Andhra Style Chicken 65 Recipe: ಆಂಧ್ರ ಚಿಕನ್ 65 ರೆಸಿಪಿ: ಮಳೆಗೆ ಮನೆಯಲ್ಲಿ ತಯಾರಿಸಿ ಎಂಜಾಯ್ ಮಾಡ್ಕೊಂಡು ತಿನ್ನಿ
ನಮ್ಮ ಮನೆಯಲ್ಲಿ ಎಲ್ಲರಿಗೂ ಚಿಕನ್ ಇಷ್ಟ.. ಅಂದರೆ ಚಿಕನ್ 65.. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಚಿಕನ್ 65 ಅಂದರೆ ಅಚ್ಚುಮೆಚ್ಚಿನ ಖಾದ್ಯ.. ಆದರೆ ಆಂಧ್ರ ಸ್ಟೈಲಿನಲ್ಲಿ ರುಚಿಕರವಾದ ಚಿಕನ್ 65 ಮಾಡುವುದು ಹೇಗೆಂದು ನಿಮಗೆ ಗೊತ್ತಾ? ಸಾಮಾನ್ಯವಾಗಿ ಆಂಧ್ರದ ಆಹಾರಗಳು ತುಂಬಾ ಮಸಾಲೆಯುಕ್ತವಾಗಿ ತಯಾರಿಸಲಾಗುತ್ತದೆ.. ಅದಕ್ಕಾಗಿಯೇ ಹೆಚ್ಚಿನ ಜನರು ಈ ಆಂಧ್ರ ರೆಸಿಪಿಗಳನ್ನು ಎಂದಿಗೂ ಪ್ರಯತ್ನಿಸುವುದಿಲ್ಲ.. ಆದರೆ ಈ ಚಿಕನ್ 65 ಅನ್ನು ಕಡಿಮೆ ಮಸಾಲೆಯಿಂದ ತಯಾರಿಸಲಾಗುತ್ತದೆ.
ಹಾಗಾದರೆ ತಡ ಯಾಕೆ ಆಂಧ್ರ ಶೈಲಿಯ ಚಿಕನ್ 65 ಅನ್ನು ತಯಾರಿಸುವುದು ಹೇಗೆ ಅನ್ನೊದನ್ನು ನೋಡೋಣ. ನೀವು ಒಂದು ಬಾರಿ ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ಈಗ ಚಿಕನ್ 65 ಮಾಡುವ ವಿಧಾನವನ್ನು ತಿಳಿಯೋಣ.

ಅಗತ್ಯ ವಸ್ತುಗಳು:-
1. ಬೋನ್ ಲೆಸ್ ಚಿಕನ್ ಅರ್ಧ ಕೆಜಿ
2. ಮೊಸರು
3. ಮೆಂತ್ಯ ಸ್ವಲ್ಪ
4. ಮೊಟ್ಟೆ 2
5. ಹಸಿರು ಮೆಣಸಿನಕಾಯಿ 4
6. ಕಾರ್ನ್ ಹಿಟ್ಟು ಕಾಲ್ ಕಪ್
7. ಕೇಸರಿ ಪುಡಿ ಸ್ವಲ್ಪ
8. ಗರಂ ಮಸಾಲಾ ಪುಡಿ ಒಂದು ಟೇಬಲ್ ಸ್ಪೂನ್
9. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅರ್ಧ ಟೇಬಲ್ ಸ್ಪೂನ್
10. ಜೀರಿಗೆ ಪುಡಿ ಕಾಲ್ ಚಮಚ
11. ಮೆಣಸಿನ ಪುಡಿ ಕಾಲ್ ಚಮಚ
12. ಉಪ್ಪು ರುಚಿಗೆ ತಕ್ಕಷ್ಟು
13. ನಿಂಬೆ ಒಂದು
14. ಎಣ್ಣೆ ಕರಿಯಲು ಬೇಕಾದಷ್ಟು
15. ಕೊತ್ತಂಬರಿ ಸೊಪ್ಪು ಸ್ವಲ್ಪ
ಪಾಕವಿಧಾನ:-
1. ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಬೇರ್ಪಡಿಸಿ ಒಂದು ಬೌಲ್ ನಲ್ಲಿ ಇಟ್ಟುಕೊಳ್ಳಿ.
2. ಮೊಟ್ಟೆಯ ಬಿಳಿಭಾಗಕ್ಕೆ ಕೇಸರಿ ಬಣ್ಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾರ್ನ್ ಫ್ಲೋರ್, ನಿಂಬೆ ರಸ, ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಕತ್ತರಿಸಿದ ತುಂಡುಗಳನ್ನು ಸೇರಿಸಿ ಮತ್ತು ಒಂದು ಗಂಟೆ ನೆನೆಸಲು ಬಿಡಿ.
3. ಈಗ ಇನ್ನೊಂದು ಪಾತ್ರೆಯಲ್ಲಿ ಮೊಸರು, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
4. ಒಂದು ಬಾಣಲೆಯಲ್ಲಿ ಅಗತ್ಯ ಪ್ರಮಾಣದ ಎಣ್ಣೆಯನ್ನು ಹಾಕಿ, ಅದು ಚೆನ್ನಾಗಿ ಬಿಸಿಯಾದ ಬಳಿಕ ಕಡಿಮೆ ಉರಿಯಲ್ಲಿ ಮಸಾಲಾದಲ್ಲಿ ನೆನೆಸಿದ ಚಿಕನ್ ತುಂಡುಗಳನ್ನು ಹಾಕಿ, ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿ.

5. ಕರಿದ ತುಂಡುಗಳನ್ನು ಒಂದು ತಟ್ಟೆಗೆ ತೆಗೆದಿಡಿ.
6. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಮೆಂತ್ಯ ಮತ್ತು ಉದ್ದಕೆ ಹೆಚ್ಚಿದ ಹಸಿರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
7. ಇದಕ್ಕೆ ಮೊಸರು ಮಿಶ್ರಣವನ್ನು ಸೇರಿಸಿ.
8. ನಂತರ ಹುರಿದ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ.
9. ಮಸಾಲಾ ಚೆನ್ನಾಗಿ ಬೆಂದ ನಂತರ ಚಿಕನ್ ತುಂಡುಗಳು ಹಾಕಿ ನಂತರ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಆಂಧ್ರ ಶೈಲಿಯ ಚಿಕನ್ 65 ಸವಿಯಲು ಸಿದ್ಧ.












Click it and Unblock the Notifications