Coriander Bajji Recipe: ಸಂಜೆ ಆಯ್ತು ಕೊತ್ತಂಬರಿ ಬಜ್ಜಿ ತಿನ್ನೋಣ ಬನ್ನಿ.....
ಇದು ಮಳೆಗಾಲ. ಮಳೆ ಹೋಯ್ತು ಅಂತ ಹೊರಗಡೆ ಕಾಲಿಟ್ಟರೆ ಸಾಕು ಜಿಟಿ ಜಿಟಿ ಮಳೆ ಬರಲು ಶುರುವಾಗುತ್ತದೆ. ಇನ್ನೂ ಸೂರ್ಯನಿಗೆ ಮೋಡ ಶಾಶ್ವತವಾಗಿ ರಜೆ ನೀಡಿದಂತೆ ಕಾಣಿಸುತ್ತಿದೆ. ಮೋಡ, ತಣ್ಣನೆ ಗಾಳಿ, ಮಳೆ ಈ ವಾತಾವರಣಕ್ಕೆ ಮನಸ್ಸು ಬಯಸೋದು ಬಿಸಿ ಬಿಸಿ ಬಜ್ಜಿಯನ್ನ. ಇಂಥಹ ಬಜ್ಜಿ ಪ್ರಿಯರಿಗೆ ವಿಧವಿಧವಾದ ಬಜ್ಜಿ ಆಯ್ಕೆ ಮಾಡಿಕೊಳ್ಳಲು ಮಾರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಕೊತ್ತಂಬರಿ ಬಜ್ಜಿ ಕೂಡ ಒಂದು.
ಕೊತ್ತಂಬರಿ ಬಜ್ಜಿಯನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದು ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುತ್ತದೆ. ಜೊತೆಗೆ ಗರಿಗರಿಯಾಗಿ ರುಚಿಯಾಗಿರುತ್ತದೆ. ಮನೆಯಲ್ಲಿ ಕೊತ್ತಂಬರಿ ಹಾಗೂ ಕಡಲೇಬೇಳೆ ಹಿಟ್ಟು ಇದ್ದರೆ ಸಾಕು ಈ ಬಜ್ಜಿಯನ್ನ ಫಟಾಫಟ್ ಅಂತ ತಯಾರಿಸಿಬಿಡಬಹುದು.

ಹಾಗಾದರೆ ತಡ ಮಾಡುವುದು ಬೇಡ ಕೊತ್ತಂಬರಿ ಬಜ್ಜಿ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಕೊತ್ತಂಬರಿ ಬಜ್ಜಿಯನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಕೊತ್ತಂಬರಿ ಬಜ್ಜಿ ತಯಾರಿಸಲು ಬೇಕಾಗುವ ಪದಾರ್ಥಗಳು:
* ಕೊತ್ತಂಬರಿ ಬಜ್ಜಿ ಒಂದು ಕಟ್ಟು
* ಕಡಲೇಬೇಳೆ ಹಿಟ್ಟು ಕಾಲ್ ಕೆಜಿ
* ಸೋಡಾ ಚಿಟಿಕೆಯಷ್ಟು
* ರುಚಿಗೆ ತಕ್ಕಷ್ಟು ಉಪ್ಪು
* ಹಸಿರು ಮೆಣಸಿನಕಾಯಿ 5
* ಮೊಟ್ಟೆ (ಬೇಕಿದ್ದಲ್ಲಿ ಮಾತ್ರ)
* ಸ್ವಲ್ಪ ಅರಿಶಿಣ
* ಎಣ್ಣೆ - ಕರಿಯಲು ಬೇಕಾಗುವಷ್ಟು
*ಓಂಕಾಳು ಸ್ವಲ್ಪ

ಕೊತ್ತಂಬರಿ ಬಜ್ಜಿ ತಯಾರಿಸುವ ವಿಧಾನ:
* ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಒಂದೊಂದೇ ಕಡ್ಡಿಯನ್ನು ಬಿಡಿಸಿಕೊಂಡು ಅದರ ಬೇರು ಮಾತ್ರ ತೆಗೆದು ಸ್ವಚ್ಚವಾಗಿ ತೊಳೆದು ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಿ.
* ಮತ್ತೊಂದು ಪಾತ್ರೆಯಲ್ಲಿ ಕಡಲೇಬೇಳೆ ಹಿಟ್ಟು ಜರಡಿ ಹಿಡಿದು ಸ್ವಲ್ಪ ಸ್ವಲ್ಪ ನೀರು ಹಾಕಿ ಗಂಟಾಗದಂತೆ ಕಲಿಸಿ
* ಬಳಿಕ ಈ ಹಿಟ್ಟಿಗೆ ಬೇಕಿದ್ದಲ್ಲಿ ಮಾತ್ರ ಒಂದು ಮೊಟ್ಟೆಯನ್ನು ಹಾಕಿ ಕಲಸಿ. ಬೇಡವಾದರೆ ಇದನ್ನು ಸ್ಕಿಪ್ ಮಾಡಬಹುದು.
* ನಂತರ ಈ ಹಿಟ್ಟಿಗೆ ಉಪ್ಪು, ಸೋಡಾ, ಅರಿಶಿಣ, ಓಂಕಾಳು (ಬದಲಿಗೆ ಜೀರಿಗೆ ಕೂಡ ಬಳಸಬಹುದು) ಹಾಕಿ ಚೆನ್ನಾಗಿ ಕಲಸಿ.
* ಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಈ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ
* ಸ್ವಲ್ಪ ಹೊತ್ತು ಹಿಟ್ಟನ್ನು ಒಂದು ಪಾತ್ರೆಯಿಂದ ಮುಚ್ಚಿ ಬಿಟ್ಟುಬಿಡಿ.
* ಒಲೆಯ ಮೇಲೆ ಬಜ್ಜಿ ಕರಿಯಲು ಬೇಕಾಗುಷ್ಟು ಎಣ್ಣೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಿ..
* ನಂತರ ಹಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪನ್ನು ಅದ್ದಿ ಅದನ್ನು ಎಣ್ಣೆಯಲ್ಲಿ ಬಿಡಿ.
* ಸಣ್ಣ ಉರಿಯಲ್ಲಿ ಬಜ್ಜಿಯನ್ನು ಕರಿದರೆ ಗರಿಗರಿಯಾದ ಕೊತ್ತಂಬರಿ ಬಜ್ಜಿ ಸವಿಯಲು ಸಿದ್ಧ.












Click it and Unblock the Notifications