ಮನೆ ಅಲಂಕರಿಸುವುದಷ್ಟೇ ಅಲ್ಲ: ಈ ಗಿಡಗಳು ಮನೆಗೆ ಹಣ ಮತ್ತು ಪಾಸಿಟಿವಿಟಿ ತರುತ್ತವೆ
ಮನೆಯ ಅಲಂಕಾರಕ್ಕೆ ಮಾತ್ರವಲ್ಲ, ಮನಸ್ಸಿಗೆ ಶಾಂತಿ, ನೆಮ್ಮದಿ, ಸಮೃದ್ದಿ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡಲು ಕೆಲವು ನಿರ್ದಿಷ್ಟ ಗಿಡಗಳು ಸಹಾಯ ಮಾಡುತ್ತವೆ ಎಂಬ ನಂಬಿಕೆ ಇದೆ. ವಾಸ್ತು ಮತ್ತು ಫೆಂಗ್‌ಶೂಯಿ ಪ್ರಕಾರ ಕೆಲವು ಗಿಡಗಳು ಹಣ, ಪ್ರೀತಿ, ಆರೋಗ್ಯ ಮತ್ತು ಅದೃಷ್ಟವನ್ನು ಆಕರ್ಷಿಸುತ್ತವೆ ಎಂದು ಹೇಳಲಾಗುತ್ತದೆ. ಮನೆ ಮುಖ್ಯ ದ್ವಾರದ ಬಳಿ, ಹಾಲ್‌ನಲ್ಲಿ ಅಥವಾ ಕಚೇರಿ ಟೇಬಲ್ ಮೇಲೆ ಇಂತಹ ಗಿಡಗಳನ್ನು ಇಡುವುದು ಶುಭಕರ ಎಂದು ಹೇಳಲಾಗುತ್ತದೆ. ಇಲ್ಲಿವೆ ಮನೆಗೆ ತರಲು ಅಥವಾ ಉಡುಗೊರೆಯಾಗಿ ನೀಡಲು ಸೂಕ್ತವಾದ 6 ಲಕ್ಕಿ ಗಿಡಗಳು.
ಪಿಲಿಯಾ ಪೆಪೆರೋಮಿಯೊಯಿಡ್ಸ್
ಪಿಲಿಯಾ ಪೆಪೆರೋಮಿಯೊಯಿಡ್ಸ್ ಅನ್ನು ಸಾಮನ್ಯವಾಗಿ ಚೈನೀಸ್ ಮನಿ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟಗಳ ಚಿಕ್ಕಮಗಳೂರು ಜಿಲ್ಲೆಯ ಇತ್ತಿಚಿನ ದಿನಗಳಲ್ಲಿ ಪತ್ತೆಯಾದ ಅಪರೂಪದ ಸಸ್ಯವಾಗಿದೆ. ದರ ನಾಣ್ಯದಾಕಾರದ ಎಲೆಗಳು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಮನೆಯ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇಟ್ಟರೆ ಶುಭ ಫಲ ದೊರೆಯುತ್ತದೆ ಎನ್ನಲಾಗುತ್ತದೆ.

ಜೇಡ್ ಪ್ಲಾಂಟ್
ಜೇಡ್ ಪ್ಲಾಂಟ್ ಅನ್ನು "ಮನಿ ಟ್ರೀ" ಎಂದೂ ಕರೆಯಲಾಗುತ್ತದೆ. ಕಡಿಮೆ ನಿರ್ವಹಣೆ ಮತ್ತು ಅಗತ್ಯವಿರುವ ಒಳಾಂಗಣದಲ್ಲಿ ಬೆಳೆಸುವ ಒಂದು ಜನಪ್ರಿಯವಾಗಿರುವ ಸಸ್ಯವಾಗಿದೆ. ನಾಣ್ಯದ ಆಕಾರ ಹೊಂದಿರುವ ಈ ಎಲೆಗಳು ದಪ್ಪ ಮತ್ತು ಹಸಿರಿನಿಂದ ಕೂಡಿರುತ್ತದೆ. ಈ ಗಿಡವನ್ನು ಅದೃಷ್ಟ, ಹಣದ ಸಮೃದ್ದಿ ಮತ್ತು ಧನಾತ್ಮಕ ಶಕ್ತಿಯ ಸಂಕೇತ ಎಂದು ಹೇಳಲಾಗುತ್ತದೆ. ಕಡಿಮೆ ಆರೈಕೆಯಲ್ಲಿ ಚೆನ್ನಾಗಿ ಬೆಳೆಯುವ ಈ ಗಿಡವನ್ನು ಉಡುಗೊರೆಯಾಗಿ ಕೂಡಲು ಜನಪ್ರಿಯವಾಗಿದೆ.
ಫಿಲೋಡೆಂಡ್ರಾನ್
ಫಿಲೋಡೆಂಡ್ರಾನ್ ಎಂಬುದು ಜನಪ್ರಿಯ ಮತ್ತು ಇಂಡೋರ್ ಸಸ್ಯವಾಗಿದೆ. ಇದು ಪ್ರೀತಿ, ಸಂಬಂಧಗಳಲ್ಲಿ ಸಮತೋಲನ ಮತ್ತು ಮನಶಾಂತಿಯ ಸಂಕೇತವಾಗಿದೆ. ಈ ಸಸ್ಯವು ಆಕರ್ಷಕವಾದ ಮತ್ತು ದೊಡ್ಡದಾಗಿರುವ ಎಲೆಗಳಿಗೆ ಇದು ಹೆಸರುವಾಸಿಯಾಗಿದೆ. ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.
ಯೂಕಲಿಪ್ಟಸ್
ಯೂಕಲಿಪ್ಟಸ್ ಆಸ್ಟ್ರೇಲಿಯಾ ಮೂಲದ ವೇಗವಾಗಿ ಬೆಳೆಯುವ ಸಸ್ಯವಾಗಿದ್ದು, ಇದು ತನ್ನ ಔಷಧೀಯ ಗುಣಗಳು ಹೊಂದಿದೆ. ಯೂಕಲಿಪ್ಟಸ್ ಗಿಡ ತನ್ನ ತಾಜಾ ಸುವಾಸನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ಗುಣಗಳಿಂದ ಜನಪ್ರಿಯವಾಗಿದೆ. ಕರ್ನಾಟಕದಲ್ಲಿ ಇದನ್ನು 1790ರ ಸುಮಾರಿಗೆ ಟಿಪ್ಪು ಸುಲ್ತಾನ್ ನಂದಿಬೆಟ್ಟದಲ್ಲಿ ನೆಟ್ಟಿದ್ದರು. ಇದು ಮನೆಯಲ್ಲಿ ಶುದ್ಧ ಮತ್ತು ಶಾಂತ ವಾತಾವರಣ ನಿರ್ಮಿಸುತ್ತದೆ ಎನ್ನುವ ನಂಬಿಕೆ ಇದೆ.
ಆಕ್ಸಾಲಿಸ್
ಆಕ್ಸಾಲಿಸ್ ಸಾಮಾನ್ಯವಾಗಿ ವುಡ್ ಸೋರೆಲ್ ಅಥವಾ ಫಾಲ್ಸ್ ಶಾಮ್ರಾಕ್ ಎಂದು ಕರೆಯಲ್ಪಡುವ ಸುಂದರವಾದ ಹೂವಿನ ಸಸ್ಯವಾಗಿದೆ. ರಾತ್ರಿ ವೇಳೆ ಎಲೆಗಳು ಮುಚ್ಚಿಕೊಂಡು ಬೆಳಗ್ಗೆ ಮತ್ತೆ ತೆರೆಯುವ ಇದರ ವಿಶೇಷತೆ ಹೊಸ ಆರಂಭ ಮತ್ತು ಪಾಸಿಟಿವಿಟಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಪಿಯೋನಿಯ
ಪಿಯೋನಿ ಸಸ್ಯವು ದೊಡ್ಡ ಗಾತ್ರದ ಹೂವುಗಳನ್ನು ಬಿಡುವ ದೀರ್ಘಕಾಲಿಕ ಸಸ್ಯವಾಗಿದೆ. ಪ್ರೀತಿ, ಗೌರವ, ಐಶ್ವರ್ಯ ಮತ್ತು ಸ್ನೇಹದ ಸಂಕೇತವಾಗಿದೆ. ಮದುವೆ ಮತ್ತು ವಿಶೇಷ ಸಮಾರಂಭಗಳಲ್ಲಿ ಇವುಗಳಿಗೆ ಹೆಚ್ಚಿನ ಮಹತ್ವ ಇದೆ. ಗುಲಾಬಿ ಬಣ್ಣದ ಪಿಯೋನಿ ಪ್ರೀತಿ ಮತ್ತು ಸ್ನೇಹವನ್ನು, ಹಳದಿ ಬಣ್ಣ ಹೊಸ ಆರಂಭವನ್ನು, ಕೊರಲ್ ಬಣ್ಣ ಯಶಸ್ಸನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಸರಿಯಾದ ಆರೈಕೆಯಲ್ಲಿ ಹಲವು ವರ್ಷಗಳ ಕಾಲ ಸುಂದರವಾಗಿ ಅರಳುವ ಈ ಗಿಡ ಮನೆಗೆ ಶುಭಶಕ್ತಿ ತರಲಿದೆ ಎಂಬ ನಂಬಿಕೆ ಇದೆ.
ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿ ವಾಸ್ತು, ಫೆಂಗ್‌ಶೂಯಿ ಮತ್ತು ಪರಂಪರೆ ನಂಬಿಕೆಗಳ ಆಧಾರಿತವಾಗಿದೆ. ಇವುಗಳಿಗೆ ವೈಜ್ಞಾನಿಕ ಸಾಕ್ಷ್ಯಗಳಿರುವುದಿಲ್ಲ.














Click it and Unblock the Notifications