ತೂಕ ಇಳಿಕೆಗೆ ಕರಿಬೇವು ಸೂಪರ್‌ಫುಡ್! ದಿನವೂ ಸೇವಿಸಿದರೆ ಈ ಬದಲಾವಣೆ ಖಚಿತ
ಆಹಾರಕ್ಕೆ ರುಚಿಯನ್ನು ಹೆಚ್ಚಿಸುವ ಸಾಮಾನ್ಯ ಪದಾರ್ಥವೆಂದೇ ಕರಿಬೇವು ಎಲೆಗಳನ್ನು ನಾವು ಬಳಸುತ್ತೇವೆ. ಆದರೆ ಈ ಸಣ್ಣ ಎಲೆಗಳಲ್ಲಿ ಅಡಗಿರುವ ಆರೋಗ್ಯ ಲಾಭಗಳನ್ನು ನೀವು ತಿಳಿದರೆ ಅಚ್ಚರಿ ಪಡುತ್ತೀರಿ. ಪೋಷಕಾಂಶಗಳ ಭಂಡಾರವಾಗಿರುವ ಕರಿಬೇವು, ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕರಿಬೇವುಗಳಲ್ಲಿ ಆಂಟಿಆಕ್ಸಿಡೆಂಟ್ಸ್, ಫ್ಲೇವನಾಯ್ಡ್ಸ್, ವಿಟಮಿನ್ C ಹಾಗೂ ವಿಟಮಿನ್ A ಸಮೃದ್ಧವಾಗಿದೆ. ಇವು ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಕಾರಿಯಾಗುತ್ತವೆ. ಜೊತೆಗೆ ಇದರಲ್ಲಿ ಇರುವ ಪೊಟ್ಯಾಸಿಯಂ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುವವರು ಬೆಳಗ್ಗೆ ಖಾಲಿ ಹೊಟ್ಟೆಗೆ ಕರಿಬೇವು ಕಷಾಯ ಅಥವಾ ಚಹಾ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಬಹುದು.

ಕರಿಬೇವು ಸೇವಿಸುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಕರಿಬೇವುಗಳಲ್ಲಿ ಇರುವ ಅಂಶಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವ ಎಂಜೈಮ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಇದರಿಂದ ಹೊಟ್ಟೆ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಇದರ ಆಂಟಿ-ಇನ್ಫ್ಲಮೇಟರಿ ಗುಣಗಳು ಚರ್ಮದ ಸಮಸ್ಯೆಗಳ ನಿವಾರಣೆಯಲ್ಲಿಯೂ ಸಹಾಯಕವಾಗಿವೆ.
ಕರಿಬೇವು ದಿನನಿತ್ಯ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ನೈಸರ್ಗಿಕ ಪರಿಹಾರವಾಗಿದೆ. ಇದರಲ್ಲಿರುವ ಕಾರ್ಬಜೋಲ್ ಆಲ್ಕಲಾಯ್ಡ್ಸ್ ದೇಹದ ಮೆಟಾಬಾಲಿಸಂ ಅನ್ನು ಹೆಚ್ಚಿಸಿ ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡುತ್ತವೆ. ಇದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ಜೊತೆಗೆ ಕರಿಬೇವುಗಳಲ್ಲಿ ಇರುವ ಫೈಬರ್ ಮತ್ತು ವಿಟಮಿನ್ B ದೇಹದ ಕ್ಯಾಲೊರಿ ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಕರಿಬೇವು ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕುವಲ್ಲಿ ಸಹ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಫ್ಯಾಟಿ ಲಿವರ್ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಗಳನ್ನೂ ನಿಯಂತ್ರಿಸಬಹುದು. ವಿಷ ಪದಾರ್ಥಗಳು ಕಡಿಮೆಯಾಗುವ ಮೂಲಕ ತೂಕ ಇಳಿಕೆಗೆ ಸಹಾಯವಾಗುತ್ತದೆ.
ಕರಿಬೇವು ಬಳಸುವ ವಿಧಾನವೂ ತುಂಬಾ ಸುಲಭವಾಗಿದೆ. ಕೆಲವು ಎಲೆಗಳನ್ನು ನೀರಲ್ಲಿ ಕುದಿಸಿ ಚಹಾ ರೂಪದಲ್ಲಿ ಸೇವಿಸಬಹುದು. ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕೆಲವು ಕಚ್ಚಾ ಎಲೆಗಳನ್ನು ಚಪ್ಪರಿಸುವುದೂ ಒಳ್ಳೆಯದು. ಆಹಾರದಲ್ಲಿ ಕರಿಬೇವು ಸೇರಿಸುವುದರಿಂದ ರುಚಿ ಹೆಚ್ಚುವುದರ ಜೊತೆಗೆ ಆರೋಗ್ಯಕ್ಕೂ ಲಾಭವಾಗುತ್ತದೆ. ಕರಿಬೇವು ನೈಸರ್ಗಿಕವಾಗಿ ತೂಕ ಇಳಿಕೆ ಮತ್ತು ಆರೋಗ್ಯ ಸುಧಾರಣೆಗೆ ಸಹಾಯಕವಾಗುತ್ತದೆ. ಆದರೆ ಉತ್ತಮ ಫಲಿತಾಂಶಕ್ಕಾಗಿ ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ.














Click it and Unblock the Notifications