Lucky Plant Care: ಮನೆಯಲ್ಲೇ ನೀರಿನಲ್ಲಿ ಮನಿ ಪ್ಲಾಂಟ್‌ ಬೆಳೆಸಲು ಈ ಟಿಪ್ಸ್‌ ಉಪಯೋಗಿಸಿ

ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯಗಳಲ್ಲಿ ಮನಿ ಪ್ಲಾಂಟ್‌ ಕೊಡ ಒಂದು ಪ್ರಮುಖವಾದ ಸಸ್ಯವಾಗಿದೆ. ಕಡಿಮೆ ಆರೈಕೆಯಲ್ಲಿಯೇ ವೇಗವಾಗಿ ಬೆಳೆಯುವ ಈ ಸಸ್ಯವನ್ನು ನೀರಿನಲ್ಲಿಯೂ ಬೆಳೆಸಬಹುದು. ಸರಿಯಾದ ವಿಧಾನ ಅನುಸರಿಸಿದರೆ ಕೇವಲ ಎರಡು ವಾರಗಳಲ್ಲಿಯೇ ಹೊಸ ಬೇರುಗಳು ಮೂಡಲು ಆರಂಭವಾಗುತ್ತವೆ. ಮನೆಯ ಒಳಗೆ, ಬಾಲ್ಕನಿ ಅಥವಾ ಕಚೇರಿ ಸ್ಥಳಕ್ಕೆ ಹಸಿರು ಸೊಬಗು ನೀಡುವ ಮನಿ ಪ್ಲಾಂಟ್‌ ಇದೀಗ ಅನೇಕರ ಫೇವರಿಟ್‌ ಗಿಡವಾಗಿದೆ.

ನೀರಿನಲ್ಲಿ ಮನಿ ಪ್ಲಾಂಟ್‌ ಬೆಳೆಸುವ ಸರಿಯಾದ ವಿಧಾನ

ಮನಿ ಪ್ಲಾಂಟ್‌ ಬೆಳೆಸಲು ಮೊದಲು ಆರೋಗ್ಯಕರವಾದ ಕೊಂಬೆಯನ್ನು ಆಯ್ಕೆ ಮಾಡಬೇಕು. ಸುಮಾರು 4ರಿಂದ 6 ಇಂಚು ಉದ್ದದ ಕೊಂಬೆಯ ದೃಢ ಭಾಗ (ನೋಡ್‌)ವನ್ನು ಕೆಳಗಿನಿಂದ ಕತ್ತರಿಸಬೇಕು. ನೋಡ್‌ ಎಂದರೆ ಎಲೆ ಮತ್ತು ಬೇರು ಬೆಳೆಯುವ ಸಣ್ಣ ಉಬ್ಬು ಭಾಗ. ಕತ್ತರಿಸಿದ ಕೊಂಬೆಯಲ್ಲಿ ಕನಿಷ್ಠ 2ರಿಂದ 3 ಆರೋಗ್ಯಕರ ಎಲೆಗಳಿರಬೇಕು. ಕೆಳಭಾಗದಲ್ಲಿರುವ ಎಲೆಗಳನ್ನು ತೆಗೆದು ನೀರಿನಲ್ಲಿ ಇಡಲು ಸಿದ್ಧಪಡಿಸಬೇಕು.

How To Grow Money Plant

ಗಾಜಿನ ಪಾತ್ರೆ ಬಳಸುವುದರಿಂದ ಆಗುವ ಪ್ರಯೋಜನಗಳು

ಗಿಡವನ್ನು ಬೆಳೆಸಲು ಸ್ವಚ್ಛವಾದ ಗಾಜಿನ ಬಾಟಲಿ, ಜಾರ್‌ ಅಥವಾ ಪಾರದರ್ಶಕ ಪಾತ್ರೆ ಬಳಸುವುದು ಉತ್ತಮ. ಪಾರದರ್ಶಕ ಪಾತ್ರೆಯಲ್ಲಿ ಬೇರು ಬೆಳವಣಿಗೆಯನ್ನು ಸುಲಭವಾಗಿ ಗಮನಿಸಬಹುದು. ಕೋಣೆಯ ತಾಪಮಾನದಲ್ಲಿರುವ ಶುದ್ಧ ನೀರನ್ನು ಪಾತ್ರೆಗೆ ತುಂಬಿ, ನೋಡ್‌ ಭಾಗ ನೀರಿನೊಳಗೆ ಮುಳುಗಿರುವಂತೆ ನೋಡಿಕೊಳ್ಳಬೇಕು. ಆದರೆ ಎಲೆಗಳು ನೀರಿನ ಮೇಲ್ಭಾಗದಲ್ಲಿರಬೇಕು. ಇಲ್ಲವಾದರೆ ಎಲೆಗಳು ಕೊಳೆಯುವ ಸಾಧ್ಯತೆ ಇರುತ್ತದೆ.

ಟೆರೇಸ್‌ನಲ್ಲಿ ಮಿನಿ ಅರಣ್ಯ: ಚೆರಿ, ಡ್ರ್ಯಾಗನ್‌ ಹಣ್ಣು ಬೆಳೆದ ಟೆಕ್ಕಿ, ಇಲ್ಲಿವೆ 100ಕ್ಕೂ ಹೆಚ್ಚು ಸಸ್ಯಗಳು!
ಟೆರೇಸ್‌ನಲ್ಲಿ ಮಿನಿ ಅರಣ್ಯ: ಚೆರಿ, ಡ್ರ್ಯಾಗನ್‌ ಹಣ್ಣು ಬೆಳೆದ ಟೆಕ್ಕಿ, ಇಲ್ಲಿವೆ 100ಕ್ಕೂ ಹೆಚ್ಚು ಸಸ್ಯಗಳು!

ಮನಿ ಪ್ಲಾಂಟ್‌ಗೆ ಯಾವ ರೀತಿಯ ಬೆಳಕು ಬೇಕು

ಮನಿ ಪ್ಲಾಂಟ್‌ ಹೆಚ್ಚು ಬೆಳೆಯಲು ನೇರವಾದ ಬಿಸಿಲಿಗಿಂತ ಪರೋಕ್ಷವಾದ ಬೆಳಕು ಒಳ್ಳೆಯದು. ಕಿಟಕಿ, ಬಾಲ್ಕನಿ ಅಥವಾ ಬೆಳಕು ಚೆನ್ನಾಗಿ ಬೀಳುವ ಮನೆಯ ಮೂಲೆಯಲ್ಲಿ ಇಡಬಹುದು. ಆದರೆ ದೀರ್ಘ ಸಮಯ ತೀವ್ರ ಬಿಸಿಲಿಗೆ ಇಡುವುದನ್ನು ತಪ್ಪಿಸಬೇಕು. ಹೆಚ್ಚುವರಿ ಬಿಸಿಯಿಂದ ಎಲೆಗಳು ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ಸರಿಯಾದ ಬೆಳಕು, ಶುದ್ಧ ನೀರು ಮತ್ತು ನಿಯಮಿತ ಆರೈಕೆಯಿಂದ 10ರಿಂದ 14 ದಿನಗಳ ಒಳಗೆ ಸಣ್ಣ ಬಿಳಿ ಬೇರುಗಳು ಮೂಡಲು ಆರಂಭವಾಗುತ್ತವೆ. ನಂತರ ಈ ಗಿಡ ನೀರಿನಲ್ಲಿಯೇ ತಿಂಗಳಗಟ್ಟಲೆ ಚೆನ್ನಾಗಿ ಬೆಳೆಯುತ್ತದೆ. ಬೇಕಾದರೆ ನಂತರ ಮಣ್ಣಿನ ಕುಂಡಾಲಿಗೆ ಸ್ಥಳಾಂತರಿಸಬಹುದು.

ಗಿಡ ತುಂಬಾ ಮಲ್ಲಿಗೆ ಅರಳಿ ನಿಲ್ಲಬೇಕಾದರೆ ಕಾಳಜಿ ಹೀಗಿರಬೇಕು: ಈ ಪಾಟ್‌ ಬಳಸಿದರೆ ಇನ್ನೂ ಒಳ್ಳೆಯದು
ಗಿಡ ತುಂಬಾ ಮಲ್ಲಿಗೆ ಅರಳಿ ನಿಲ್ಲಬೇಕಾದರೆ ಕಾಳಜಿ ಹೀಗಿರಬೇಕು: ಈ ಪಾಟ್‌ ಬಳಸಿದರೆ ಇನ್ನೂ ಒಳ್ಳೆಯದು

ಗಿಡ ಆರೋಗ್ಯಕರವಾಗಿ ಬೆಳೆಯಲು ಪ್ರತಿ 4ರಿಂದ 5 ದಿನಕ್ಕೊಮ್ಮೆ ನೀರನ್ನು ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ, ಪಾಚಿ ಅಥವಾ ದುರ್ವಾಸನೆ ಉಂಟಾಗುವುದನ್ನು ತಡೆಯಬಹುದು. ಜೊತೆಗೆ ಪಾತ್ರೆಯನ್ನು ಕೂಡಾ ಸ್ವಚ್ಛಗೊಳಿಸುವುದು ಬೇರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್‌ ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯೂ ಇದೆ. ವಿಶೇಷವಾಗಿ ಮನೆಯ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಮನಿ ಪ್ಲಾಂಟ್‌ ಇಟ್ಟರೆ ಶುಭಕರವೆಂದು ಹಲವರು ನಂಬುತ್ತಾರೆ. ಹಸಿರು ಎಲೆಗಳು ಮನೆಯ ಅಲಂಕಾರಕ್ಕೂ ವಿಶೇಷ ಮೆರುಗು ನೀಡುತ್ತವೆ.

ಇತ್ತೀಚಿನ ದಿನಗಳಲ್ಲಿ ಕಡಿಮೆ ಜಾಗದಲ್ಲಿಯೇ ಗಿಡ ಬೆಳೆಸುವ ಆಸಕ್ತಿ ಜನರಲ್ಲಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಮನಿ ಪ್ಲಾಂಟ್‌ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಬೆಳೆಸಬಹುದಾದ ಉತ್ತಮ ಒಳಾಂಗಣ ಸಸ್ಯವಾಗಿದೆ. ಸರಿಯಾದ ಆರೈಕೆ ನೀಡಿದರೆ ಈ ಗಿಡ ಮನೆಯ ವಾತಾವರಣವನ್ನು ಹಸನಾಗಿಸಿ, ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+