Deepavali 2023: ದೀಪಾವಳಿಯಂದು ಈ ಪ್ರಾಣಿ-ಪಕ್ಷಿ ಕಂಡರೆ ತುಂಬಾ ಒಳ್ಳೆಯದು... ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ ಎಂದರ್ಥ..
ದೀಪಾವಳಿಯು ಪ್ರತಿ ವರ್ಷ ಕುತೂಹಲದಿಂದ ಕಾಯುವ ಹಬ್ಬವಾಗಿದೆ. ಮೂರು ದಿನಗಳ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಸಾಧಿಸಿದ ದಿನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ದಿನ ಪಟಾಕಿ ಸಿಡಿಸುವುದಷ್ಟೇ ಅಲ್ಲ, ಲಕ್ಷ್ಮಿ ಮತ್ತು ಗಣೇಶನಿಗೆ ವಿಶೇಷ ಪೂಜೆಗಳನ್ನೂ ಮಾಡಲಾಗುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಮತ್ತು ಜೀವನ ಸಮೃದ್ಧವಾಗಿರುತ್ತದೆ ಎಂದು ನಂಬಲಾಗಿದೆ.

ಈ ವರ್ಷದ ದೀಪಾವಳಿ ಹಬ್ಬ ಬಹಳ ವಿಶೇಷವಾಗಿದೆ. ಏಕೆಂದರೆ ಈ ದೀಪಾವಳಿಯ ದಿನದಂದು ಕೆಲವು ಶುಭ ಯೋಗಗಳು ಮತ್ತು ಗ್ರಹಗಳ ಅಪರೂಪದ ಸ್ಥಾನ ಬದಲಾವಣೆ ಉಂಟಾಗುತ್ತದೆ. ಇದರ ಫಲವಾಗಿ ಈ ದೀಪಾವಳಿಯು ಅನೇಕ ಪ್ರಯೋಜನಗಳನ್ನು ತರುತ್ತದೆ.
ದೀಪಾವಳಿಯಂದು ಸಂಪತ್ತಿಗಾಗಿ ನೀವು ಮಾಡುವ ಲಕ್ಷ್ಮಿ ಪೂಜೆಯಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗಿದ್ದರೆ ಮನೆಗೆ ಭೇಟಿ ನೀಡುತ್ತಾಳೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ದೀಪಾವಳಿಯ ದಿನದಂದು ಕೆಲವನ್ನು ನೋಡುವುದು ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತದೆ. ಹಾಗಾದರೆ ಅವು ಯಾವುವು ಎಂದು ಈಗ ನೋಡೋಣ.
ಗೂಬೆ
ದೀಪಾವಳಿಯ ರಾತ್ರಿ ಗೂಬೆಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದ ರಾತ್ರಿಯಲ್ಲಿ ನೀವು ಗೂಬೆಯನ್ನು ನೋಡಿದರೆ, ನಿಮಗೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ ಇದೆ ಎಂದರ್ಥ. ಏಕೆಂದರೆ ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ. ಹಾಗಾಗಿ ದೀಪಾವಳಿಯಂದು ಗೂಬೆಯನ್ನು ಕಂಡರೆ ನಿಮಗೆ ಅದೃಷ್ಟ.
ಮುಳ್ಳುಹಂದಿ
ನಂಬಿಕೆಗಳ ಪ್ರಕಾರ ದೀಪಾವಳಿಯ ದಿನದಂದು ನಿಮ್ಮ ಮನೆಯಲ್ಲಿ ಮುಳ್ಳುಹಂದಿನ್ನು ಕಂಡರೆ, ಕುಬೇರನ ವಿಶೇಷ ಕೃಪೆ ನಿಮ್ಮ ಮೇಲಿದೆ ಎಂದರ್ಥ. ಹೆಚ್ಚು ಹಣ ಕೈಯಲ್ಲಿ ಸಂಗ್ರಹವಾಗುತ್ತದೆ. ಸಾಕಷ್ಟು ಹಣ ಗಳಿಸುವ ಅವಕಾಶವಿರುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ದೊರೆಯಲಿದೆ.
ಹಸು
ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ವವಿದೆ. ಎಲ್ಲಾ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಸುವನ್ನು ಕಂಡರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಭೇಟಿ ನೀಡುತ್ತಿದ್ದಾಳೆ ಎಂದರ್ಥ. ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ನೀವು ಅಂದುಕೊಂಡಿದ್ದರಲ್ಲಿ ಯಶಸ್ಸು ಸಿಗುತ್ತದೆ.
ಹಲ್ಲಿ
ಹಲ್ಲಿಗಳು ಎಲ್ಲ ಮನೆಗಳಲ್ಲೂ ಸಾಮಾನ್ಯ. ಆದರೆ ದೀಪಾವಳಿಯ ದಿನದಂದು ನಿಮ್ಮ ಮನೆಯಲ್ಲಿ ಹಲ್ಲಿಯನ್ನು ನೀವು ಹೆಚ್ಚಾಗಿ ನೋಡಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಭೇಟಿ ನೀಡಲಿದ್ದಾಳೆ ಎಂದರ್ಥ ಲಕ್ಷ್ಮಿ ದೇವಿಯ ಕೃಪೆಯಿಂದ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತವೆ.
ಬೆಕ್ಕು
ನಂಬಿಕೆಗಳ ಪ್ರಕಾರ ದೀಪಾವಳಿಯಂದು ರಾತ್ರಿಯಲ್ಲಿ ಬೆಕ್ಕನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಜೀವನದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಲಕ್ಷ್ಮಿ ದೇವಿಯ ಕೃಪೆಯಿಂದ ನೀವು ಉತ್ತಮ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications