Beware! ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದರೆ ತಕ್ಷಣ ತೆಗೆದುಬಿಡಿ... ಯಾಕೆಂದರೆ..
ದೀರ್ಘಕಾಲದವರೆಗೆ ತಾಜಾವಾಗಿರಲೆಂದು ತರಕಾರಿ ಮತ್ತು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಲಾಗುತ್ತದೆ. ಆದರೆ ನಾವು ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರಿಜ್ನಲ್ಲಿ ಇಡಲು ಸಾಧ್ಯವಿಲ್ಲ. ಅದರಲ್ಲೂ ಕೆಲವು ಹಣ್ಣುಗಳನ್ನು ಮಾತ್ರ ಫ್ರಿಡ್ಜ್‌ನಲ್ಲಿಡಬೇಕು. ಏಕೆಂದರೆ ಕೆಲವು ಹಣ್ಣುಗಳು ಫ್ರಿಡ್ಜ್ ನಲ್ಲಿಟ್ಟರೆ ಕೆಟ್ಟು ಹೋಗುತ್ತವೆ ಅಥವಾ ವಿಷಕಾರಿಯಾಗುತ್ತವೆ.
ಫ್ರಿಜ್ನಲ್ಲಿ ತಿರುಳಿನ ಹಣ್ಣುಗಳನ್ನು ಇರಿಸಿದರೆ ಅವು ಕಂದುಬಣ್ಣಕ್ಕೆ ಹೋಗುತ್ತವೆ ಮತ್ತು ದೇಹಕ್ಕೆ ಹಾನಿಯನ್ನುಂಟುಮಾಡುತ್ತವೆ. ಹಾಗಾದರೆ ಯಾವ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅವುಗಳಲ್ಲಿರುವ ಪೋಷಕಾಂಶಗಳನ್ನು ನಾಶವಾಗುತ್ತದೆ ಮತ್ತು ಒಳ್ಳೆಯದಕ್ಕೆ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುತ್ತವೆ ಎಂದು ಈಗ ನೋಡೋಣ. ನೀವೇನಾದ್ರು ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದರೆ ಅದನ್ನು ಕೂಡಲೇ ತೆಗೆದುಬಿಡಿ.

ಬಾಳೆಹಣ್ಣು
ಹೆಚ್ಚಿನವರ ಮನೆಗಳಲ್ಲಿ ಯಾವಾಗಲೂ ಇರುವ ಹಣ್ಣೆಂದರೆ ಅದು ಬಾಳೆಹಣ್ಣು. ಮುಖ್ಯವಾಗಿ ಬಾಳೆಹಣ್ಣು ಕೂಡ ಎಲ್ಲ ಕಾಲದಲ್ಲೂ ಕಡಿಮೆ ಬೆಲೆಗೆ ಸಿಗುವ ಹಣ್ಣು. ಅಂತಹ ಬಾಳೆಹಣ್ಣನ್ನು ಎಂದಿಗೂ ಫ್ರಿಜ್ನಲ್ಲಿ ಇಡಬಾರದು. ಹಾಗೆ ಇಟ್ಟರೆ ಬಾಳೆಹಣ್ಣು ಬೇಗ ಕಪ್ಪಾಗುತ್ತದೆ. ಅಲ್ಲದೆ ಬಾಳೆಹಣ್ಣಿನಿಂದ ಬಿಡುಗಡೆಯಾಗುವ ಎಥಿಲೀನ್ ಅನಿಲವು ಇತರ ಹಣ್ಣುಗಳನ್ನು ತ್ವರಿತವಾಗಿ ಹಣ್ಣಾಗುವಂತೆ ಮಾಡುತ್ತದೆ. ಹಾಗಾಗಿ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಅಥವಾ ಇತರ ಹಣ್ಣುಗಳೊಂದಿಗೆ ಎಂದಿಗೂ ಇಡಬೇಡಿ.
ಕಲ್ಲಂಗಡಿ
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಹೆಚ್ಚು ಖರೀದಿಸಿ ತಿನ್ನುವ ಹಣ್ಣು. ಹಣ್ಣು ತುಂಬಾ ದೊಡ್ಡದಾಗಿರುತ್ತದೆ. ಇದನ್ನು ಕತ್ತರಿಸಿದರೆ ಒಮ್ಮೆ ತಿನ್ನಲು ಸಾಧ್ಯವಿಲ್ಲ. ಇದರಿಂದಾಗಿ ಅನೇಕರು ಕತ್ತರಿಸಿದ ಕಲ್ಲಂಗಡಿ ಚೂರುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಕಲ್ಲಂಗಡಿ ಹಣ್ಣನ್ನು ಎಂದಿಗೂ ಫ್ರಿಜ್ನಲ್ಲಿ ಇಡಬಾರದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ನಾಶವಾಗುತ್ತದೆ. ಹಾಗಾಗಿ ಮುಂದಿನ ಬಾರಿ ಈ ತಪ್ಪು ಮಾಡಬೇಡಿ.
ಸೇಬುಹಣ್ಣು
ಬಾಳೆಹಣ್ಣಿನ ನಂತರ ಹೆಚ್ಚಿನವರು ಖರೀದಿಸಿ ತಿನ್ನಬಹುದಾದ ಹಣ್ಣು ಸೇಬು. ಈ ಸೇಬಿನ ಬೆಲೆ ಜಾಸ್ತಿಯಾದರೂ ದಿನವೂ ಸೇಬು ತಿಂದರೆ ವೈದ್ಯರ ಬಳಿ ಹೋಗಬೇಕಿಲ್ಲ ಎನ್ನುವ ಕಾರಣಕ್ಕೆ ಹಲವರು ಸೇಬು ಖರೀದಿಸಿ ತಿನ್ನುತ್ತಾರೆ. ಸೇಬು ಖರೀದಿಸುವಾಗ ಹೆಚ್ಚು ಸೇಬು ಖರೀದಿ ಮಾಡಿ ಅವುಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ.

