20 ಕೆ.ಜಿ ತೂಕ ಇಳಿಸಿಕೊಂಡ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಹಂಚಿಕೊಂಡ '7 ದಿನಗಳ ಸರಳ ಡಯಟ್ ಪ್ಲಾನ್' ಇಲ್ಲಿದೆ
ದೇಹದ ಕೂಕ ಕಡಿಮೆ ಮಾಡಬೇಕು ಎಂದುಕೊಳ್ಳುವವರು ಮೊದಲು ತಮ್ಮ ದೈನಂದಿನ ಆಹಾರ ಪದ್ಧತಿಯ ಕಡೆ ಗಮನ ಹರಿಸಬೇಕು. ನಂತರ ವ್ಯಾಯಾಮ, ನಿದ್ದೆ ಇದ್ದೆಲ್ಲ ಇದ್ದೇ ಇರುತ್ತದೆ. ಪ್ರತಿ ದಿನ ನೀವು ತಿನ್ನುವ ಆಹಾರ ನಿಮ್ಮ ದೇಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ನಿಮ್ಮ ಆಹಾರ ಪದ್ಧತಿಯೇ ನಿಮ್ಮ ತೂಕವನ್ನು ಕೂಡ ನಿರ್ಧರಿಸುತ್ತದೆ. ಹೆಚ್ಚಿನವರಿಗೆ ಯಾವ ಸಮಯದಲ್ಲಿ ಯಾವ ಆಹಾರ ತಿಂದರೆ ತೂಕ ಕಡಿಮೆಯಾಗುತ್ತದೆ ಎನ್ನುವ ಅಂದಾಜು ಇರುವುದಿಲ್ಲ. ಅಂತವರಿಗಾಗಿಯೇ ಇತ್ತೀಚೆಗೆ 20 ಕೆ.ಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ 7 ದಿನಗಳ ಡಯಟ್ ಪ್ಲಾನ್ ಅನ್ನು ಹಂಚಿಕೊಂಡಿದ್ದಾರೆ. ಇವರ ಈ ಪ್ಲಾನ್‌ನಲ್ಲಿ ಯಾವುದೇ ದುಬಾರಿ ವಸ್ತುಗಳಿಲ್ಲ, ಬದಲಿಗೆ ದಿನನಿತ್ಯ ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಊಟವಿದ್ದು, ದೇಹದ ತೂಕ ಇಳಿಕೆಯಾಗಬೇಕು ಎನ್ನುವವರಿಗೆ ತುಂಬ ಸಹಕಾರಿಯಾಗಿದೆ.
ಆ 7 ದಿನಗಳ ಡಯಟ್ ಪ್ಲಾನ್ ವಿವರ ಇಲ್ಲಿದೆ:
ದಿನ 1
ಬೆಳಗಿನ ಉಪಾಹಾರ: ತರಕಾರಿ ಹಾಕಿದ ಪೋಹಾ, ಬೇಕಿದ್ದರೆ 1 ಬೇಯಿಸಿದ ಮೊಟ್ಟೆ ಅಥವಾ ಒಂದು ಕಪ್ ಮೊಸರು.
ಮಧ್ಯಾಹ್ನದ ಸ್ನ್ಯಾಕ್ಸ್: 1 ಸೇಬು ಅಥವಾ ಪೇರಳೆ ಹಣ್ಣು ಮತ್ತು 1 ವಾಲ್ನಟ್.
ಮಧ್ಯಾಹ್ನದ ಊಟ: 2 ರೋಟಿ, ಸೋರೆಕಾಯಿ ಪಲ್ಯ, ಹೆಸರು ಬೇಳೆ ಮತ್ತು ಸೌತೆಕಾಯಿ ಸಲಾಡ್.
ಸಂಜೆಯ ಸ್ನ್ಯಾಕ್ಸ್: ಹುರಿದ ಕಡಲೆ ಮತ್ತು ಹರ್ಬಲ್ ಟೀ.
ರಾತ್ರಿಯ ಊಟ: ತರಕಾರಿ ದಲಿಯಾ(ಉಪ್ಪಿಟ್ಟು) ಮತ್ತು ಒಂದು ಬಟ್ಟಲು ಮೊಸರು.

ದಿನ 2
ಬೆಳಗಿನ ಉಪಾಹಾರ: ಪುದೀನಾ ಚಟ್ನಿಯೊಂದಿಗೆ 2 ಕಡಲೆಹಿಟ್ಟಿನ ದೋಸೆ(Besan chilla).
ಮಧ್ಯಾಹ್ನದ ಸ್ನ್ಯಾಕ್ಸ್: 1 ಬಾಳೆಹಣ್ಣು ಮತ್ತು 5 ಹುರಿದ ಬಾದಾಮಿ.
ಮಧ್ಯಾಹ್ನದ ಊಟ: 1 ಬಟ್ಟಲು ವೆಜ್ ಪುಲಾವ್ (ಸಾಧ್ಯವಾದರೆ ಕಂದು ಅಕ್ಕಿ ಬಳಸಿ) ಮತ್ತು ಸೌತೆಕಾಯಿ ರಾಯ್ತ.
ಸಂಜೆಯ ಸ್ನ್ಯಾಕ್ಸ್: ಅರಿಶಿನ ಮತ್ತು ಮೆಣಸು ಬೆರೆಸಿ ಹುರಿದ ಮಖಾನ (ಲೋಟಸ್ ಅಥವಾ ಫಾಕ್ಸ್ ಸೀಡ್ಸ್).
ರಾತ್ರಿಯ ಊಟ: ಪಾಲಕ್ ಸೂಪ್, 1 ಮಲ್ಟಿಗ್ರೈನ್ ರೋಟಿ ಮತ್ತು ಬೇಯಿಸಿದ ತರಕಾರಿಗಳು.
ದಿನ 3
ಬೆಳಗಿನ ಉಪಾಹಾರ: ಸೇಬು ಮತ್ತು ಪುಡಿಮಾಡಿದ ಡ್ರೈ ಫ್ರೂಟ್ಸ್ ಒಳಗೊಂಡ ಓಟ್ಸ್ ಗಂಜಿ.
ಮಧ್ಯಾಹ್ನದ ಸ್ನ್ಯಾಕ್ಸ್: ಎಳನೀರು ಮತ್ತು 1 ಖರ್ಜೂರ.
ಮಧ್ಯಾಹ್ನದ ಊಟ: 2 ಜೋಳದ ರೊಟ್ಟಿ, ತರಕಾರಿ ಮಿಶ್ರಿತ ಪಲ್ಯ ಮತ್ತು ಹೆಸರು ಬೇಳೆ.
ಸಂಜೆಯ ಸ್ನ್ಯಾಕ್ಸ್: ಮಜ್ಜಿಗೆ ಮತ್ತು 2 ಗೋಧಿ ಹಿಟ್ಟಿನ ಖಡಕ್ ರೊಟ್ಟಿ (ಗುಜರಾತಿ ಖಾಕ್ರಾ)
ರಾತ್ರಿಯ ಊಟ: ಪನೀರ್ ತುಂಬಿದ ಸೋರೆಕಾಯಿ/ಹೀರೆಕಾಯಿ ರೋಲ್ಸ್ ಮತ್ತು ಸಲಾಡ್.
ದಿನ 4
ಬೆಳಗಿನ ಉಪಾಹಾರ: ತರಕಾರಿ ಉಪ್ಪಿಟ್ಟು ಮತ್ತು ಹಸಿರು ಚಟ್ನಿ.
ಮಧ್ಯಾಹ್ನದ ಸ್ನ್ಯಾಕ್ಸ್: 1 ಕಿತ್ತಳೆ ಹಣ್ಣು ಮತ್ತು 2 ಬಾದಾಮಿ.
ಮಧ್ಯಾಹ್ನದ ಊಟ: ಕ್ವಿನೋವಾ (Quinoa) ಕಿಚಡಿ ಮತ್ತು ಬೀಟ್‌ರೂಟ್ ಸಲಾಡ್.
ಸಂಜೆಯ ಸ್ನ್ಯಾಕ್ಸ್: ನಿಂಬೆಹಣ್ಣು ಮತ್ತು ಚಾಟ್ ಮಸಾಲಾ ಬೆರೆಸಿದ ಮೊಳಕೆಕಾಳಿನ ಚಾಟ್.
ರಾತ್ರಿಯ ಊಟ: ತರಕಾರಿಗಳ ಸೂಪ್, 1 ರೋಟಿ ಮತ್ತು 1 ಬಟ್ಟಲು ಬೇಳೆ (ದಾಲ್).
ದಿನ 5
ಬೆಳಗಿನ ಉಪಾಹಾರ: 2 ಹೆಸರುಕಾಳಿನ ರೊಟ್ಟಿ ಮತ್ತು ಪುದೀನಾ ಚಟ್ನಿ.
ಮಧ್ಯಾಹ್ನದ ಸ್ನ್ಯಾಕ್ಸ್: 1 ಚಮಚ ಪೀನಟ್ ಬಟರ್‌ನೊಂದಿಗೆ 1 ಸೇಬು.
ಮಧ್ಯಾಹ್ನದ ಊಟ: 1 ರೋಟಿ, ಬೆಂಡೆಕಾಯಿ ಪಲ್ಯ, ಮೊಸರು ಮತ್ತು ಸಲಾಡ್.
ಸಂಜೆಯ ಸ್ನ್ಯಾಕ್ಸ್: ಹುರಿದ ಫಾಕ್ಸ್ ನಟ್ಸ್ ಮತ್ತು ಗ್ರೀನ್ ಟೀ.
ರಾತ್ರಿಯ ಊಟ: ತರಕಾರಿ ಮಿಶ್ರಿತ ಓಟ್ಸ್ ರೊಟ್ಟಿ ಮತ್ತು ಟೊಮೆಟೊ ಚಟ್ನಿ.
ದಿನ 6
ಬೆಳಗಿನ ಉಪಾಹಾರ: 2 ರವೆ ಇಡ್ಲಿ ಮತ್ತು ತೆಂಗಿನಕಾಯಿ ಚಟ್ನಿ.
ಮಧ್ಯಾಹ್ನದ ಸ್ನ್ಯಾಕ್ಸ್: ಕಪ್ಪು ಉಪ್ಪು ಉದುರಿಸಿದ ಸೀಬೆಕಾಯಿ ಹೋಳುಗಳು.
ಮಧ್ಯಾಹ್ನದ ಊಟ: ಕಂದು ಅಕ್ಕಿ ಅನ್ನ, ಕಡಿಮೆ ಎಣ್ಣೆಯಲ್ಲಿ ಮಾಡಿದ ರಾಜ್ಮಾ ಮತ್ತು ಈರುಳ್ಳಿ-ಸೌತೆಕಾಯಿ ಸಲಾಡ್.
ಸಂಜೆಯ ಸ್ನ್ಯಾಕ್ಸ್: ಫ್ರೂಟ್ ಸ್ಮೂಥಿ (ಓಟ್ ಹಾಲು, ಬಾಳೆಹಣ್ಣು ಮತ್ತು ಅಗಸೆ ಬೀಜಗಳ ಮಿಶ್ರಣ).
ರಾತ್ರಿಯ ಊಟ: 1 ಸಿರಿಧಾನ್ಯದ ರೋಟಿ, ಸೋರೆಕಾಯಿ ಪಲ್ಯ ಮತ್ತು ಹೆಸರು ಬೇಳೆ.
ದಿನ 7
ಬೆಳಗಿನ ಉಪಾಹಾರ: ಮನೆಯಲ್ಲೇ ಮಾಡಿದ ವೆಜ್ ಸ್ಯಾಂಡ್‌ವಿಚ್ (ಬ್ರೌನ್ ಬ್ರೆಡ್, ಸೌತೆಕಾಯಿ, ಟೊಮೆಟೊ, ಬೀಟ್‌ರೂಟ್ ಬಳಸಿ) ಮತ್ತು ಹರ್ಬಲ್ ಟೀ.
ಮಧ್ಯಾಹ್ನದ ಸ್ನ್ಯಾಕ್ಸ್: ಮಜ್ಜಿಗೆ ಮತ್ತು 2 ಖರ್ಜೂರ.
ಮಧ್ಯಾಹ್ನದ ಊಟ: 1 ರೋಟಿ, ಮೆಂತೆ-ಆಲೂಗಡ್ಡೆ ಪಲ್ಯ, ಕಡಲೆ ಬೇಳೆ ಮತ್ತು ಸಲಾಡ್.
ಸಂಜೆಯ ಸ್ನ್ಯಾಕ್ಸ್: ಪರಂಗಿ ಮತ್ತು ಸೇಬು
ರಾತ್ರಿಯ ಊಟ: ಜುಚಿನಿ (Zucchini) ಸೂಪ್, 1 ರೋಟಿ, ಎಣ್ಣೆ ಬಳಸದೆ ಗ್ರಿಲ್ ಮಾಡಿದ ಪನೀರ್.
ಸ್ವಲ್ಪ ಸಮಯ ಕಠಿಣ ಡಯಟ್ ಅಥವಾ ಉಪವಾಸ ಮಾಡುವುದಕ್ಕಿಂತ ನಿರಂತರವಾಗಿ ಇಂತಹ ಆರೋಗ್ಯಕರ ಹಾಗೂ ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವುದು ತೂಕ ಇಳಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಫಿಟ್‌ನೆಸ್ ತಜ್ಞರು ಸಲಹೆ ನೀಡಿದ್ದಾರೆ.












Click it and Unblock the Notifications