ಭೂ ದೋಷ: ಭೂಮಿಯ ಶಕ್ತಿ ಧನಾತ್ಮಕವೋ? ಋಣಾತ್ಮಕವೋ? ಗುರುತಿಸುವ ವಿಧಾನ ಇಲ್ಲಿದೆ
ಸಾಮಾನ್ಯವಾಗಿ ಬಾಡಿಗೆದಾರರು ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಸ್ಥಳಾಂತರವಾಗುತ್ತಲೇ ಇರುತ್ತಾರೆ. ಕೆಲವರಿಗೆ ಹೊಸ ಮನೆಗೆ ಹೋದ ತಕ್ಷಣ ಅವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿ ಒಳಿಯಲು ಪ್ರಾರಂಭವಾಗುತ್ತಾಳೆ. ಇನ್ನೂ ಕೆಲವರಿಗೆ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಇದು ನಿಮ್ಮ ಸ್ವಂತ ಅನುಭವಕ್ಕೆ ಬಾರದೇ ಇದ್ದರೂ ಕೆಲವರು ಇಂತಹ ಮಾತುಗಳನ್ನು ಆಡುವುದನ್ನು ನೀವು ಕೇಳಿರುತ್ತೀರಿ. ಹಾಗಾದರೆ ಇದಕ್ಕೆ ಕಾರಣ ಏನು?
ವಾಸ್ತು ಶಾಸ್ತ್ರದ ಪ್ರಕಾರ ಇದಕ್ಕೆ ಒಂದು ಪ್ರಮುಖ ಕಾರಣ ಭೂ ದೋಷ. ಕೆಲವೊಮ್ಮೆ ಒಂದು ಭೂಮಿಯನ್ನು ಹಲವು ವರ್ಷಗಳ ಕಾಲ ಖಾಲಿ ಬಿಟ್ಟರೆ, ಅದು ನಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ನೀವು ನಕಾರಾತ್ಮಕ ಶಕ್ತಿಯಿಂದ ತುಂಬಿರುವ ಈ ಭೂಮಿಯಲ್ಲಿ ವಾಸಿಸಲು ಅಥವಾ ವ್ಯಾಪಾರ ಮಾಡಲು ಪ್ರಾರಂಭಿಸಿದರೆ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಭೂಮಿಯ ನಕಾರಾತ್ಮಕ ಶಕ್ತಿಗಳನ್ನು ಅಂದಾಜು ಮಾಡಬಹುದು. ಹಾಗಾದರೆ ಭೂಮಿಯ ನಕಾರಾತ್ಮಕ ಶಕ್ತಿಯನ್ನು ಹೇಗೆ ಗುರುತಿಸುವುದು ಎಂದು ಈಗ ತಿಳಿಯೋಣ.

ಭೂ ದೋಷಗಳನ್ನು ಗುರುತಿಸುವ ವಿಧಾನಗಳು:-
-ನೆಲದಲ್ಲಿ ಒಂದು ಗುಂಡಿ ತೋಡಿ ಅದನ್ನು ನೀರಿನಿಂದ ತುಂಬಿಸಿ. ತಕ್ಷಣ ಅಲ್ಲಿಂದ ಪೂರ್ವಕ್ಕೆ 100 ಹೆಜ್ಜೆ ನಡೆಯಿರಿ. ಆಗ ಗುಂಡಿಯಲ್ಲಿ ನೀರು ಬತ್ತಿ ಹೋಗದ ತುಂಬಿದ್ದರೆ ಆ ಭೂಮಿ ತುಂಬಾ ಚೆನ್ನಾಗಿದೆ ಎಂದು ಅರ್ಥ. ಅರ್ಧ ಉಳಿದರೆ ಭೂಮಿ ಮಧ್ಯಮ ಫಲಿತಾಂಶವನ್ನು ಹೊಂದಿದೆ ಎಂದು ಅರ್ಥ. ನೀರು ಸಂಪೂರ್ಣವಾಗಿ ಬತ್ತಿ ಹೋದರೆ ಆ ಭೂಮಿ ನಕಾರಾತ್ಮಕ ಶಕ್ತಿಯನ್ನು ಹೊಂದಿದೆ ಎಂದು ಅರ್ಥೈಯಿಸಬಹುದು.
-ಭೂ ದೋಷಗಳನ್ನು ಗುರುತಿಸುವ ವಿಧಾನಗಳಲ್ಲಿ ಮಣ್ಣಿನ ಬಣ್ಣ ತಿಳಿಯುವುದು ಒಂದು. ಭೂಮಿಯ ಮಣ್ಣು ಹಳದಿ ಅಥವಾ ಬಿಳಿ ಬಣ್ಣದ್ದಾಗಿದ್ದರೆ ಅದನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಅದು ಕೆಂಪು ಬಣ್ಣದ್ದಾಗಿದ್ದರೆ, ಅದನ್ನು ಮಧ್ಯಮ ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ಕಪ್ಪು ಬಣ್ಣದ್ದಾಗಿದ್ದರೆ, ಅದನ್ನು ದೋಷಯುಕ್ತವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಯಾವ ಮಣ್ಣು ಮನೆ ಅಥವಾ ಅಂಗಡಿ ಕಟ್ಟಲು ಯೋಗ್ಯ.

