Work Life Balance Tips: ಕೆಲಸ & ವೈಯಕ್ತಿಕ ಜೀವನ ಬ್ಯಾಲೆನ್ಸ್ ಮಾಡುವುದಕ್ಕೆ 5 ಸಿಂಪಲ್ ಟಿಪ್ಸ್ ಇಲ್ಲಿದೆ!
Work Life Balance Tips: ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಹೆಚ್ಚಾಗುತ್ತಿರುವ ಕೆಲಸದ ಒತ್ತಡದ ನಡುವೆ ಪರ್ಸನಲ್ ಲೈಫ್ ಹಾಗೂ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುವುದು ದೊಡ್ಡ ಸವಾಲು. ಮನೆಯ ಕಡೆ ಗಮನಕೊಟ್ಟರೆ, ಕೆಲಸದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಕೆಲಸದ ಕಡೆ ಗಮನಕೊಟ್ಟರೆ ಮನೆಯಲ್ಲಿ ಸಮಸ್ಯೆ. ಹೆಚ್ಚಾಗುತ್ತಿರುವ ಕೆಲಸದ ಒತ್ತಡ, ಕಿರಿಕಿರಿ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗಳ ನಡುವೆ ವರ್ಕ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡುವುದು ತೀರ ಸವಾಲಿನ ಕೆಲಸವೇ ಸರಿ. ಈ ರೀತಿ ಇರುವಾಗ ಎರಡೂ ಬ್ಯಾಲೆನ್ಸ್ ಮಾಡುವುದಕ್ಕೆ 5 ಸರಳ ಟಿಪ್ಸ್‌ಗಳು ಇಲ್ಲಿವೆ. ನೀವು ಈ ಟಿಪ್ಸ್‌ಗಳನ್ನು ಫಾಲೋ ಮಾಡಿದರೆ, ಮನೆ - ಕೆಲಸ ಮ್ಯಾನೇಜ್ ಮಾಡುವುದಕ್ಕೆ ಸುಲಭವಾಗಲಿದೆ. ಅದೇನು ಅಂತ ನೋಡೋಣ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕೆಲಸದ ಅವಧಿ ತುಂಬಾನೇ ಹೆಚ್ಚಾಗಿದೆ. ಕಂಪನಿಗಳಲ್ಲಿ ಹೆಸರಿಗಷ್ಟೇ 8ರಿಂದ 9 ಗಂಟೆ ಕೆಲಸ ಕನಿಷ್ಠ ಎಂದರೂ 8ರಿಂದ 10 ತಾಸು ಕೆಲಸದಲ್ಲೇ ಕಳೆಯುವ ಪರಿಸ್ಥಿತಿ ಹಲವರಲ್ಲಿ ಇದೆ. ಇನ್ನು ಕೆಲಸ ಮುಗಿದ ಮೇಲೂ ಕೆಲವೊಂದು ಕಂಪನಿಗಳಲ್ಲಿ ಇಲ್ಲವೇ ಬಾಸ್‌ಗಳಿಂದ ಕಿರಿಕಿರಿ ಮುಂದುವರಿಯುವುದು ಇದೆ. ಇದೆಲ್ಲದರಿಂದ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವುದೇ ಜಾಸ್ತಿ. ಇವೆರಡನ್ನೂ ಬ್ಯಾಲೆನ್ಸ್ ಮಾಡುವುದು ಕಷ್ಟದ ಕೆಲಸವೇನು ಅಲ್ಲ. ಎರಡನ್ನೂ ನಿಭಾಯಿಸುವುದಕ್ಕೆ ಇಲ್ಲೊಂದಿಷ್ಟು ಸಿಂಪಲ್ ಟಿಪ್ಸ್ ಇವೆ.

ಈಗೆಲ್ಲ ಕೆಲಸದ ಸಮಯವು ಬರೀ ಕಚೇರಿಗೆ ಮಾತ್ರ ಸೀಮಿತವಾಗುತ್ತಿಲ್ಲ. ಹಿಂದೆ ಕೆಲಸದಿಂದ ಸಣ್ಣ ಬ್ರೇಕ್ ತೆಗೆದುಕೊಳ್ಳುವುದು ಅಥವಾ ವೈಯಕ್ತಿಕ ಜೀವನಕ್ಕೆ ಇಷ್ಟೊಂದು ಪೆಟ್ಟು ಬೀಳುತ್ತಿರಲಿಲ್ಲ. ಈಗ ಉದ್ಯೋಗಿಗಳ ಮೇಲೆ ವಿಪರೀತವಾದ ಒತ್ತಡ ಬೀಳುತ್ತಿದೆ. ಬದಲಾದ ತಂತ್ರಜ್ಞಾನದಲ್ಲಿ ಎಲ್ಲರಿಗೂ ಕೆಲಸವನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ.
