10 ನಿಮಿಷ ಹೆಚ್ಚುವರಿ ನಿದ್ದೆಯಿಂದ ಕಡಿಮೆಯಾಗುವುದು ಹೃದ್ರೋಗದ ಅಪಾಯ: UKಯ ರಿಸರ್ಚ್‌ನಿಂದ ಮಾಹಿತಿ

ಬೆಳಿಗ್ಗಿನ ನಿದ್ದೆ ಎಲ್ಲರಿಗೂ ಪ್ರಿಯ. ಇನ್ನೇನು ಎದ್ದೇಳಬೇಕು ಎನ್ನುವಾಗ ಇನ್ನೂ ಸ್ವಲ್ಪ ಹೊತ್ತು ಮಲಗಬೇಕು ಎಂದನಿಸುವುದು ಸಹಜ. ಆದರೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗುವುದು, ಮಕ್ಕಳಿಗೆ ಮಧ್ಯಾಹ್ನ ಊಟ ಸಿದ್ಧಪಡಿಸುವುದು, ಅವರನ್ನು ಶಾಲೆಗೆ ಬಿಡುವುದು, ಬೆಳಗಿನ ಇತರ ಕೆಲಸಗಳು ಹೀಗೆ ಲೆಕ್ಕವಿಲ್ಲದಷ್ಟು ಕಾರ್ಯಗಳು ಒಂದು ನಿಮಿಷವೂ ಹೆಚ್ಚು ನಿದ್ದೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಹತ್ತು ನಿಮಿಷ ಹೆಚ್ಚು ನಿದ್ದೆ ಮಾಡುವುದರಿಂದ ದೇಹಕ್ಕೆ ಎಷ್ಟು ಮತ್ತು ಯಾವ ರೀತಿ ಪ್ರಯೋಜನವಾಗುವುದು ಎನ್ನುವ ಮಾಹಿತಿ ನಿಮಗಿದೆಯೇ? ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಅಧ್ಯಯನವು 10 ನಿಮಿಷ ಹೆಚ್ಚುವರಿ ನಿದ್ದೆ ಮಾಡುವುದರಿಂದ ಹೃದಯ ಕಾಯಿಲೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎನ್ನುವುದನ್ನು ಬಹಿರಂಗಪಡಿಸಿದೆ.

10 ನಿಮಿಷಗಳ ಹೆಚ್ಚುವರಿ ನಿದ್ರೆಯ ಪರಿಣಾಮ:

ನಿದ್ರೆಯಲ್ಲಿ ಸ್ವಲ್ಪ ಹೆಚ್ಚಳವಾದರೂ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದನ್ನು ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ. ಇಲ್ಲಿ 10,000 ಕ್ಕೂ ಹೆಚ್ಚು ವಯಸ್ಕರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇವರನ್ನು ಅಧ್ಯಯನಕ್ಕೆ ಒಳಪಡಿಸುವ ಮುನ್ನ ವಿಜ್ಞಾನಿಗಳು ಅವರ ನಿದ್ರೆಯ ಮಾದರಿಗಳು ಮತ್ತು ಹೃದಯರಕ್ತನಾಳದ ಅಪಾಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ನಂತರ ದಿನಕ್ಕೆ ಸರಾಸರಿ 10 ನಿಮಿಷಗಳಷ್ಟು ಹೆಚ್ಚು ನಿದ್ರೆ ಮಾಡುವವರ ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ ಎಂದು ಈ ಅಧ್ಯಯನದ ಮೂಲಕ ಕಂಡು ಹಿಡಿಯಲಾಗಿದೆ. 10 ನಿಮಿಷಗಳ ಹೆಚ್ಚಿನ ನಿದ್ರೆಯು ಒತ್ತಡದ ಹಾರ್ಮೋನ್ ಅಂದರೆ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ. ಒಟ್ಟಾರೆಯಾಗಿ, ಕೇವಲ 10 ನಿಮಿಷಗಳ ಹೆಚ್ಚುವರಿ ನಿದ್ರೆಯು ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುವುದು ಈ ಅಧ್ಯಯನದಿಂದ ಹೊರ ಬಿದ್ದ ಸತ್ಯ.

10 Minutes Extra Sleep

ರಾಷ್ಟ್ರೀಯ ಆರೋಗ್ಯ ಸೇವೆಯ ವರದಿಯ ಪ್ರಕಾರ, ಸಾಕಷ್ಟು ಮತ್ತು ಗುಣಮಟ್ಟದ ನಿದ್ರೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ನಿರ್ಣಾಯಕವಾಗಿದೆ. ಉತ್ತಮ ನಿದ್ರೆ ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮನಸ್ಸು ಶಾಂತವಾಗಿರುತ್ತದೆ. ಅತಿಯಾದ ಒತ್ತಡವು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ ಮನಸ್ಸು ಮತ್ತು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸರಿಯಾದ ಮತ್ತು ಗಾಢವಾದ ನಿದ್ದೆ ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಮಾತ್ರೆಯೇ ಪರಿಹಾರವಲ್ಲ, ಈ 5 ಯೋಗಾಸನದಿಂದಲೂ ಶಮನವಾಗುವುದು ಬಾಧೆ
ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಮಾತ್ರೆಯೇ ಪರಿಹಾರವಲ್ಲ, ಈ 5 ಯೋಗಾಸನದಿಂದಲೂ ಶಮನವಾಗುವುದು ಬಾಧೆ

ರಕ್ತದೊತ್ತಡ ಮತ್ತು ನಿದ್ರೆಯ ನಡುವಿನ ಸಂಬಂಧ:

ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ವರದಿಯ ಪ್ರಕಾರ, ಸಾಕಷ್ಟು ನಿದ್ರೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ದಿನಕ್ಕೆ ೧೦ ನಿಮಿಷ ಹೆಚ್ಚು ನಿದ್ದೆ ಮಾಡುವುದರಿಂದ ಅಧಿಕ ರಕ್ತದೊತ್ತಡದ ಮಟ್ಟಗಳು ಕ್ರಮೇಣ ಕಡಿಮೆಯಾಗುತ್ತವೆ ಎಂದು ಸಂಶೋಧನೆ ಹೇಳುತ್ತದೆ. ನಿದ್ರೆಯ ಸಮಯದಲ್ಲಿ, ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿರಂತರವಾಗಿ ನಿದ್ರೆಯ ಕೊರತೆ ಮತ್ತು ಸಮಯಕ್ಕೆ ಸರಿಯಾಗಿ ಮಲಗದ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಸಾಕಷ್ಟು ನಿದ್ರೆ ಮಾಡುವವರು ಈ ಅಪಾಯದಿಂದ ಮುಕ್ತಿ ಪಡೆಯುತ್ತಾರೆ. ಉತ್ತಮ ನಿದ್ರೆ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಪರಿಣಾಮವಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳ ಅಪಾಯ ಕೂಡಾ ಕಡಿಮೆಯಾಗುವುದು.

ಬೇಸಿಗೆಯ ಶಾಖದಿಂದ ಉಂಟಾಗುವ ಹೊಟ್ಟೆನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು
ಬೇಸಿಗೆಯ ಶಾಖದಿಂದ ಉಂಟಾಗುವ ಹೊಟ್ಟೆನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು

ಕೊಲೆಸ್ಟ್ರಾಲ್ ಮತ್ತು ಜೀವನಶೈಲಿಯ ಅಂಶಗಳು:

ನಿದ್ರೆಯ ಅಭಾವವು ದೇಹದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ಒಬ್ಬ ವ್ಯಕ್ತಿಗೆ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡದೇ ಹೋದಾಗ ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಅಸಮತೋಲನವು ಕೊಬ್ಬಿನ ಸಂಸ್ಕರಣೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮುಂದುವರಿದು ಹೃದಯ ಕಾಯಿಲೆಗೆ ಕಾರಣವಾಗಬಹುದು. ಉತ್ತಮ ಮತ್ತು ಸಾಕಷ್ಟು ನಿದ್ರೆ ಮಾಡುವವರು ಹೆಚ್ಚು ಸಮತೋಲಿತ ದೈನಂದಿನ ದಿನಚರಿಯನ್ನು ನಿರ್ವಹಿಸುತ್ತಾರೆ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ.

ಆರೋಗ್ಯಕರ ಆಹಾರವನ್ನು ಸೇವನೆ, ನಿಯಮಿತವಾಗಿ ವ್ಯಾಯಾಮ, ಒತ್ತಡ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕವೂ ಹೃದಯದ ಆರೋಗ್ಯವನ್ನು ಕಾಪಾಡಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+