Astro Tips: ಈ ಗಿಡ ಮನೆಗೆ ಅದೃಷ್ಟ, ಹಣ ತರುತ್ತದೆ ನಿಜ !ಆದರೆ ಈ ಸ್ಥಳದಲ್ಲಿ ಮಾತ್ರ ಇರಿಸಬೇಡಿ!
Astro Tips: ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಸಂಪತ್ತು ಯಾವಾಗಲೂ ಇರಬೇಕು ಎಂದೇ ಬಯಸುತ್ತಾರೆ. ಕೆಲವೊಮ್ಮೆ ಎಷ್ಟೇ ದುಡಿದರೂ ಕೈಯ್ಯಲ್ಲಿ ಹಣ ನಿಲ್ಲುವುದಿಲ್ಲ. ಸಾಲ ತಪ್ಪುವುದಿಲ್ಲ ಎನ್ನುವವರೂ ಇದ್ದಾರೆ. ಇದಕ್ಕೆ ಮನೆಯ ವಾಸ್ತು ದೋಷಗಳೂ ಕಾರಣವಾಗಿರಬಹುದು. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಮತ್ತು ಪರಿಹಾರಗಳನ್ನು ಸೂಚಿಸಲಾಗಿದೆ. ಇದನ್ನು ಅನುಸರಿಸಿದರೆ ಮನೆಯ ವಾಸ್ತು ದೋಷ ನಿವಾರಣೆಯಾಗಬಹುದು. ಮತ್ತೆ ಕೈ ತುಂಬಾ ಹಣ ನಿಲ್ಲಬಹುದು.
ಈ ವಾಸ್ತು ನಿಯಮಗಳು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಾಸ್ತುವಿನಲ್ಲಿ ಕೆಲವು ಸಸ್ಯಗಳ ಬಗ್ಗೆ ಹೇಳಲಾಗಿದೆ. ಈ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವ ಮೂಲಕ ಐಶ್ವರ್ಯ ನೆಮ್ಮದಿ ಸಂಪತ್ತನ್ನು ವೃದ್ದಿಸಿಕೊಳ್ಳಬಹುದು ಎನ್ನಲಾಗಿದೆ.

ವಾಸ್ತುವಿನಲ್ಲಿ ಜೇಡ್ ಗಿಡದ ಮಹತ್ವ
ಅಂತಹ ಸಸ್ಯಗಳಲ್ಲಿ ಒಂದು ಜೇಡ್ ಗಿಡ. ಈ ಸಸ್ಯಕ್ಕೆ ವಾಸ್ತುವಿನಲ್ಲಿ ವಿಶೇಷ ಸ್ಥಾನವಿದೆ. ಜೇಡ್ ಸಸ್ಯದ ಎಲೆಗಳು ನಾಣ್ಯದಂತೆ ಕಾಣುತ್ತದೆ. ಹಾಗಾಗಿ ಇದನ್ನು ಕಾಯಿನ್ ಪ್ಲಾಂಟ್ ಅಂತಾನೂ ಕರೀತಾರೆ. ಇದು ನಾಣ್ಯಗಳಂತೆ ಕಾಣುವ ಸಣ್ಣ, ದುಂಡಗಿನ, ದಪ್ಪ ಹಸಿರು ಎಲೆಗಳನ್ನು ಹೊಂದಿದೆ. ಅದಕ್ಕಾಗಿಯೇ ಕೆಲವರು ಇದನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸುತ್ತಾರೆ. ಇದನ್ನು ಹಣದ ಸಸ್ಯ ಅಂತ ಕರೆಯುವವರೂ ಇದ್ದಾರೆ. ವಾಸ್ತು ಮತ್ತು ಫೆಂಗ್ ಶೂಯಿ ನಂಬಿಕೆಗಳ ಪ್ರಕಾರ, ಜೇಡ್ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆಯಂತೆ.
ಮನೆ ಅಥವಾ ಕಚೇರಿಯಲ್ಲಿ ಈ ಸಸ್ಯವನ್ನು ಬೆಳೆಸುವುದರಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವುದು ನಂಬಿಕೆ. ವಾಸ್ತು ನಂಬಿಕೆಗಳ ಪ್ರಕಾರ ಇದು ವೃತ್ತಿ ಪ್ರಗತಿ, ವ್ಯವಹಾರ ಅಭಿವೃದ್ಧಿ ಮತ್ತು ಹೊಸ ಅವಕಾಶಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದಕ್ಕೆ ಕಾರಣವಾಗುತ್ತದೆ.
ಈ ದಿಕ್ಕಿನಲ್ಲಿಡುವುದು ಶುಭ
ವಾಸ್ತು ಪ್ರಕಾರ, ಮನೆಯ ಆಗ್ನೇಯ ದಿಕ್ಕಿನಲ್ಲಿ ಜೇಡ್ ಗಿಡವನ್ನು ಇಡುವುದು ಶುಭವೆಂದು ಹೇಳಲಾಗುತ್ತದೆ. ವಾಸ್ತುವಿನ ಪ್ರಕಾರ ಈ ದಿಕ್ಕು ಸಂಪತ್ತು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ್ಧಾಗಿದೆ. ಈ ಕಾರಣದಿಂದಲೇ ಜೇಡ್ ಗಿಡವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ ಎಂದು ವಾಸ್ತು ಹೇಳುತ್ತದೆ. ಕೆಲವರು ಈ ಗಿಡವನ್ನು ಮಕ್ಕಳ ಸ್ಟಡಿ ರೂಮ್‌ನಲ್ಲಿಯೂ ಪೂರ್ವ ದಿಕ್ಕಿನಲ್ಲಿ ಇಡಬಹುದು ಎಂದು ಕೂಡಾ ಸೂಚಿಸುತ್ತಾರೆ.
ಪಾಸಿಟಿವ್ ಎನರ್ಜಿ ಹೆಚ್ಚಾಗುವುದು
ಉದ್ಯೋಗದಲ್ಲಿರುವವರು ಅಥವಾ ವ್ಯಾಪಾರ ಮಾಡುವವರು ತಮ್ಮ ಕಚೇರಿಯ ಮೇಜಿನ ಮೇಲೂ ಜೇಡ್ ಗಿಡವನ್ನು ಇಟ್ಟುಕೊಳ್ಳಬಹುದು. ವಾಸ್ತು ಪ್ರಕಾರ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಹೊಸ ಅವಕಾಶಗಳು ಮತ್ತು ವೃತ್ತಿಪರ ಅಭಿವೃದ್ಧಿಗೆ ಅನುಕೂಲಕರವಾಗಿರುವುದು. ಕೆಲವು ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ, ವಿಶೇಷವಾಗಿ ಬಲಭಾಗದಲ್ಲಿ ಜೇಡ್ ಗಿಡವನ್ನು ಇಡುವುದು ಶುಭವಂತೆ. ಇದು ಮನೆಯೊಳಗೆ ಸಕಾರಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ.
ಈ ಜಾಗದಲ್ಲಿ ಮಾತ್ರ ಇಡಲೇಬಾರದು
ಆದರೆ ವಾಸ್ತು ತಜ್ಞರ ಪ್ರಕಾರ ಈ ಗಿಡವನ್ನು ಅದು ಬೀಳುವಂತೆ ಇಡಬಾರದು. ಸ್ನಾನಗೃಹ, ಶೌಚಾಲಯ ಅಥವಾ ಕಸ ಸಂಗ್ರಹವಾಗುವ ಸ್ಥಳಗಳ ಬಳಿ ಕೂಡಾ ಇದನ್ನು ಇಡುವುದು ಒಳ್ಳೆಯದಲ್ಲ. ಸಸ್ಯವನ್ನು ಸಂಪೂರ್ಣವಾಗಿ ಕತ್ತಲೆಯಾದ ಸ್ಥಳದಲ್ಲಿ ಅಥವಾ ಹೆಚ್ಚು ಗಾಳಿ ಬೀಸುವ ಸ್ಥಳದಲ್ಲಿ ಇಡದಿರುವುದು ಉತ್ತಮ. ಸಸ್ಯವು ಆರೋಗ್ಯಕರವಾಗಿದೆ ಸದಾ ಹಸಿರಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಕೂಡಾ ಬಹಳ ಮುಖ್ಯ.
ಈ ಅಂಶಗಳ ಬಗ್ಗೆಯೂ ಇರಲಿ ಗಮನ
ಜೇಡ್ ಸಸ್ಯಕ್ಕೆ ಸರಿಯಾದ ಬೆಳಕು, ಸಾಕಷ್ಟು ನೀರಿನ ಅಗತ್ಯವಿರುತ್ತದೆ. ಅಲ್ಲದೆ ಇರ ಪಾಟ್‌ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಂದರೆ ಹೆಚ್ಚುವರಿ ನೀರು ಹರಿದು ಹೋಗಲು ಸ್ಥಳ ಇರಬೇಕು. ಮಣ್ಣಿನಲ್ಲಿ ಹೆಚ್ಚು ನೀರು ಉಳಿದರೆ, ಇದರ ಬೇರುಗಳು ಹಾನಿಗೊಳಗಾಗಬಹುದು. ಅಲ್ಲದೆ, ಸಸ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗದಂತೆ, ಉದುರದಂತೆ ನೋಡಿಕೊಳ್ಳಬೇಕು. ನೀರು ಮತ್ತು ಬೆಳಕಿನಂತಹ ಆರೈಕೆ ಅಂಶಗಳನ್ನು ಪರಿಶೀಲಿಸ್ತಾ ಇರಬೇಕು. ಆರೋಗ್ಯಕರ ಸಸ್ಯವು ಮನೆಗೆ ಸೌಂದರ್ಯವನ್ನು ನೀಡುವುದು ಮಾತ್ರವಲ್ಲ ಮನೆಯ ಅಭಿವೃದ್ದಿಗೂ ಕಾರಣವಾಗುತ್ತದೆ.


Click it and Unblock the Notifications