ಯಾವ ಮಣ್ಣು ಯೋಗವಲ್ಲ :-
- ಈಶಾನ್ಯ ದಿಕ್ಕಿನಲ್ಲಿ ಎತ್ತರದ ಕಟ್ಟಡ ಅಥವಾ ಪರ್ವತ ಅಥವಾ ಅಶ್ವತ್ಥ ಮರ ಇರುವ ಸ್ಥಳದಲ್ಲಿ ನಿಮ್ಮ ಮನೆ, ಕಚೇರಿ ಅಥವಾ ಅಂಗಡಿಯನ್ನು ನಿರ್ಮಿಸಬೇಡಿ ಅಥವಾ ಖರೀದಿಸಬೇಡಿ.
-ಕಟ್ಟಡ ನಿರ್ಮಿಸಲಿರುವ ಜಾಗದಲ್ಲಿ ಹಸುಗಳು ಮತ್ತು ಕರುಗಳನ್ನು ಕೆಲವು ದಿನಗಳವರೆಗೆ ಸಾಕಬೇಕು. ಆ ಭೂಮಿ ಅವುಗಳ ಸಗಣಿ ಮತ್ತು ಮೂತ್ರದಿಂದ ಶುದ್ಧವಾಗುತ್ತದೆ. ವಾಸ್ತು ಪ್ರಕಾರ, ಭೂಮಿ ಎಷ್ಟೇ ದೋಷಗಳಿಂದ ತುಂಬಿದ್ದರೂ ಹಸುಗಳು ಮತ್ತು ಕರುಗಳ ಪರಿಣಾಮದಿಂದಾಗಿ ಅದರ ಎಲ್ಲಾ ದೋಷಗಳು ನಾಶವಾಗುತ್ತವೆ. ಈ ಭೂಮಿಯಲ್ಲಿ ವಾಸಿಸುವ ವ್ಯಕ್ತಿಯ ಸಂಪತ್ತು, ಸಂತೋಷ ಮತ್ತು ಅದೃಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.
ಮನೆ ಕಟ್ಟುವ ಯೋಗ್ಯವಾದ ಭೂಮಿ:-
- ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಖರೀದಿಸುವಾಗ ಅದರ ನೈಋತ್ಯದಲ್ಲಿ ಯಾವುದೇ ಹೊಂಡ, ಕೊಳ ಅಥವಾ ನದಿ ಇತ್ಯಾದಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಅಂತಹ ಸ್ಥಳವು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.
- ಅನೇಕ ಸಣ್ಣ ಹೊಂಡಗಳಿರುವ ಭೂಮಿ ವಾಸ್ತುವಿನ ಅಡಿಯಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಭೂಮಿಯನ್ನು ಖರೀದಿಸದೇ ಇರುವುದು ಒಳ್ಳೆಯದು.
- ಬೆಂಕಿ ಬೇಗನೆ ಉರಿಯದ ಅಥವಾ ಸುಟ್ಟ ನಂತರ ಆರಿಹೋಗದ ಭೂಮಿ ಎಂದಿಗೂ ಫಲಪ್ರದವಾಗುವುದಿಲ್ಲ. ಒಬ್ಬ ವ್ಯಕ್ತಿಯು ನಿಂತಿರುವಾಗ ಯಾವ ಭೂಮಿಯ ಮೇಲೆ ಆತಂಕವನ್ನು ಅನುಭವಿಸುತ್ತಾನೋ ಆ ಭೂಮಿಯು ಅವನ ಸಂಪತ್ತನ್ನು ನಾಶಪಡಿಸುತ್ತದೆ.
ಯಾವ ರೀತಿಯ ಭೂಮಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ?
ಜಮೀನಿನಲ್ಲಿ ಬಹಳ ಹಳೆಯ ಮರಗಳಿದ್ದರೆ ವಾಸ್ತು ಪ್ರಕಾರ ಅಂತಹ ನಿವೇಶನವು ವಾಸಕ್ಕೆ ಅನರ್ಹವಾಗಿದೆ. ಅಡಿಪಾಯವನ್ನು ಅಗೆದು ಚಿನ್ನ, ಬೆಳ್ಳಿ, ಹಣ, ರತ್ನಗಳು ಅಥವಾ ಯಾವುದೇ ಇತರ ಅಮೂಲ್ಯ ಕಲ್ಲುಗಳನ್ನು ಹೊಂದಿರುವ ಭೂಮಿ ಮನೆ ಕಟ್ಟಲು ಯೋಗ್ಯವಾಗಿದೆ. ಅದು ತುಂಬಾ ಶುಭ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಕಲ್ಲಿದ್ದಲು ಮತ್ತು ಮೂಳೆಗಳು ಕಂಡುಬಂದರೆ ಆ ಭೂಮಿಯನ್ನು ಅಶುಭವೆಂದು ಪರಿಗಣಿಸಬೇಕು.












Click it and Unblock the Notifications