ಎಲ್ಲ ಕಾಲದಲ್ಲೂ ಆರೋಗ್ಯ ಕಾಪಾಡುವ ಸೌತೆಕಾಯಿ: ಹೀಗೂ ಬಳಸಬಹುದು
ಬೇಸಿಗೆ ಮಾತ್ರವಲ್ಲದೆ ಎಲ್ಲ ಕಾಲದಲ್ಲಿಯೂ ಆರೋಗ್ಯ ಕಾಪಾಡುವ ಸೌತೆಕಾಯಿಯನ್ನು ಸದಾ ಬಳಕೆ ಮಾಡುತ್ತಾ ಬಂದರೆ ಅದರಿಂದ ಹಲವು ರೀತಿಯಲ್ಲಿ ಉಪಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದು ಸರ್ವ ಋತು ತರಕಾರಿಯಾಗಿದ್ದು ಎಲ್ಲ ಕಾಲದಲ್ಲಿಯೂ ದೊರೆಯುವುದರಿಂದ ಉಪಯೋಗಿಸಲು ಅಡ್ಡಿಯಾಗುವುದಿಲ್ಲ.
ಸಾಮಾನ್ಯವಾಗಿ ಹೆಚ್ಚಿನವರು ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಉಳಿದ ದಿನಗಳು ಬಳಕೆಯನ್ನು ಕಡಿಮೆ ಮಾಡುತ್ತಾರೆ. ಅದರ ಬದಲಿಗೆ ಇದನ್ನು ನಿತ್ಯ ಉಪಯೋಗಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಹಲವು ಬಗೆಯ ಉಪಯೋಗಗಳಿವೆ ಎನ್ನುವುದನ್ನು ಮರೆಯಬಾರದು.
ಸೌತೆಕಾಯಿ ಏಕೆ ಆರೋಗ್ಯಕಾರಿ ಎಂಬುದಕ್ಕೆ ಅದರಲ್ಲಿರುವ ಪೋಷಕಾಂಶವೇ ಸಾಕ್ಷಿಯಾಗಿದೆ.

ಉದಾಹರಣೆಗೆ ನೂರು ಗ್ರಾಂ ಸೌತೆಕಾಯಿಯಲ್ಲಿ ಶರ್ಕರಪಿಷ್ಠ 2.8ಗ್ರಾಂ, ಸಸಾರಜನಕ 0.4, ಕೊಬ್ಬು 0.56ಮಿ.ಗ್ರಾಂ ಸುಣ್ಣ 14.00, ರಂಜಕ 28.00, ಕಬ್ಬಿಣ 1.4, ನಯಾಸಿನ್ 0.4, ಸಿ ಜೀವಸತ್ವ 8.0, ಪೊಟ್ಯಾಷಿಯಂ 14.90, ಸೋಡಿಯಂ 7.0, ಬಿ ಜೀವಸತ್ವ 28.00, ಕ್ಲೋರಿನ್ 5.60, ಗಂಧಕ 5.90ಮಿ.ಗ್ರಾಂ ಇದ್ದು ಇದು ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ.
ಬೇಸಿಗೆಯ ದಿನಗಳಲ್ಲಿ ಸೌತೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅದರ ಬಳಕೆಯನ್ನು ಹೆಚ್ಚೆಚ್ಚಾಗಿ ಮಾಡುತ್ತಾರೆ. ಈ ಸಮಯದಲ್ಲಿ ದೇಹಕ್ಕೆ ನೀರಿನಾಂಶ ಜಾಸ್ತಿ ಬೇಕಾಗುತ್ತದೆ. ಹೀಗಾಗಿ ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗುತ್ತದೆ.

ಉಳಿದಂತೆ ಎಲ್ಲ ದಿನಗಳಲ್ಲಿ ಬೇರೆ ಬೇರೆ ಕ್ರಮಗಳಲ್ಲಿ ಸೌತೆಕಾಯಿಯನ್ನು ಬಳಸಿಕೊಳ್ಳಬಹುದಾಗಿದೆ. ಅಡುಗೆಯಲ್ಲಿ ಸೌತೆಕಾಯಿಯನ್ನು ಬಳಸಲಾಗುತ್ತಿದೆ ಯಾದರೂ ಬೇಸಿಗೆಯಲ್ಲಂತು ಇದನ್ನು ಹಸಿಯಾಗಿ ಸೇವಿಸಿದಷ್ಟು ಅನುಕೂಲ ಜಾಸ್ತಿ. ಮಿಡಿ ಸೌತೆಯನ್ನು ತಿನ್ನಲೆಂದೇ ಬಳಸಲಾಗುತ್ತದೆ. ಉಳಿದಂತೆ ಮಲೆನಾಡುಗಳಲ್ಲಿ ದೊಡ್ಡಗಾತ್ರದ ಸೌತೆಕಾಯಿಯನ್ನು ಬೆಳೆಯಲಾಗುತ್ತದೆ.
ಸೌತೆಕಾಯಿ ಹಲವು ರೀತಿಯಲ್ಲಿ ಆರೋಗ್ಯಕಾರಿಯಾಗಿರುವುದರಿಂದ ಇದರ ಬಳಕೆ ಮಾಡಿದಷ್ಟು ನಮಗೆ ಅನುಕೂಲ ಜಾಸ್ತಿ. ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ.
ಇನ್ನು ಸೌತೆಕಾಯಿ ರಸವನ್ನು ತೆಗೆದು ಮುಖ ಕೈಕಾಲು, ಚರ್ಮಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಅಜೀರ್ಣ ಸಮಸ್ಯೆಯಿಂದ ಬಳಲುವವರು ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು.
ಕೆಲವೊಮ್ಮೆ ಅಂಗಾಲುಗಳಲ್ಲಿ ಉರಿಕಾಣಿಸಿಕೊಳ್ಳುತ್ತದೆ. ಈ ವೇಳೆ ಸೌತೆಕಾಯಿಯ ತಿರುಳು ತೆಗೆದು ಅದರಿಂದ ಉಜ್ಜಿದರೆ ಶಮನವಾಗುತ್ತದೆ. ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.
ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಸ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ.
ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಇದರಲ್ಲಿ ಮೂತ್ರದ ಉರಿ ಶಮನಕಾರಿ ಗುಣ, ವೀರ್ಯ ಶುದ್ಧಿಕಾರಿ ಗುಣ ಹೊಂದಿದ್ದು, ಮಧುಮೇಹಿಗಳು ಕೂಡ ಸೇವಿಸಬಹುದಾಗಿದೆ. ನಾವು ಕಾಲಕ್ಕೆ ತಕ್ಕಂತೆ ಯಾವ ಹಣ್ಣು ತರಕಾರಿಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಂಡು ಅಂತಹ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications