Plum Fruit Health Benefits: ಈ ಪುಟ್ಟ ಹಣ್ಣಿನ ಆರೋಗ್ಯಕರ ಪ್ರಯೋಜನ ತುಂಬಾ ದೊಡ್ಡದು
ಪ್ಲಮ್ (plum) ಒಂದು ಋತುಮಾನದ ಹಣ್ಣು. ಇದು ರುಚಿಯಲ್ಲಿ ಸಿಹಿ ಮತ್ತು ಹುಳಿಯಾಗಿರುತ್ತದೆ. ಪ್ರೋಟೀನ್ ಮತ್ತು ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಶಿವರಾತ್ರಿಯಂದು ಪ್ಲಮ್ ಪ್ರಸಾದವನ್ನು ವಿಶೇಷವಾಗಿ ಶಿವನಿಗೆ ಅರ್ಪಿಸಲಾಗುತ್ತದೆ.
ಸೇಬಿನ ಹೊರತಾಗಿ ಹೆಚ್ಚಾಗಿ ಜನ ಆಯ್ದುಕೊಳ್ಳುವ ಹಣ್ಣಿದು. ನೋಡಲಿಕ್ಕೆ ಸೇಬುಹಣ್ಣಿಗೆ ಒಂದು ಬದಿ ದಾರದಿಂದ ಸೆಳೆದು ಕಟ್ಟಿದ್ದಂತೆ ಮಡಿಕೆ ಇರುವ ಹಣ್ಣು ಪ್ಲಮ್. ನೋಡಲು ಹಸಿರು ಬಣ್ಣವನ್ನು ಹೊಂದಿರುವ ಈ ಪ್ಲಮ್ ಹಣ್ಣು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆ ಮಾತ್ರ ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತದೆ.

ಈ ಹಣ್ಣಿನ ತಿರುಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ರಂಜಕ, ಫೋಲೇಟ್, ಪೋಟ್ಯಾಶಿಯಂ, ನಾರಿನಾಂಶ ಹಾಗೂ ವಿಟಮಿನ್ ಎ,ಸಿ ಮತ್ತು ಕೆ ಸಹಿತ ಇನ್ನೂ ಹಲವಾರು ಪ್ರಮುಖ ಪೋಷಕಾಂಶಗಳಿವೆ. ಮಾಗಿದ ಸಿಹಿ ಪ್ಲಮ್ ಹೆಚ್ಚು ಪ್ರಯೋಜನಕಾರಿಯಾಗಿದ್ದು ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ, ರಕ್ತ ಶುದ್ಧಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಾಗಿದ ಹಣ್ಣುಗಳ ಸೇವನೆಯು ಇತರ ಅನೇಕ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ.
ಪ್ಲಮ್ ಹಣ್ಣಿನ ಆರೋಗ್ಯಕರ ಪ್ರಯೋಜನಗಳು:-
1. ಮಲಬದ್ಧತೆ ನಿವಾರಿಸುವಲ್ಲಿ ಪ್ರಯೋಜನಕಾರಿ
ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುವಲ್ಲಿ ಪ್ಲಮ್ ಸೇವನೆಯು ಪ್ರಯೋಜನಕಾರಿಯಾಗಿದೆ. ಪ್ಲಮ್‌ನಲ್ಲಿರುವ ನಾರಿನಾಂಶ ಮಲಬದ್ಧತೆ ಮಾತ್ರವಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಜೀರ್ಣ ಕ್ರಿಯೆ ಸರಾಗವಾಗಿ ಜರುಗಲು ಈ ನಾರಿನಾಂಶ ಅತಿ ಅವಶ್ಯವಾಗಿದೆ. ಕಲ್ಮಶಗಳಲ್ಲಿ ಬೆರೆತು ಮಲವನ್ನು ಮೆದುವಾಗಿಸಿ ಸುಲಭ ವಿಸರ್ಜನೆಗೆ ನೆರವಾಗುತ್ತದೆ. ನಾರಿನಾಂಶದ ಕೊರತೆ ಎದುರಾದಾಗಲೇ ಮಲಬದ್ಧತೆಯ ತೊಂದರೆಯೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ಲಂ ಹಣ್ಣು ತುಂಬಾ ಪ್ರಯೋಜನಕಾರಿ.
2. ಹೃದಯದ ಆರೋಗ್ಯ
ಪ್ಲಮ್ ತಿನ್ನುವುದು ಹೃದಯವನ್ನು ಆರೋಗ್ಯಕರವಾಗಿಡಲು ಸಹ ಪ್ರಯೋಜನಕಾರಿಯಾಗಿದೆ. ಹೃದ್ರೋಗಗಳ ಸಾಧ್ಯತೆ ಕಡಿಮೆಯಾಗಿಸುವುದು, ರಕ್ತದಲ್ಲಿ ಸಕ್ಕರೆಯ ಮಟ್ಟ ಧೀಡೀರನೇ ಏರದಂತೆ ತಡೆಯುವುದು ಇತ್ಯಾದಿ ಕಾರ್ಯಗಳಿಗೆ ಪ್ಲಮ್ ತುಂಬಾ ಒಳ್ಳೆದು. ಪ್ಲಮ್ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಆರೋಗ್ಯಕ್ಕೂ ಒಳ್ಳೆಯದು. ಇದು ಹೃದಯವನ್ನು ಆರೋಗ್ಯಕರವಾಗಿ ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ಬೇಯಿಸಿ, ಹುರಿದು ಅಥವಾ ಗ್ರಿಲ್ ಮಾಡಿಕೊಂಡೂ ಸೇವಿಸಬಹುದು.

