Health Tips: ಹೊಟ್ಟೆ ಬೊಜ್ಜು ಕರಗಿಸಲು ಬಿಡಲೇಬೇಕಾದ ಐದು ವಿಷ ಪದಾರ್ಥಗಳು
ತುಂಬಾ ಜನ ಕಚೇರಿಯಲ್ಲಿ ಎಸಿ ಕೆಳಗೆ ಕೂತು ಅರಾಮಾಗಿ ಕೆಲಸ ಮಾಡಲು ಬಯಸುತ್ತಾರೆ. ಆದರೆ ದಿನದ 9 ರಿಂದ 10 ಗಂಟೆ ಕುಳಿತಲ್ಲೇ ಕುಳಿತು ಕೆಲಸ ಮಾಡೋದು ಎಷ್ಟು ಕಷ್ಟ, ಅದರಿಂದಾಗುವ ಆರೋಗ್ಯ ಸಮಸ್ಯೆಗಳು ಏನು ಅನ್ನೋದು ಆ ಕೆಲಸ ಮಾಡುವವರಿಗೇ ಗೊತ್ತು. ಯಾಕೆಂದರೆ ಓಡಾ೧ ಇಲ್ಲದೆ ತಿಂಡಿ ಹಾಗೂ ಊಟದ ನಂತರ ಕುಳಿತಲ್ಲೇ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ಹೊಟ್ಟೆ ಬೊಜ್ಜು ಹೆಚ್ಚಾಗುತ್ತಿದೆ. ವ್ಯಾಯಮಕ್ಕೂ ಸಮಯವಿಲ್ಲದ ಅದೆಷ್ಟೋ ಜನರ ದೇಹದ ತೂಕ ಹೆಚ್ಚಾಗಿದೆ.
ಹೀಗೆ ದೇಹದ ತೂಕ ಒಂದು ಬಾರಿ ಹೆಚ್ಚಾದರೆ ಅದನ್ನು ಕಡಿಮೆ ಮಾಡೋದು ತುಂಬಾನೇ ಕಷ್ಟ. ಆದರೆ ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರ ಇದ್ದೇ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಕೆಲ ಆಹಾರವನ್ನು ತ್ಯಜಿಸಿದರೆ ಹೊಟ್ಟೆ ಬೊಜ್ಜು ಕರಗಿಸಲು ಸಾಧ್ಯವಾಗುತ್ತದೆ. ಜೊತೆಗೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಗಾದರೆ ಆ ವಿಷಕಾರಿ ಆಹಾರ ಯಾವುವು? ನಾವು ದೂರ ಇರಬೇಕಾಗಿರುವುದು ಯಾವ ಆಹಾರದಿಂದ?

ಹೊಟ್ಟೆಯಲ್ಲಿ ಇರುವ ಬಿಜ್ಜನ್ನು ಕಡಿಮೆ ಮಾಡಬೇಕು ಅಂದರೆ ನಾವು ಐದು ವಿಷಕಾರಿ ಆಹಾರ ಪದಾರ್ಥಗಳನ್ನು ಬಳಕೆ ಮಾಡುವುದನ್ನು ಬಿಡಬೇಕು. ಎಲ್ಲಾ ಸಮತೋಲಿತ ಆಹಾರ ತೆಗೆದುಕೊಳ್ಳುವುದರಿಂದ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಇದರೊಂದಿಗೆ ಹೊಟ್ಟೆಯಲ್ಲಿರುವ ಕೊಬ್ಬು ಕೂಡ ಕರಗುತ್ತದೆ.
ಸುಮಾರು ಜನ ಚೆನ್ನಾಗಿ ವ್ಯಾಯಾಮ ಮಾಡುತ್ತಾರೆ. ಆದರೂ ಕೂಡ ಅವರ ಹೊಟ್ಟೆಯಲ್ಲಿ ಇರುವ ಬೊಜ್ಜು ಕಡಿಮೆ ಆಗುವುದಿಲ್ಲ. ಇದಕ್ಕೆ ಕಾರಣ ಸೇವಿಸುವ ಆಹಾರ. ಹೌದು.. ವ್ಯಾಯಾಮ ಕೇವಲ 25%ರಷ್ಟು ಮಾತ್ರ ಪರಿಣಾಮ ಬೀರುತ್ತದೆ. ಆದರೆ ನಾವು ಸೇವಿಸುವ ಆಹಾರ 75%ರಷ್ಟು ಹೊಟ್ಟೆ ಬೊಜ್ಜಿಗೆ ಕಾರಣವಾಗಿದೆ. ಹಾಗಾಂತ ಊಟ ಬಿಡಬೇಕು ಅಂತಲ್ಲ. ಇದರಲ್ಲಿ ಯಾವುದನ್ನು ತಿನ್ನಬೇಕು? ಎಷ್ಟು ತಿನ್ನಬೇಕು? ಯಾವುದನ್ನು ಸೇವಿಸಬಾರದು ಅನ್ನೋದು ತುಂಬಾ ಮುಖ್ಯ. ಹಾಗಾದರೆ ಯಾವ ಆಹಾರ ಬಿಡಬೇಕು?

