Diet: ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ವಿಟಮಿನ್ ಬಿ 12 ಹೊಂದಿರುವ ಆಹಾರ: ಇವುಗಳು ನಿಮ್ಮ ಡಯಟ್‌ನಲ್ಲಿದ್ದರೆ ಒಳ್ಳೆಯದು
ತೂಕು ಇಳಿಸಲು ಜನರು ಕಷ್ಟಪಡುತ್ತಾರೆ. ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಉತ್ತಮ ಆಹಾರದತ್ತ ಜನ ಮುಖ ಮಾಡುತ್ತಾರೆ. ಕಡಿಮೆ ಕೊಲೆಸ್ಟ್ರಾಲ್ ಹೊಂದಿರುವ ಆಹಾರಗಳತ್ತ ಈಗೀನ ಯುವ ಪೀಳಿಗೆ ಮುಖ ಮಾಡುತ್ತಿದೆ. ಇದರಿಂದ ಸಧೃಡ ದೇಹ ಹಾಗೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಆಶಯ.
ಅಧಿಕ ಕೊಲೆಸ್ಟ್ರಾಲ್ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೂ ತುತ್ತಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯಕರವಾಗಿರಲು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ವಿಟಮಿನ್ ಬಿ 12 ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಇತರ ಪ್ರಯೋಜನಗಳನ್ನು ಸಹ ದೇಹಕ್ಕೆ ನೀಡುತ್ತದೆ. ವಿಟಮಿನ್ ಬಿ 12 ಇದು ಉತ್ತಮ ಪೋಷಕಾಂಶವಾಗಿದ್ದು ಅದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವಿಟಾಮಿನ್ ಬಿ 12 ಹೊಂದಿರುವ ಆಹಾರ
ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳು ವಿಟಮಿನ್ ಬಿ 12 ಇರುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಕಡಿಮೆ-ಕೊಬ್ಬಿನ ಆಯ್ಕೆಗೆ ಇವು ಸಹಕಾರಿ. ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ವೈದ್ಯರ ಸಲಹೆಯ ಮೇರೆಗೆ ಇವುಗಳನ್ನು ಬಳಸುವುದು ಉತ್ತಮ.
ಪಾಲಕ್ ಸೊಪ್ಪು ಐರನ್ ಕಂಟೆಟ್ ಹೊಂದಿರುತ್ತದೆ. ಇದರಲ್ಲೂ ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿದೆ. ನಿಮ್ಮ ಆಹಾರದಲ್ಲಿ ಪಾಲಕವನ್ನು ಸೇರಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇನ್ನು ನಾನ್ ವೆಜ್ ಪ್ರೀಯರಾಗಿದ್ದರೆ ನೀವು ಸಾಲ್ಮನ್ ಮೀನನ್ನು ತಿನ್ನಬಹುದು. ಇದರಲ್ಲಿ ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ6, ವಿಟಮಿನ್ ಬಿ12, ವಿಟಮಿನ್ ಡಿ, ವಿಟಮಿನ್ ಇ ಮತ್ತು ಸೆಲೆನಿಯಮ್ ನಂತಹ ಪೋಷಕಾಂಶಗಳು ಇರುತ್ತವೆ. ಇದನ್ನು ನಿಯಮಿತವಾಗಿ ಬಳಸಿದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಸಿರು ಬಟಾಣಿಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇವುಗಳಲ್ಲೂ ವಿಟಮಿನ್ ಬಿ 12 ನ ಅಂಶಗಳು ಇರುತ್ತವೆ. ನಿಮ್ಮ ಆಹಾರದಲ್ಲಿ ಹಸಿರು ಬಟಾಣಿಗಳನ್ನು ಸೇರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಮೆ ಆಗುತ್ತದೆ. ಅಲ್ಲದೆ ಹೃದಯದ ಆರೋಗ್ಯ ಸುಧಾರಿಸಲು ಸಹಾಯಕವಾಗುತ್ತದೆ.
ನೀವು ಮೊಟ್ಟೆಗಳನ್ನು ತಿನ್ನಲು ಇಷ್ಟ ಪಡುವುದಾದರಿ ಇದರಲ್ಲೂ ಹಲವು ಪೋಷಕಾಂಷಗಳು ಇರುತ್ತವೆ. ಇದರಿಂದ ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಲ್ಲಿರುವ ಪ್ರೋಟೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು ಸಹಾಯಕ.
ಬ್ರೊಕೊಲಿಯು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಎಲೆಕೋಸು ವಿಟಮಿನ್ ಬಿ 12 ಸೇರಿದಂತೆ ಹಲವಾರು ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಮತ್ತೊಂದು ಶಕ್ತಿಶಾಲಿ ಹಸಿರು ತರಕಾರಿ. ನಿಯಮಿತವಾಗಿ ಎಲೆಕೋಸು ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.












Click it and Unblock the Notifications