3. ಊತದ ಸಮಸ್ಯೆಗೆ ಪರಿಹಾರ
ಆಯುರ್ವೇದ ತಜ್ಞರ ಪ್ರಕಾರ ಪ್ಲಮ್‌ನಲ್ಲಿ ಉರಿಯೂತ ನಿವಾರಕ ಅಂಶಗಳು ಇದ್ದು, ಇದು ದೇಹದಲ್ಲಿನ ಊತದ ಸಮಸ್ಯೆಯನ್ನು ನಿವಾರಿಸುತ್ತದೆ. ಚಳಿಗಾಲದಲ್ಲಿ ಕೀಲು ನೋವಿಗೆ ಊತವೂ ಒಂದು ಕಾರಣ. ಇಂತಹ ಪರಿಸ್ಥಿತಿಯಲ್ಲಿ ಪ್ಲಮ್ ಸೇವನೆಯು ಪ್ರಯೋಜನಕಾರಿಯಾಗಿದೆ.
4. ರಕ್ತ ಪರಿಚಲನೆ ಸುಧಾರಣೆ
ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುವಲ್ಲಿ ಪ್ಲಮ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ನೈಟ್ರಿಕ್ ಆಮ್ಲವು ರಕ್ತ ಕಣಗಳನ್ನು ಆರೋಗ್ಯವಾಗಿರಿಸುತ್ತದೆ. ರಕ್ತ ಪರಿಚಲನೆ ಸುಧಾರಿಸಿದರೆ, ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮುಖ ಕಾಂತಿಯುತವಾಗಿ ಹೊಳೆಯುತ್ತದೆ.
5. ದೃಷ್ಟಿ ಕಾಪಾಡುವ ಪ್ಲಮ್
ಪ್ಲಮ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹವನ್ನು ಮತ್ತು ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ. ಇದನ್ನು ತಿನ್ನುವುದರಿಂದ ಕಣ್ಣಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ದೃಷ್ಟಿ ಸುಧಾರಿಸುತ್ತದೆ.

6.ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧ
ಪ್ಲಮ್ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದೆ. ಉರಿಯೂತ ನಿವಾರಕ ಗುಣಗಳೂ ಪ್ರಬಲವಾಗಿವೆ. ಇವು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳಿಂದ ನಮ್ಮ ದೇಹದ ಪ್ರತಿ ಜೀವಕೋಶವನ್ನೂ ರಕ್ಷಿಸುತ್ತದೆ. ಅಲ್ಲದೇ ಪ್ಲಂನಲ್ಲಿ ಅಧಿಕ ಪ್ರಮಾಣದ ಪಾಲಿಫಿನಾಲ್ ಆಂಟಿ ಆಕ್ಸಿಡೆಂಟುಗಳಿವೆ.
7.ಪೋಷಕಾಂಶಗಳು ಆಗರ ಪ್ಲಮ್ ಹಣ್ಣು
ಪ್ಲಮ್ ಹಣ್ಣುಗಳಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇವೆ ಹಾಗೂ ಪೋಷಕಾಂಶಗಳು ಅತಿ ಹೆಚ್ಚಾಗಿವೆ. ವಿಟಮಿನ್ ಎ,ಸಿ,ಕೆ ತಾಮ್ರ, ಮ್ಯಾಂಗನೀಸ್, ರಂಜಕ ಹಾಗೂ ಮೆಗ್ನೀಶಿಯಂ ಇವುಗಳಲ್ಲಿ ಪ್ರಮುಖವಾದವು. ಕರಗುವ ಮತ್ತು ಕರಗದ ನಾರಿನಾಂಶವೂ ಉತ್ತಮವಾಗಿಯೇ ಇದೆ.
8.ಮೂಳೆಗಳ ಆರೋಗ್ಯ ಕಾಪಾಡುವ ಪ್ಲಮ್
ಏಜಿಂಗ್ ರೀಸರ್ಚ್ ಅಂಡ್ ರಿವ್ಯಸ್ ಎಂಬ ಮಾಧ್ಯಮದಲ್ಲಿ ಪ್ರಕವಾದ ವರದಿಯ ಪ್ರಕಾರ ಪ್ಲಂ ಹಣ್ಣುಗಳ ಸೇವನೆಯಿಂದ ಮೂಳೆಗಳು ಶಿಥಿಲವಾಗುವ ಓಸ್ಟಿಯೋಪೋರೋಸಿಸ್ ಮತ್ತು ಓಸ್ಟಿಯೋಪೀಸಿಯಾ ಎಂಬ ಸ್ಥಿತಿಗಳು ಎದುರಾಗುವ ಸಾಧ್ಯತೆ ತಗ್ಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉರಿಯೂತ ನಿವಾರಕ ಗುಣಗಳು ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಈ ಹಣ್ಣಿನಲ್ಲಿರುವ ವಿಟಮಿನ್ ಕೆ, ರಂಜಕ, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂನಂತಹ ವಿವಿಧ ಪೋಷಕಾಂಶಗಳು ಮೂಳೆಗಳ ರಚನೆಯನ್ನು ಕಾಪಾಡುತ್ತವೆ.












Click it and Unblock the Notifications