* ಕೆಲಸದ ನಡುವೆ ಬಿಡುವು: ನಿರಂತರವಾಗಿ ಕೆಲಸ ಮಾಡುವುದಕ್ಕೆ ಇಲ್ಲವೇ ಕೆಲಸ ಮಾಡುತ್ತಲ್ಲೇ ಇರುವುದಕ್ಕೆ ನೀವು ಯಂತ್ರಗಳಲ್ಲ. ಮನುಷ್ಯರಿಗೆ ತಾಸುಗಟ್ಟಲೆ ಬರೀ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಈ ರೀತಿ ಮಾಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ, ನಿರಂತರವಾಗಿ ಕೆಲಸ ಮಾಡುವುದರ ನಡುವೆ ಸಣ್ಣ ಬ್ರೇಕ್‌ಗಳನ್ನು ತೆಗೆದುಕೊಳ್ಳಿ. ಇದರಿಂದ ಒತ್ತಡವನ್ನು ನಿಭಾಯಿಸಲು ಸಹಾಯವಾಗುತ್ತದೆ. ಸಣ್ಣ ಬ್ರೇಕ್ ಅಥವಾ ಒಂದು ಚಿಕ್ಕ ವಾಕ್ ಮಾಡುವುದಕ್ಕೆ ಪ್ರಯತ್ನ ಮಾಡಿ.
* ಸರಿಯಾದ ಪ್ಲ್ಯಾನ್ ಮಾಡಿಕೊಳ್ಳಿ: ನಿತ್ಯವು ವೈಕ್ತಿಕವಾಗಿ ಹಾಗೂ ಕೆಲಸದಲ್ಲಿ ಯಾವ ಕೆಲಸಗಳನ್ನು ಮಾಡಬೇಕು. ಯಾವುದು ಅತಿ ಮುಖ್ಯವಾದ ಕೆಲಸಗಳಾಗಿವೆ ಎನ್ನುವುದನ್ನು ಲಿಸ್ಟ್ ಮಾಡಿ ಇರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮಗೆ ಒತ್ತಡ ಹೆಚ್ಚಾಗುವುದು ಕಡಿಮೆಯಾಗುತ್ತದೆ. ಮನೆಯಲ್ಲಿ ಏನೆಲ್ಲಾ ಮಾಡಲು ಸಾಧ್ಯವೋ ಹಾಗೂ ಕೆಲಸದ ಟಾಸ್ಕ್‌ಗಳ ಬಗ್ಗೆ ಒಂದು ಟುಡು (ಇಂದು ಮಾಡಬೇಕಾಗಿರುವ ಕೆಲಸದ ಲಿಸ್ಟ್ ) ಮಾಡಿಕೊಳ್ಳಿ. ಇದರಿಂದ ಗೊಂದಲಗಳು ಕಡಿಮೆಯಾಗುತ್ತವೆ.
* ಹೊಂದಾಣಿಕೆ ಮಾಡಿಕೊಳ್ಳಿ: ಎಲ್ಲದಕ್ಕೂ ನೀವು ಟೆಮ್ ಹೊಂದಾಣಿಕೆ ಮಾಡಿಕೊಳ್ಳುವುದೇ ಮುಖ್ಯವಾಗುತ್ತದೆ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಕೆಲಸ ಬಿಟ್ಟ ಮೇಲೂ ನಿಮಗೆ ಸಮಯ ಸಿಗದೆ ಇದ್ದರೆ ನಿಮ್ಮ ಪರ್ಸನಲ್ ಲೈಫ್‌ಗೆ ಟೈಮ್ ಕೊಡುವುದು ತುಂಬಾನೇ ಕಷ್ಟ. ಹೀಗಾಗಿ ಕೆಲಸದಲ್ಲಿ ಹೊಸ ಅಪ್ಡೇಟ್‌ಗಳನ್ನು ಮಾಡಿಕೊಳ್ಳಿ.
* ಮನೆಗೆ ಬಂದು ಕೆಲಸ ಮಾಡುವುದನ್ನು ತಪ್ಪಿಸಿ: ಆಫೀಸ್ ಕೆಲಸಗಳನ್ನು ಸಾಧ್ಯವಾದಷ್ಟು ಆಫೀಸ್‌ನಲ್ಲೇ ಮುಗಿಸುವುದಕ್ಕೆ ಪ್ರಯತ್ನಿಸಿ. ಆಫೀಸ್ ಕೆಲಸಗಳನ್ನು ಮನೆಗೆ ತೆಗೆದುಕೊಂಡು ಬರದಂತೆ ನೋಡಿಕೊಳ್ಳಿ ಅಥವಾ ಪ್ರಯತ್ನಿಸಿ. ಕೆಲವರು ಕಂಪನಿಗಳು ನೀಡುವ ಡೆಡ್‌ಲೈನ್ ರೀಚ್ ಆಗಬೇಕು ಎನ್ನುವ ಕಾರಣಕ್ಕೆ ಆಫೀಸ್ ಕೆಲಸವನ್ನು ಮನೆಗೆ ತೆಗೆದುಕೊಂಡು ಹೋಗಿ ಮಾಡುವುದು ಇದೆ. ಇದು ಬೇರೆ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದು ನೀವು ಸರಿಯಾಗಿ ಆಫೀಸ್‌ನಲ್ಲಿ ಕೆಲಸ ಮಾಡುತ್ತಿಲ್ಲ ಇಲ್ಲ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ.
* ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ: ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಪದೇ ಪದೇ ಆರೋಗ್ಯ ಸಮಸ್ಯೆ ಅಥವಾ ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ, ಕೆಲಸ ಹಾಗೂ ಪರ್ಸನಲ್ ಲೈಫ್ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಿ.
* ನಿಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಹಾಗೂ ಕಲೆಗಳು ಇರುತ್ತವೆ. ಇರಡನ್ನೂ ಬ್ಯಾಲೆನ್ಸ್ ಮಾಡುವುದಕ್ಕೆ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಿ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications