Holi Decoration Ideas for Home: ಹೋಳಿಯಂದು ಕಲರ್‌ಫುಲ್ಲಾಗಿ ಮನೆ ಅಲಂಕರಿಸಬೇಕಾ..? ಇಲ್ಲಿದೆ ಐಡಿಯಾ..
ಹೋಳಿ ಹಬ್ಬವು ಎಲ್ಲರ ಮುಖದಲ್ಲಿ ನಗುವನ್ನು ತರುವ ಹಬ್ಬ. ಈ ಬಣ್ಣದ ಹಬ್ಬ ಅಂದರೆ ಅದೇನೋ ಖುಷಿ. ಈ ವಿಶೇಷ ಹಬ್ಬದಂದು ಜನರು ತಮ್ಮ ಮನೆಗಳಲ್ಲಿ ಪಾರ್ಟಿಗಳನ್ನು ಸಹ ಆಯೋಜಿಸುತ್ತಾರೆ. ಹೀಗೆ ಮನೆಗೆ ಜನ ಪಾರ್ಟಿಗೆ ಬಂದಾಗ ನೀವು ಮೆನು ಮತ್ತು ಅಲಂಕಾರಕ್ಕೆ ಗಮನ ಕೊಡಬೇಕು. ಅಲಂಕಾರವು ನಿಮ್ಮ ಮನೆಯ ವಾತಾವರಣವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಹೋಳಿಗೆ ನಿಮ್ಮ ಮನೆಯನ್ನು ಅಲಂಕರಿಸಬೇಕಾದಾಗ ನೀವು ವಿಭಿನ್ನವಾಗಿ ಯೋಜಿಸಬೇಕು.
ನಿಮ್ಮ ಮನೆಯ ಅಲಂಕಾರ ಹೋಳಿಯ ಬಣ್ಣಗಳು ಮತ್ತು ಸಕಾರಾತ್ಮಕತೆಯನ್ನು ಅನುಭವಿಸುವಂತಿರಬೇಕು. ಹೋಳಿ ಮನೆ ಅಲಂಕಾರಕ್ಕಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಅಲಂಕಾರಿಕ ವಸ್ತುಗಳನ್ನು ಮಾತ್ರ ಬಳಸಬೇಕೆಂದಿಲ್ಲ. ನಿಮಗೆ ಇಷ್ಟವಾಗುವಂತೆಯೂ ಮನೆಯಲ್ಲಿ ಕೆಲವು ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು.
ಹೀಗೆ ನೀವು ನಿಮ್ಮ ಮನೆಗೆ ವಿಶಿಷ್ಟ ನೋಟವನ್ನು ನೀಡಬಹುದು. ಈ ವರ್ಷ ನೀವು ನಿಮ್ಮ ಮನೆಯಲ್ಲಿ ಹೋಳಿ ಪಾರ್ಟಿಯನ್ನು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಮನೆಯನ್ನು ವಿಭಿನ್ನ ಶೈಲಿಯಲ್ಲಿ ಅಲಂಕರಿಸಲು ಬಯಸಿದರೆ, ಈ ಐಡಿಯಾಗಳು ಖಂಡಿತವಾಗಿ ನಿಮಗೆ ಉಪಯುಕ್ತವಾಗುತ್ತವೆ-

* ವರ್ಣರಂಜಿತ ಪರದೆಗಳನ್ನು ಬಳಸಿ
ಹೋಳಿಯನ್ನು ಬಣ್ಣಗಳ ಹಬ್ಬ ಎಂದು ಕರೆಯುತ್ತಾರೆ. ಆದ್ದರಿಂದ ಹೋಳಿಯಲ್ಲಿ ಅಲಂಕಾರ ಮಾಡುವಾಗ ನೀವು ವಿವಿಧ ಬಣ್ಣಗಳನ್ನು ಬಳಸಬೇಕು. ಅದು ಒಳಾಂಗಣ ಅಥವಾ ಹೊರಾಂಗಣವೇ ಆಗಿರಲಿ, ವರ್ಣರಂಜಿತ ಕರ್ಟನ್‌ಗಳ ಸಹಾಯದಿಂದ ನೀವು ಹೋಳಿ ಆಡುವ ಜಾಗಕ್ಕೆ ಅದ್ಬುತ ನೋಟವನ್ನು ನೀಡಬಹುದು.
ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಮನೆಯ ಗೋಡೆಗಳ ಮೇಲಿನ ಪರದೆಗಳನ್ನು ಬದಲಾಯಿಸಿ. ನೀವು ಗಾರ್ಡನ್ ಪ್ರದೇಶದಲ್ಲಿ ಪಾರ್ಟಿಯನ್ನು ಆಯೋಜಿಸಿದ್ದರೆ, ಅಲ್ಲಿ ಸ್ಥಾಪಿಸಲಾದ ಚೇರ್ ಟೇಬಲ್‌ಗೂ ಸಹ ವರ್ಣರಂಜಿತ ಪರದೆಗಳ ಸಹಾಯದಿಂದ ಅಲಂಕರಿಸಬಹುದು.

*ಹೋಳಿ ಥೀಮ್ ವಾಲ್ ಹ್ಯಾಂಗಿಂಗ್
ಹೋಳಿಯಲ್ಲಿ ಅಲಂಕಾರ ಮಾಡುವಾಗ ನೀವು ಹೋಳಿ ಥೀಮ್ ವಾಲ್ ಹ್ಯಾಂಗಿಂಗ್ ಅನ್ನು ಸಹ ಮಾಡಬಹುದು. ಪಿಚ್ಕರಿ, ವರ್ಣರಂಜಿತ ಬಲೂನ್‌ಗಳು ಅಥವಾ ವರ್ಣರಂಜಿತ ಹ್ಯಾಂಡ್ ಪೇಂಟ್‌ನಂತಹ ಕೆಲವು ಹೋಳಿಗೆ ಸಂಬಂಧಿತ ವಸ್ತುಗಳ ಸಹಾಯದಿಂದ ಸುಂದರವಾದ ಗೋಡೆಯ ನೇತಾಡುವಿಕೆಯನ್ನು ರಚಿಸಿ ಹಾಗಬಹುದು. ಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳ ಸಹಾಯದಿಂದ ಇವುಗಳನ್ನು ತಯಾರಿಸಬಹುದು. ಹೋಳಿ ಥೀಮ್ ವಾಲ್ ಹ್ಯಾಂಗಿಂಗ್‌ಗಳು ಸುಂದರವಾಗಿ ಕಾಣುವುದು ಮಾತ್ರವಲ್ಲದೆ ನಿಮ್ಮ ಮನೆಯ ಅಲಂಕಾರಕ್ಕೆ ವಿಶಿಷ್ಟ ನೋಟವನ್ನು ನೀಡುತ್ತದೆ.

*ಹೋಳಿ ಆಟದ ಪ್ರದೇಶದ ಅಲಂಕಾರ
ನೀವು ಹೋಳಿ ಪಾರ್ಟಿ ಮಾಡುವಾಗ ಎಲ್ಲಾ ಬಣ್ಣಗಳು, ನೀರು, ಪಿಚ್ಕರಿ ಇತ್ಯಾದಿಗಳನ್ನು ಒಂದೇ ಸ್ಥಳದಲ್ಲಿ ಇಡಿ. ಆ ಜಾಗಕ್ಕೆ ಸ್ವಲ್ಪ ವಿಭಿನ್ನ ಅಲಂಕಾರ ನೀಡಲು ಪ್ರಯತ್ನಿಸಿ. ಬಣ್ಣದಲ್ಲಿ ರೇಖೆಗಳನ್ನು ಹಾಕಿ. ಅಲ್ಲದೆ ಆ ಕೇಂದ್ರ ಪ್ರದೇಶವನ್ನು ಅಲಂಕರಿಸಲು ಕೆಲವು ಅಲಂಕಾರಿಕ ವಸ್ತುಗಳನ್ನು ಬಳಸಿ.

*ಬಲೂನ್ ಸಹಾಯದಿಂದ ಅಲಂಕಾರ
ಹೋಳಿಯಲ್ಲಿ ನಾವೆಲ್ಲರೂ ಬಲೂನ್‌ಗಳೊಂದಿಗೆ ಆಡುತ್ತೇವೆ. ಹಾಗಾಗಿ ಈಗ ಹೋಳಿ ಅಲಂಕಾರ ಮಾಡುತ್ತಿದ್ದರೆ ಅದರಲ್ಲಿ ಬಲೂನ್ ಗಳ ಸಹಾಯ ತೆಗೆದುಕೊಳ್ಳಬಹುದು. ವಿವಿಧ ಬಣ್ಣಗಳ ಬಲೂನ್‌ಗಳನ್ನು ಮಾದರಿಯಲ್ಲಿ ಜೋಡಿಸುವ ಮೂಲಕ ನೀವು ಒಳಾಂಗಣ ಮತ್ತು ಹೊರಾಂಗಣ ಎರಡನ್ನೂ ಅಲಂಕರಿಸಬಹುದು.
ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಹೋಳಿ ಪಾರ್ಟಿಯಲ್ಲಿ ಅವರಿಗಾಗಿ ಪ್ರತ್ಯೇಕ ಬಣ್ಣದ ಸ್ಪರ್ಧೆಯನ್ನು ಸಹ ಆಯೋಜಿಸಬಹುದು. ಮಕ್ಕಳನ್ನು ಬಣ್ಣದ ಹಬ್ಬದಲ್ಲಿ ತೊಡಗಿಸಿಕೊಳ್ಳಲು ಮತ್ತು ಹೋಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಇದು ಸುಲಭವಾದ ಮಾರ್ಗವಾಗಿದೆ. ಮಕ್ಕಳು ಈ ರೀತಿಯ ಹೋಳಿಯನ್ನು ಆನಂದಿಸುತ್ತಾರೆ ಮತ್ತು ಅದು ಅವರಿಗೆ ಸುರಕ್ಷಿತವಾಗಿರುತ್ತದೆ.












Click it and Unblock the Notifications