ಯಾವ ಆಹಾರ ಬಿಡಬೇಕು?
* ಸಕ್ಕರೆ
* ಉಪ್ಪು
* ಪಾಲಿಶ್ ಮಾಡಿದ ಧಾನ್ಯಗಳು (ಅಕ್ಕಿ, ಮೈದ, ಪರೋಟ)
* ಹಾಲು
* ಹಣ್ಣಿನ ಜ್ಯೂಸ್ (ಪ್ಯಾಕ್ ಮಾಡಿದ ಜ್ಯೂಸ್ ಸಂಪೂರ್ಣವಾಗಿ ಬಿಡಬೇಕು)
* ಡ್ರೈ ಫ್ರೂರ್ಟ್
ಯಾವುದೇ ಪ್ಯಾಕ್ ಮಾಡಿದ ಆಹಾರ, ಎಣ್ಣೆಯಲ್ಲಿ ಕರಿದ ಆಹಾರ, ಹೆಚ್ಚು ದಿನ ಶೇಖರಿಸಿದ ಆಹಾರ, ಐಸ್‌ಕ್ರೀಮ್, ಸಾಫ್ಟ್ ಡ್ರಿಂಕ್ಸ್, ಮದ್ಯಪಾನ, ಜೊತೆಗೆ ಫ್ರಿಡ್ಜ್‌ನಲ್ಲಿ ಇಟ್ಟ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಇದರಿಂದ ಹೊಟ್ಟೆ ಬೊಜ್ಜು ಮಾತ್ರವಲ್ಲದೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಅಲ್ಲದೆ ದೇಹಕ್ಕೆ ಬೇಕಾದ ಪೋಷಕಾಂಶಗಳಿರುವ ಆಹಾರ ಸೇವನೆ ರೂಢಿಸಿಕೊಳ್ಳುವುದು ನಮ್ಮನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹಾಗಾದರೆ ಯಾವ ಆಹಾರ ಸೇವಿಸಬೇಕು?
ಯಾವುದನ್ನು ಸೇವಿಸಬೇಕು?
* ತರಕಾರಿ
* ಸೊಪ್ಪು
* ನಟ್ಸ್ -ಸೀಡ್ಸ್
* ಮೊಳಕೆ ಬಂದ ಕಾಳುಗಳು
* ಹಣ್ಣು
* ಸೇವಿಸುವ ಆಹಾರ ತುಂಬಾ ಗಟ್ಟಯಾಗಿರದಂತೆ ಗಮನ ಹರಿಸಿ
ಆಹಾರ ಪದ್ಧತಿ ಹೇಗಿರಬೇಕು?
* ನಾರಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬೇಕು. ಈ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದು. ತುಂಬಾ ಆಹಾರವನ್ನು ತ್ಯಜಿಸುವುದು ಮಾಡಬೇಕಿ.
* ಎಂಟು ಗಂಟೆ ಅಂತರದಲ್ಲಿ ಎರಡು ಬಾರಿ ಮಿತ ಆಹಾರ ಸೇವನೆ ಮಾಡಿ.
* ನಿಯಮಿತ ವ್ಯಾಯಾಮ ಮಾಡಬೇಕು.
* ಒಬ್ಬ ಮನುಷ್ಯನಿಗೆ ಎಷ್ಟು ಕ್ಯಾಲರಿ ಬೇಕು ಅನ್ನೋದನ್ನು ತಿಳಿದುಕೊಂಡು ಅದನ್ನು ಅನುಸರಿಸಬೇಕು ಮಾಡಬೇಕು.
ಹೀಗೆ ನಮ್ಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರೊಂದಿಗೆ ನಮ್ಮ ಹೊಟ್ಟೆ ಬೊಜ್ಜು ಮಾತ್ರವಲ್ಲದೆ ಆರೋಗ್ಯವನ್ನೋ ಉತ್ತಮವಾಗಿ ಇಟ್ಟುಕೊಳ್ಳಬಹುದು.












Click it and Unblock the Notifications