾದಾಮಿ ಹಾಲು - 1 ಕಪ್
• ಹುರಿದ ಬಾದಾಮಿ - 75 ಗ್ರಾಂ
• ಚೆನ್ನಾಗಿ ಮಾಗಿದ ಆವಕಾಡೊ - 1
• ಕಂಡೆನ್ಸ್ಡ್‌ ಮಿಲ್ಕ್‌ - 100 ಮಿಲಿ
• ಮೆಲ್ಟೆಡ್‌ ಡಾರ್ಕ್ ಚಾಕೊಲೇಟ್ - 100 ಮಿಲಿ

ಚೋಕೊ ಬಾದಾಮಿ ಆವಕಾಡೊ ಐಸ್ ಕ್ರೀಂ ತಯಾರಿಸುವ ವಿಧಾನ:

• ಬಾದಾಮಿಯನ್ನು ಹುರಿದು ತಣ್ಣಗಾಗಿಸಿ ನುಣ್ಣಗೆ ಕತ್ತರಿಸಿ.
• ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಬಾದಾಮಿ ಹಾಲು ಮತ್ತು ಕಂಡೆನ್ಸ್ಡ್‌ ಮಿಲ್ಕ್‌ ಸೇರಿಸಿ. ಹ್ಯಾಂಡ್ ಬ್ಲೆಂಡರ್ ಬಳಸಿ ದಪ್ಪವಾಗುವವರೆಗೆ ಮಿಶ್ರಣ ಮಾಡಿ.
• ಅದಕ್ಕೆ ಆವಕಾಡೊ ಸೇರಿಸಿ ನಯವಾದ ಪ್ಯೂರಿ ಬರುವವರೆಗೆ ಬ್ಲೆಂಡ್‌ ಮಾಡಿ.
• ನಂತರ ಹುರಿದು ಕತ್ತರಿಸಿಟ್ಟ ಬಾದಾಮಿ ಸೇರಿಸಿ.
• ಈ ಮಿಶ್ರಣವನ್ನು ಸಣ್ಣ ಐಸ್ ಕ್ರೀಮ್ ಅಚ್ಚುಗಳಲ್ಲಿ ಹಾಕಿ 8 ಗಂಟೆಗಳ ಕಾಲ ಫ್ರೀಜ್ ಮಾಡಿ.
• ನಂತರ ಮೆಲ್ಟೆಡ್‌ ಚಾಕೊಲೇಟ್‌ನಲ್ಲಿ ಅದ್ದಿ ಇನ್ನೊಂದು ಗಂಟೆ ಫ್ರೀಜ್ ಮಾಡಿದರೆ ಅದ್ಬುತ ಚೋಕೊ ಬಾದಾಮಿ ಆವಕಾಡೊ ಐಸ್ ಕ್ರೀಂ ಸವಿಯಲು ಸಿದ್ದವಾಗುತ್ತದೆ.

4. ಗಾವಾ ಚಿಲ್ಲಿ ಐಸ್ ಕ್ರೀಂ:

• ಗುಲಾಬಿ ಪೇರಳೆ - 2
• ತಾಜಾ ಕೆನೆ - 100 ಮಿಲಿ
• ಪಾಮ್ ಶುಗರ್‌ - 4 ಚಮಚ
• ಕೆಂಪು ಮೆಣಸಿನ ಪುಡಿ - 1 ಚಮಚ

ಗಾವಾ ಚಿಲ್ಲಿ ಐಸ್ ಕ್ರೀಂ ತಯಾರಿಸುವ ವಿಧಾನ:

• ಪೇರಳೆ ಹಣ್ಣಿನ ಮೇಲಿನ ಭಾಗವನ್ನು ಕತ್ತರಿಸಿ ತಿರುಳನ್ನು ತೆಗೆಯಿರಿ.
• ಈ ತಿರುಳನ್ನು ಮಿಕ್ಸರ್‌ನಲ್ಲಿ ಹಾಕಿ ಫಿಲ್ಟರ್ ಮಾಡಿ.
• ಪೇರಳೆ ಪ್ಯೂರಿ ಸಿಕ್ಕ ನಂತರ, ಅದಕ್ಕೆ ತಾಜಾ ಕ್ರೀಮ್ ಮತ್ತು ಪಾಮ್ ಶುಗರ್‌ ಸೇರಿಸಿ ಮಿಶ್ರಣ ಮಾಡಿ.
• ಈಗ ಈ ಮಿಶ್ರಣವನ್ನು ತಿರುಳು ತೆಗೆದಿಟ್ಟ ಪೇರಳೆ ಸಿಪ್ಪೆಯ ಒಳಗೆ ಸುರಿಯಿರಿ.
• ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿ 6 ರಿಂದ 8 ಗಂಟೆಗಳ ಕಾಲ ಫ್ರೀಜ್ ಮಾಡಿದರೆ ರುಚಿ ರುಚಿಯಾದ ಗಾವಾ ಚಿಲ್ಲಿ ಐಸ್ ಕ್ರೀಂ ಸವಿಯಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+