ಆದರೆ ಸೇಬುಗಳನ್ನು ಫ್ರಿಜ್ ನಲ್ಲಿಟ್ಟರೆ ಬೇಗ ಹಣ್ಣಾಗುತ್ತವೆ. ಇದರಲ್ಲಿರುವ ಸಕ್ರಿಯ ಕಿಣ್ವಗಳು ಇದಕ್ಕೆ ಕಾರಣ. ಹಾಗಾಗಿ ಸೇಬನ್ನು ಯಾವಾಗಲೂ ಫ್ರಿಡ್ಜ್ ನಲ್ಲಿ ಇಡಬೇಡಿ. ಸೇಬಿನ ಹೊರತಾಗಿ, ಪ್ಲಮ್, ಚೆರ್ರಿ ಮತ್ತು ಪೀಚ್‌ಗಳಂತಹ ಹಣ್ಣುಗಳನ್ನು ಸಹ ಫ್ರಿಜ್‌ನಲ್ಲಿ ಇಡುವುದನ್ನು ತಪ್ಪಿಸಬೇಕು.
ಮಾವು
ಮಾವಿನಹಣ್ಣನ್ನು ಎಂದಿಗೂ ಫ್ರಿಜ್‌ನಲ್ಲಿಡಬಾರದು. ಹಾಗೆ ಇಟ್ಟುಕೊಂಡರೆ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. ಮತ್ತು ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು ಸಹ ಕೆಡಲು ಪ್ರಾರಂಭಿಸುತ್ತವೆ. ಹಾಗಾಗಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.
ಲಿಚಿ
ಲಿಚಿ ಬೇಸಿಗೆಯಲ್ಲಿ ಹೆಚ್ಚು ಲಭ್ಯವಿರುವ ಹಣ್ಣು. ಈ ಲಿಚಿ ಹಣ್ಣು ತುಂಬಾ ರುಚಿಯನ್ನು ಹೊಂದಿರುತ್ತದೆ. ಅನೇಕರು ಈ ಹಣ್ಣನ್ನು ಖರೀದಿಸಿ ಕೆಡದಂತೆ ಫ್ರಿಡ್ಜ್ ನಲ್ಲಿಡುತ್ತಾರೆ. ನೀವು ಈ ಹಣ್ಣನ್ನು ತಣ್ಣಗಾಗಿಸಿದರೆ, ಅದರ ಮೇಲ್ಭಾಗವು ಹಾಳಾಗುತ್ತದೆ. ಅದರ ಒಳಭಾಗವು ಹಾಳಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಈ ಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.
ಸಿಟ್ರಸ್ ಹಣ್ಣುಗಳು
ನಿಂಬೆ ಮತ್ತು ಕಿತ್ತಳೆಯಂತಹ ಹಣ್ಣುಗಳು ಹುಳಿ ರುಚಿಯನ್ನು ಹೊಂದಿರುತ್ತವೆ. ಏಕೆಂದರೆ ಅವುಗಳಲ್ಲಿ ಸಿಟ್ರಿಕ್ ಆಮ್ಲ ಅಧಿಕವಾಗಿರುತ್ತದೆ. ಸಿಟ್ರಿಕ್ ಆಮ್ಲ ಅಧಿಕವಿರುವ ಹಣ್ಣುಗಳು ಶೀತ ವಾತಾವರಣದಲ್ಲಿ ಹಾಳಾಗಿ ಹೋಗುತ್ತವೆ. ಅವುಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿದಾಗ, ಅವುಗಳಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಕೊಳೆಯಲು ಪ್ರಾರಂಭಿಸುತ್ತವೆ. ಹೆಚ್ಚುವರಿಯಾಗಿ ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಇತರ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಇರಿಸಿದಾಗ, ಅವು ಇತರ ಆಹಾರಗಳನ್ನು ತ್ವರಿತವಾಗಿ ಕೆಡಿಸಬಹುದು. ಹಾಗಾಗಿ ಸಿಟ್ರಸ್ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡುವುದನ್ನು ತಪ್ಪಿಸಿ.











Click it and Unblock the Notifications