ಸ್ಕಿನ್ ಕೇರ್ ಎಂದು ನೀವು ಮಾಡುವ ಈ ತಪ್ಪು ಮಗುವಿನ ತ್ಚಚೆಯನ್ನೇ ಹಾಳು ಮಾಡಿಬಿಡಬಹುದು ಎಚ್ಚರ!
ಬಹುತೇಕ ಮಂದಿ ತಮ್ಮ ತ್ವಚೆಯ ಆರೈಕೆಗಾಗಿ ಸಾಕಷ್ಟು ಕಸರತ್ತು ನಡೆಸುತ್ತಾರೆ. ದುಬಾರಿ ಕ್ರೀಂ, ಲೋಶನ್ ಬಳಕೆ ಮನೆಮದ್ದು ಹೀಗೆ ತಮ್ಮ ಕೈಯಲ್ಲಿ ಏನು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ. ನಾವು ನಮ್ಮ ತ್ವಚೆಯ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಮಕ್ಕಳ ತ್ವಚೆಯ ಬಗ್ಗೆ ಕೂಡಾ ಅಷ್ಟೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ, ಮಕ್ಕಳ ತ್ವಚೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಮಕ್ಕಳ ಚರ್ಮದ ಬಗ್ಗೆ ವಿಶೇಷ ಆರೈಕೆ ಮಾಡುವುದು ಬಹಳ ಮುಖ್ಯ. ಆದರೆ, ಮಕ್ಕಳ ತ್ಛಚೆಯ ಆರೈಕೆ ವೇಳೆ ನಾವು ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ಮಕ್ಕಳ ತ್ವಚೆಗೆ ಹಾನಿ ಉಂಟಾಗಬಹುದು.
ಮಕ್ಕಳ ಚರ್ಮದ ಆರೈಕೆಯ ವಿಷಯದಲ್ಲಿ ಪೋಷಕರು ಮಾಡುವ ತಪ್ಪುಗಳು:
ಪೋಷಕರು ಅನೇಕ ಬಾರಿ ಮಕ್ಕಳಿಗೆ ವಯಸ್ಕರ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಇದು ಮಕ್ಕಳ ಸೂಕ್ಷ್ಮ ಚರ್ಮಕ್ಕೆ ಹಾನಿಕಾರಕವಾಗಿದೆ. ದೊಡ್ಡವರ ಸ್ಕಿನ್ ಕೇರ್ ಪ್ರಾಡಕ್ಟ್‌ಗಳು ಆಲ್ಕೋಹಾಲ್, ಸಲ್ಫೇಟ್‌ಗಳು ಮತ್ತು ಗಾಢವಾದ ಸುಗಂಧ ದ್ರವ್ಯಗಳನ್ನು ಹೊಂದಿರುತ್ತವೆ. ಇದು ಮಕ್ಕಳ ಚರ್ಮಕ್ಕೆ ಹಾನಿ ಉಂಟು ಮಾಡಬಹುದು.

ಸನ್‌ಸ್ಕ್ರೀನ್ ಬಳಸದೆ ಇರುವುದು:
ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳನ್ನು ಸನ್‌ಸ್ಕ್ರೀನ್ ಹಚ್ಚದೆ ಬಿಸಿಲಿನಲ್ಲಿ ಹಾಗೆಯೇ ಬಿಡುತ್ತಾರೆ. ಹೀಗಾಗುವಾಗ ನೇರಳಾತೀತ ಕಿರಣಗಳು ಮಕ್ಕಳ ಚರ್ಮಕ್ಕೆ ಗಂಭೀರ ಹಾನಿಯನ್ನುಂಟುಮಾಡಬಹುದು.ಕಡು ಬಿಸಿಲು ಇಲ್ಲದಿದ್ದರೂ ಸಾಮಾನ್ಯ ದಿನಗಳಲ್ಲಿಯೂ ಕನಿಷ್ಠ 30 SF ಹೊಂದಿರುವ ಸನ್‌ಸ್ಕ್ರೀನ್ ಅನ್ನು ಬಳಸುವುದು ಒಳ್ಳೆಯದು.
ಪದೇ ಪದೇ ಸ್ನಾನ ಮಾಡಿಸುವುದು:
ಮಕ್ಕಳಿಗೆ ಪ್ರತಿ ಬಾರಿ ಸ್ನಾನ ಮಾಡಿಸುವಾಗಲೂ ಅವರ ದೇಹದ ಮಾಯಿಶ್ಚರೈಸರ್ ಕಡಿಮೆಯಾಗುತ್ತದೆ. ಇದು ಒಣ ಚರ್ಮಕ್ಕೆ ಕಾರಣವಾಗಬಹುದು.ಮಕ್ಕಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದರೆ, ಪದೇ ಪದೇ ಸ್ನಾನ ಮಾಡುವಾಗ ಸ್ಕಿನ್ ಸಂಪೂರ್ಣವಾಗಿ ಡ್ರೈ ಆಗಬಹುದು.
ಮಾಯಿಶ್ಚರೈಸರ್ ಹಚ್ಚದೇ ಇರುವುದು:
ಮಗುವಿನ ಸ್ನಾನ ಆದ ತಕ್ಷಣ ಲೈಟ್ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮವು ಹೈಡ್ರೇಟ್ ಆಗಿ ಉಳಿಯುತ್ತದೆ. ಅದರಲ್ಲಿಯೂ ವಿಶೇಷವಾಗಿ ಚಳಿಗಾಲದಲ್ಲಿ ಮಾಯಿಶ್ಚರೈಸರ್ ಹಚ್ಚಲೇಬೇಕು. ಇದು ಮಗುವಿನ ತ್ವಚೆಯನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.
ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸುವುದು:
ಮಕ್ಕಳಲ್ಲಿ ಚರ್ಮದ ಸಮಸ್ಯೆಗಳಾದ ದದ್ದುಗಳು ಅಥವಾ ಎಸ್ಜಿಮಾ ಮುಂತಾದವುಗಳ ಲಕ್ಷಣಗಳನ್ನು ಪೋಷಕರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಈ ನಿರ್ಲಕ್ಷ್ಯ ಗಂಭೀರವಾಗಿ ಪರಿಣಮಿಸಬಹುದು. ಒಂದು ವೇಳೆ ಚರ್ಮಕ್ಕೆ ಸಂಬಂಧಿಸಿದಂತೆ ಮಗುವಿನ ಸಮಸ್ಯೆ ದೀರ್ಘಕಾಲದವರೆಗೆ ಕಾಡುತ್ತಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಹೆಚ್ಚು ಸುವಾಸನೆಯುಳ್ಳ ಉತ್ಪನ್ನಗಳ ಬಳಕೆ:
ಸ್ಕಿನ್ ಕೇರ್ ಉತ್ಪನ್ನಗಳಲ್ಲಿನ ಸುಗಂಧ ದ್ರವ್ಯಗಳು ಅಲರ್ಜಿಗೆ ಪ್ರಮುಖ ಕಾರಣವಾಗಬಹುದು. ಹೆಚ್ಚು ಸುವಾಸನೆಯುಳ್ಳ ಅಂದರೆ ಗಾಢ ಪರಿಮಳಯುಕ್ತ ಬಾಡಿ ವಾಶ್‌ಗಳಿಂದ ಹಿಡಿದು ಬಾಡಿ ಲೋಷನ್‌ಗಳವರೆಗೆ, ಡರ್ಮಟೈಟಿಸ್ ಅಥವಾ ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಅಲರ್ಜಿ ಫ್ರೀ ಸುಗಂಧ ದ್ರವ್ಯಗಳನ್ನು ಹೊಂದಿರುವ ಮತ್ತು IFRA ಪ್ರಮಾಣೀಕರಿಸಲ್ಪಟ್ಟ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications