Popular Indian Foods: ಈ 5 ಆಹಾರಗಳು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಗಳು!

ನಾವು ಪ್ರತಿದಿನ ತಿನ್ನುವ ಕೆಲವು ಸಾಮಾನ್ಯ ತಿಂಡಿಗಳು ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂಬುದನ್ನು ಹಲವರು ಗಮನಿಸದೇ ತಿನ್ನುತ್ತಾರೆ. ಚಹಾ ಸಮಯದಲ್ಲಿ ಖಾರ ಸೇವ್, ಊಟದ ಜೊತೆ ಹಪ್ಪಳ ಅಥವಾ ಸಿಹಿ ತಿಂಡಿಗಳಾದ ಜಲೇಬಿ ಇವು ಸಣ್ಣ ತಿಂಡಿಗಳಂತೆ ಕಂಡರೂ, ಇವುಗಳು ಆರೋಗ್ಯದ ಮೇಲೆ ಗಂಭೀರ ಸಮಸ್ಯೆಗಳನ್ನು ತರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ ಈ ಆಹಾರಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹ, ಹೃದಯ ಕಾಯಿಲೆ, ಬೊಜ್ಜು ಸೇರಿದಂತೆ ಹಲವು ಜೀವನಶೈಲಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಈ ತಿಂಡಿಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ಸೇವಿಸುವುದು ಅತ್ಯಂತ ಮುಖ್ಯ.

5 Popular Indian Foods

ಜಿಲೇಬಿ

ಜಿಲೇಬಿ ಸಿಹಿ ಪ್ರಿಯರಿಗೆ ತುಂಬಾ ಇಷ್ಟವಾದ ತಿಂಡಿ. ಆದರೆ ಇದು ಹೆಚ್ಚಿನ ಸಕ್ಕರೆ ಮತ್ತು ಎಣ್ಣೆಯಿಂದ ತಯಾರಾಗಿರುವುದರಿಂದ ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.

ಅಡಿಕೆ

ಊಟದ ನಂತರ ಅಡಿಕೆ ಸೇವಿಸುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದರ ಜೊತೆಗೆ ಬಾಯಿಯ ಆರೋಗ್ಯಕ್ಕೂ ಹಾನಿ ಉಂಟುಮಾಡುತ್ತದೆ.

ಹಪ್ಪಳ

ಹಪ್ಪಳವು ಬಹುತೇಕ ಭಾರತೀಯ ಊಟದ ಒಂದು ಅವಿಭಾಜ್ಯ ಭಾಗವಾಗಿದೆ. ಆದರೆ ಇದರಲ್ಲಿ ಹೆಚ್ಚು ಉಪ್ಪು ಇರುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಹೆಚ್ಚು ಹುರಿದು ತಿನ್ನುವುದರಿಂದ ಹೃದಯದ ಮೇಲೆ ಒತ್ತಡ ಬೀರುತ್ತದೆ.

ಖಾರದ ಸೇವ್

ಚಹಾ ಜೊತೆ ತಿನ್ನುವ ಖಾರದ ಸೇವ್ ಎಣ್ಣೆ, ಉಪ್ಪು ಮತ್ತು ಸಂಸ್ಕರಿಸಿದ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ತೂಕ ಹೆಚ್ಚಿಸುವುದರ ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವ ಅಪಾಯವನ್ನೂ ಉಂಟುಮಾಡುತ್ತದೆ.

5 Popular Indian Foods

ಸಮೋಸಾ

ಗರಿಗರಿಯಾದ ಸಮೋಸಾ ತಿನ್ನಲು ರುಚಿಯಾದರೂ ಇದರಲ್ಲಿ ಕೊಬ್ಬು ಮತ್ತು ಸಂಸ್ಕರಿಸಿದ ಮೈದಾ ಹಿಟ್ಟು ಹೆಚ್ಚು ಇರುತ್ತದೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನ ಮತ್ತು ಹೃದಯ ಕಾಯಿಲೆಗೆ ಕಾರಣವಾಗಬಹುದು.

ಈ ಆಹಾರಗಳನ್ನು ಸಂಪೂರ್ಣವಾಗಿ ಬಿಡಬೇಕೆಂದು ಅಲ್ಲ ಆದರೆ ಮಿತಿಯಲ್ಲಿ ಸೇವಿಸುವುದು ಬಹಳ ಮುಖ್ಯ. ಅತಿ ಹೆಚ್ಚಾಗಿ ಹುರಿದ, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+