Weight Loss: ಯೋಗ, ವ್ಯಾಯಮ ಯಾವುದರಿಂದ ತೂಕ ಕಡಿಮೆ ಆಗುತ್ತದೆ?
ಈಗಿನ ಜಗತ್ತಿನಲ್ಲಿ ಬೊಜ್ಜು ಎನ್ನುವುದು ಸಾಂಕ್ರಾಮಿಕ ರೋಗದಂತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬೇಸತ್ತಿರುವ ಜನ ತರಹೆವಾರಿ ಪ್ರಯತ್ನಗಳನ್ನು ಮಾಡುತ್ತಾರೆ. ಅದರಲ್ಲಿ ಡಯಟ್, ವಾಕಿಂಗ್, ಜಾಗಿಂಗ್, ಜಿಮ್, ಯೋಗಾ ಹೀಗೆ ಹಲವು ರೀತಿಯಲ್ಲಿ ದೇಹ ದಂಡನೆ ಮಾಡಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನ ನಡೆಸಿರುತ್ತಾರೆ. ಅದರಲ್ಲೂ ಹಲವು ಜನರು ಯಶಸ್ವಿ ಸಹ ಆಗಿರುತ್ತಾರೆ.
ಸಾಮಾನ್ಯವಾಗಿ ನಾವು ವಾಕಿಂಗ್, ವ್ಯಾಯಾಮ, ಯೋಗ ಮಾಡುವ ಜನರನ್ನು ಹೆಚ್ಚಾಗಿ ನೋಡುತ್ತೇವೆ. ಇದರಿಂದ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಂಡು ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸುತ್ತಾರೆ. ವಾಕಿಂಗ್ ಮಾಡಲು, ಯೋಗ ಮಾಡಲು ಯಾವುದೇ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಜನ ಈ ಎರಡರಲ್ಲಿ ಒಂದನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿರುತ್ತಾರೆ. ಈಗಂತೂ ವಿಶ್ವದಲ್ಲೇ ಯೋಗವನ್ನು ಹೆಚ್ಚು ಜನರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಫಿಟ್ ಆಗಿರಲು ಶ್ರಮಿಸುತ್ತಿದ್ದಾರೆ. ಜೂನ್ 21ರಂದು ವಿಶ್ವದಲ್ಲೇ ಯೋಗ ದಿನ ಎಂದು ಆಚರಿಸಲಾಗುತ್ತಿದೆ.

ತೂಕ ಇಳಿಸಲು ಯಾವುದು ಬೆಸ್ಟ್?
ವಾಕಿಂಗ್ ಹೆಚ್ಚು ಕಡಿಮೆ 40 ನಿಮಿಷ ಮಾಡಿದರೆ ಅದರ ಪ್ರಯೋಜನಗಳನ್ನು ಹೆಚ್ಚಾಗಿ ಪಡೆಯಬಹುದು. ಇದನ್ನು ಅರಿತ ಜನರು ಬೆಳಗ್ಗೆ ಹಾಗೂ ಸಾಯಂಕಾಲದಲ್ಲಿ ಈ ವ್ಯಾಯಾಮವನ್ನು ಮಾಡುತ್ತಾರೆ. ಇನ್ನು ಯೋಗ ಸಹ ಹಾಗೆ ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಮಾಡಬಹುದು. ಇದಕ್ಕೂ ಸರಿ ಸುಮಾರು ಇಷ್ಟೆ ಸಮಯ ಹಿಡಿಯುತ್ತದೆ. ಹೀಗಾಗಿ ಜನರು ಇದಕ್ಕೂ ಒತ್ತು ನೀಡುತ್ತಾರೆ. ಇವುಗಳಲ್ಲಿ ಯಾವುದನ್ನು ಮಾಡುವುದರಿಂದ ತೂಕ ನಷ್ಟ ಹೆಚ್ಚಾಗುತ್ತದೆ ಎಂಬ ಬಗ್ಗೆ ಯೋಚಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಲೇಖನ ಇಲ್ಲಿದೆ.
ಓಟವು ಹೃದಯಕ್ಕೆ ಮಾತ್ರವಲ್ಲದೆ ನಿಮ್ಮ ಮೂಳೆಗಳು ಮತ್ತು ಸ್ನಾಯುಗಳಿಗೂ ಒಳ್ಳೆಯದು. ನೀವು ತೂಕವನ್ನು ತ್ವರಿತವಾಗಿ ಇಳಿಸಲು ಬಯಸಿದರೆ ಓಟವು ಅತ್ಯುತ್ತಮ ಆಯ್ಕೆಯಾಗಿದೆ.

ಒಂದು ವೇಳೆ ನಿಮ್ಮ ದೇಹ ಓಡಲು ಅನುವು ಮಾಡಿಕೊಡದೆ ಇದ್ದರೆ, ನೀವು ವ್ಯಾಯಮ ಮಾಡಿಯೂ ಇದರ ಲಾಭವನ್ನು ಪಡೆಯಬಹುದು. ವ್ಯಾಯಾಮ ಮಾಡುವ ಮೂಲಕ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು ಅಂದರೆ ತೂಕವನ್ನು ಇಳಿಸಿ ಕೊಳ್ಳಬಹುದು. ಏಕೆಂದರೆ ಎರಡರಲ್ಲೂ ವಿಭಿನ್ನ ಪ್ರಯೋಜನಗಳಿವೆ.
ಓಟ, ವ್ಯಾಯಾಮ ಮತ್ತು ಯೋಗಗಳಲ್ಲಿ ಯೋಗವು ಹೆಚ್ಚು ಪ್ರಯೋಜನಕಾರಿಯಾಗಿದೆ. ಯೋಗವು ನಿಮ್ಮ ದೈಹಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಆದರೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.
ಯೋಗ ಮಾಡುವುದರಿಂದ ಬೊಜ್ಜು, ಮಧುಮೇಹ, ಅಸ್ತಮಾ ಮತ್ತು ಹೃದಯಕ್ಕೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು. ಇದರೊಂದಿಗೆ ನಿಮ್ಮ ಒತ್ತಡವೂ ನಿಯಂತ್ರಣದಲ್ಲಿರುತ್ತದೆ. ಇದು ನಿಮ್ಮನ್ನು ಒತ್ತಡ, ಆತಂಕ ಮತ್ತು ಖಿನ್ನತೆಗೆ ಬಲಿಯಾಗದಂತೆ ತಡೆಯುತ್ತದೆ.
ಓಟ, ವ್ಯಾಯಾಮ ಅಥವಾ ಯೋಗವನ್ನು ಮಾಡಿ ಆದರೆ ನಿಮ್ಮ ಭಂಗಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನೀವು ಸರಿಯಾಗಿ ಯೋಗವನ್ನು ಮಾಡದೇ ಇದ್ದಲ್ಲಿ, ಸರಿಯಾಗ ವಾಕ್ ಮಾಡದೇ ಇದ್ದಲ್ಲಿ ಅದರ ಲಾಭ ಸಿಗುವುದು ಕಷ್ಟ.












Click it and Unblock the Notifications