ಸೋಂಫಿನ ಶರಬತ್ತು ಕುಡಿಯುವುದರಿಂದ ನಿವಾರಣೆಯಾಗುವುದು ಬೇಸಿಗೆಯಲ್ಲಿ ಕಾಡುವ ಈ ಸಮಸ್ಯೆಗಳು
ಸೋಂಫಿನ ಶರಬತ್ ಕುಡಿಯುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳಾಗುವುದು. ಬೇಸಿಗೆಯಲ್ಲಿ ಸೋಂಫು ಸೇವಿಸುವುದರಿಂದ ದೇಹ ತಂಪಾಗುವುದರ ಜೊತೆಗೆ ಎದುರಾಗುವ ವಿವಿಧ ಸಮಸ್ಯೆಗಳು ಕೂಡಾ ನಿವಾರಣೆಯಾಗುವುದು. ಇದೇ ಕಾರಣಕ್ಕಾಗಿ ನಮ್ಮಲ್ಲಿ ಅನೇಕರು ಬೇಸಿಗೆಯಲ್ಲಿ ಸೋಂಫು ನೆನಸಿಟ್ಟ ನೀರನ್ನು ಸೇವಿಸುತ್ತಾರೆ. ಸೋಂಫಿನ ನೀರು ಕುಡಿಯುವುದು ಇಷ್ಟವಿಲ್ಲ ಎನ್ನುವವರು ಸೋಂಫಿನಿಂದ ತಯಾರಿಸಿದ ಶರಬತ್ತನ್ನು ಸೇವಿಸಬಹುದು. ಇದು ಕೂಡಾ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸೋಂಫಿನ ಶರಬತ್ತು ಸೇವಿಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ:
ಜೀರ್ಣಕ್ರಿಯೆಯನ್ನು ಸುಧಾರಿಸುವುದು:
ಗ್ಯಾಸ್, ಅಜೀರ್ಣ ಅಥವಾ ಆಸಿಡಿಟಿಯಿಂದ ಬಳಲುತ್ತಿದ್ದರೆ, ಬೇಸಿಗೆಯಲ್ಲಿ ಈ ಸಮಸ್ಯೆ ನಿವಾರಣೆಗೆ ಸೋಂಫಿನ ಶರಬತ್ತು ಪ್ರಯೋಜನಕಾರಿಯಾಗಿದೆ. ಸೋಂಪು ಬೀಜಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಈ ಶರಬತ್ತು ಏಲಕ್ಕಿಯಂತಹ ಪದಾರ್ಥಗಳನ್ನು ಕೂಡಾ ಒಳಗೊಂಡಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಡಿಹೈಡ್ರೇಶನ್ ಸಮಸ್ಯೆಯಿಂದ ಮುಕ್ತಿ :
ಬೇಸಿಗೆಯಲ್ಲಿ ಡಿಹೈಡ್ರೇಶನ್ ಸಮಸ್ಯೆ ನಮ್ಮನ್ನು ಹೆಚ್ಚಾಗಿ ಬಾಧಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಸೋಂಫಿನ ಶರಬತ್ತು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಡಿಹೈಡ್ರೇಶನ್ ಅನ್ನು ತಡೆಯುತ್ತದೆ.
ಆಯಾಸವನ್ನು ಕಡಿಮೆ ಮಾಡುತ್ತದೆ:
ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕು ಮತ್ತು ಶಾಖದಿಂದಾಗಿ, ದೇಹವು ಅತಿಯಾಗಿ ಬೆವರುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಹೀಗಾದಾಗ ದೇಹ ತುಂಬಾ ದಣಿಯುತ್ತದೆ. ಡಿಹೈಡ್ರೇಶನ್‌ನಿಂದ ಉಂಟಾಗುವ ಆಯಾಸವನ್ನು ಕಡಿಮೆ ಮಾಡಲು, ಸೋಂಫಿನ ಶರಬತ್ತನ್ನು ಸೇವಿಸಬಹುದು. ಈ ಪಾನೀಯವು ದೇಹವನ್ನು ದಿನವಿಡೀ ಚೈತನ್ಯದಿಂದ ಇರಿಸುವಂತೆ ಮಾಡುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ:
ಸೋಂಫಿನ ಶರಬತ್ತು ಕಣ್ಣುಗಳ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. ಇದು ಸ್ಮರಣಶಕ್ತಿಯನ್ನೂ ಸುಧಾರಿಸುತ್ತದೆ. ಬೇಸಿಗೆಯಲ್ಲಿ ಕಣ್ಣಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ಸೋಂಫಿನ ಶರಬತ್ತಿನಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದು.
ಚರ್ಮಕ್ಕೂ ಪರಿಣಾಮಕಾರಿ:
ಸೋಂಫಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಹೊಳಪು ಕಳೆದುಕೊಳ್ಳುವ ಚರ್ಮದ ಕಾಂತಿಯನ್ನು ಹೆಚ್ಚಿಸಲು ಈ ಶರಬತ್ತು ಸಹಾಯ ಮಾಡುತ್ತದೆ.
ಸೋಂಫಿನ ಶರಬತ್ತು ತಯಾರಿಸುವುದು ಹೇಗೆ?:
ಮನೆಯಲ್ಲಿಯೇ ಸುಲಭವಾಗಿ ಸೋಂಫಿನ ಶರಬತ್ತು ತಯಾರಿಸಬಹುದು.
ಸೋಂಫಿನ ಶರಬತ್ತು ತಯಾರಿಸಲ ಅಗತ್ಯವಿರುವ ವಸ್ತುಗಳು:
ಸಣ್ಣಗೆ ಹೆಚ್ಚಿದ ಸೋಂಪು ಬೀಜಗಳು - ಅರ್ಧ ಕಪ್
ಕಲ್ಲು ಸಕ್ಕರೆ - 200 ಗ್ರಾಂ
ಹಸಿರು ಏಲಕ್ಕಿ - 5-6
ಕರಿಮೆಣಸು - 5-7
ನೀರು - ಅಗತ್ಯಕ್ಕೆ ತಕ್ಕಂತೆ
ನಿಂಬೆ ರಸ - 1 ಟೀಸ್ಪೂನ್
ಕಪ್ಪು ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಶರಬತ್ತು ತಯಾರಿಸಲು, ಸೋಂಫನ್ನು ರಾತ್ರಿಯಿಡೀ ನೆನೆಸಿಡಬೇಕು. ಸೋಂಫು ಬೀಜಗಳಿಗೆ ಕರಿಮೆಣಸು, ಹಸಿರು ಏಲಕ್ಕಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಚೆನ್ನಾಗಿ ಪುಡಿಮಾಡಿಕೊಳ್ಳಬೇಕು. ನಂತರ, ನಿಂಬೆ ರಸ ಮತ್ತು ಬ್ಲಾಕ್ ಸಾಲ್ಟ್ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಕೆಲವು ಐಸ್ ಕ್ಯೂಬ್‌ಗಳನ್ನು ಸೇರಿಸಿ ಕುಡಿಯಿರಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications