Eyebrow Tips: ಕಣ್ಣುಬ್ಬಿನ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
ತಮಿಳುನಾಡು ಮತ್ತು ಕೇರಳದ ಕರಾವಳಿ ಭಾಗದಲ್ಲಿ ರುಚಿ ರುಚಿಯಾದ ಆಹಾರ ತಯಾರಿಸುವುದು ಕೊಬ್ಬರಿ ಎಣ್ಣೆಯಿಂದ. ಯಾಕೆಂದರೆ ಅಲ್ಲಿಯ ಜನ ಕೊಬ್ಬರಿ ಎಣ್ಣೆಯನ್ನು ಬಿಟ್ಟು ಬೇರೆ ಯಾವುದೇ ಅಡುಗೆ ಎಣ್ಣೆಯನ್ನು ಬಳಕೆ ಮಾಡುವುದಿಲ್ಲ. ಇಲ್ಲಿದು ತಾತ ಮುತ್ತಾತಂದಿರ ಕಾಲದಿಂದಲೂ ರೂಢಿಯಲ್ಲಿದೆ.
ಈ ಕೊಬ್ಬರಿ ಎಣ್ಣೆ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಚರ್ಮ ಹಾಗೂ ಕೂದಲಿನ ಅಂದವನ್ನು ಹೆಚ್ಚಿಸುತ್ತದೆ. ಈ ನೈಸರ್ಗಿಕ ಎಣ್ಣೆ ತನ್ನಲ್ಲಿ ಹಲವಾರು ಬಗೆಯ ಜೀವ ಸತ್ವಗಳನ್ನು ಹೊಂದಿದೆ ಮನುಷ್ಯನಿಗೆ ನಾನಾ ರೀತಿಯಲ್ಲಿ ಉಪಯೋಗಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಕೊಬ್ಬರಿ ಎಣ್ಣೆಯಿಂದ ಕಣ್ಣುಬ್ಬಿನ ಅಂದವನ್ನೂ ಕೂಡ ಹೆಚ್ಚಿಸಿಕೊಳ್ಳಬಹುದು.

ಹೌದು... ತೆಂಗಿನ ಎಣ್ಣೆಯ ಗುಣವೇ ಅಂತಹದ್ದು. ಇದು ಚರ್ಮವನ್ನು ಮಾತ್ರವಲ್ಲದೆ ಕೂದಲಿನ ಸೌಂದರ್ಯವನ್ನು ಕಾಪಾಡುತ್ತದೆ. ಹೆಚ್ಚಾಗಿ ಕೊಬ್ಬರಿ ಎಣ್ಣೆಯನ್ನು ತಲೆ ಕೂದಲಿಗೆ ಅನ್ವಯಿಸಲಾಗುತ್ತದೆ. ಆದರೆ ನಾವೆಂದೂ ಕೂಡ ಕಣ್ಣುಬ್ಬಿನ ಕೂದಲಿಗೆ ಈ ಕೊಬ್ಬರಿ ಎಣ್ಣೆಯನ್ನು ಅನ್ವಯಿಸುವ ಬಗ್ಗೆ ಯೋಚನೆ ಮಾಡೇ ಇಲ್ಲ. ಆದರೆ ಇದು ಕಣ್ಣುಬ್ಬಿನ ಕೂದಲ ಆರೈಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಕೊಬ್ಬರಿ ಎಣ್ಣೆಯನ್ನು ಯಾವ ರೀತಿ ಕಣ್ಣುಬ್ಬಿಗೆ ಹಚ್ಚುವುದು ಉತ್ತಮ ಹಾಗೂ ಇದರಿಂದಾಗುವ ಪ್ರಯೋಜನಗಳು ಏನು ಎನ್ನುವ ಬಗ್ಗೆ ಈಗ ತಿಳಿಯೋಣ.
ಕಣ್ಣುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರ ಪ್ರಯೋಜನಗಳು:-
* ಕಣ್ಣುಬ್ಬಿನ ಕೂದಲು ದಟ್ಟವಾಗಿ ಬೆಳೆಯುತ್ತವೆ.
* ಕಣ್ಣುಬ್ಬಿನ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
* ಕಣ್ಣುಬ್ಬಿನ ಕೂದಲಿನಲ್ಲಿ ತುರಿಕೆ ಇತರ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅವು ದೂರವಾಗುತ್ತವೆ.
* ಕಣ್ಣುಬ್ಬಿನ ಕೂದಲು ಕಪ್ಪಾಗಿ ಇರುತ್ತದೆ.
* ಕಣ್ಣುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ.
* ಕಣ್ಣುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಕಣ್ಣಿಗೆ ಒತ್ತಡ ಕಡಿಮೆಯಾಗುತ್ತದೆ.
* ಕಣ್ಣುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ

ಕಣ್ಣುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದು ಹೇಗೆ?
ಕೊಬ್ಬರಿ ಎಣ್ಣೆಯನ್ನು ಕಣ್ಣುಬ್ಬಿಗೆ ಹಚ್ಚುವ ಮೊದಲು ಕೆಲ ಪದಾರ್ಥಗಳನ್ನು ಅದಕ್ಕೆ ಬೆರೆಸಬೇಕಾಗುತ್ತದೆ. ಒಂದು ಕಪ್ ಕೊಬ್ಬರಿ ಎಣ್ಣೆಗೆ ಒಂದು ಹಿಡಿ ಕರಿಬೇವಿನ ಸೊಪ್ಪು ಹಾಕಿ, ಒಂದು ಚಮಚ ಮೆಂತೆ ಕಾಳು ಹಾಕಿ ಚೆನ್ನಾಗಿ ಬಿಸಿ ಮಾಡಿ. ಇದನ್ನು ತಣ್ಣಗಾಗಲು ಬಿಟ್ಟು ಹತ್ತುಯಿಂದ ಕಣ್ಣುಬ್ಬಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ.
ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಸಾಕು. ರಾತ್ರಿ ಮಲಗುವ ಮುನ್ನ ಕಣ್ಣುಬ್ಬಿಗೆ ಈ ಎಣ್ಣೆಯನ್ನು ಹಚ್ಚಿ ಬೆಳಗ್ಗೆ ಕೊಂಚ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕಣ್ಣ ಹಾಗೂ ಕಣ್ಣುಬ್ಬಿನ ಸಮಸ್ಯೆಗಳು ಕ್ರಮೇಣ ದೂರವಾಗುತ್ತವೆ. ಜೊತೆಗೆ ಅಂದವಾದ ಕಣ್ಣುಬ್ಬನ್ನು ನೀವು ಪಡೆಯಬಹುದು.












Click it and Unblock the Notifications