ಛೀ... ಕಣ್ಣು ಹೊಡೆದು, ಮೈಮೇಲೆ ಬೀಳ್ತಾರೆ..: ಪುಂಡರ ದುರ್ವರ್ತನೆಯಿಂದ ರಕ್ಷಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್
ಬಸ್, ರೈಲು, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದುರ್ವರ್ತನೆ ತೋರುವ ಪುಂಡರಿಂದಾಗಿ ಅನೇಕ ಮಹಿಳೆಯರು ಬೇಸತ್ತು ಹೋಗಿರುತ್ತಾರೆ. ಬಸ್‌ಗಳಲ್ಲಿ ವಿನಾಕಾರಣ ಮೈ ಮೇಲೆ ಬೀಳುವುದು, ಮೈಸವರಿ ಮಾತನಾಡುವುದು, ತುಂಬಾ ಹತ್ತಿರದಲ್ಲಿ ನಿಂತು ಮಾತನಾಡುವುದು, ಕಣ್ಣ ಸನ್ನೆಗಳನ್ನು ಮಾಡುವುದು ಹೀಗೆ ಹೇಳ್ತಾ ಹೋದರೆ ಕಾಮುಕರ ವರ್ತನೆಗಳು ಎಲ್ಲೆಮೀರಿ ಹೋಗಿರುತ್ತವೆ.
ಇದರಿಂದ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ? ಇಂಥಹ ವರ್ತನೆಗಳು ಪುನಾರವರ್ತಿತವಾಗದಂತೆ ತಡೆಯುವುದು ಹೇಗೆ? ಅಂಥವರನ್ನು ಕಡೆಗಣಿಸುವುದು ಹೇಗೆ ಎನ್ನುವುದು ತಕ್ಷಣಕ್ಕೆ ಹೊಳೆಯುವುದಿಲ್ಲ. ಹೀಗಿರುವಾಗ ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತೇವೆ. ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ರಕ್ಷಣೆ ಮಾಡಿಕೊಳ್ಳಬಹುದು.

ಮಹಿಳೆಯರು ತಾವು ಆರ್ಥಿಕವಾಗಿ ಸದೃಢವಾಗಬೇಕು. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ಕಾರಣಕ್ಕೆ ಮನೆಬಿಟ್ಟು ಹೊರ ಬರುತ್ತಾರೆ. ನಾನಾ ಕಡೆ ಕೆಲಸ ಮಾಡುತ್ತಾರೆ. ಆದರೆ ಕೆಲ ಪ್ರದೇಶಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂಥಹ ಸಂದರ್ಭದಲ್ಲಿ ತಾವೇ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಎಷ್ಟೇ ಸುರಕ್ಷಿತವಾಗಿದ್ದರು ಕೆಲವೊಮ್ಮೆ ಇಂತಹ ಘಟನೆಗಳು ಅನುಭವಕ್ಕೆ ಬಂದು ಬಿಡುತ್ತವೆ. ಕೆಲ ಬಾರಿ ಮತ್ತೊಬ್ಬರ ಸಹಾಯ ಪಡೆಯುವಷ್ಟರಲ್ಲಿ ಇಂಥಹ ಘಟನೆಗಳು ನಡೆದು ಹೋಗುತ್ತವೆ. ಆಗ ಸ್ವರಕ್ಷಣೆ ಮಾಡಿಕೊಳ್ಳದೆ ಬೇರೆ ದಾರಿ ಇರುವುದಿಲ್ಲ.
ಹಾಗಾದರೆ ಮಹಿಳೆಯರು ಸ್ವರಕ್ಷಣೆ ಮಾಡಿಕೊಳ್ಳುವುದು ಹೇಗೆ? ಕೆಲ ಸಲಹೆಗಳು ಇಲ್ಲಿವೆ. ಅದಕ್ಕೂ ಮುನ್ನ ಎಂಥಹ ಸ್ಥಳಗಳಲ್ಲಿ ಮಹಿಳೆಯರು ಪುಂಡರ ದುರ್ವರ್ತನೆಗೆ ಒಳಗಾಗುತ್ತಾರೆಂದು ತಿಳಿಯೋಣ.

ಕೆಲಸ ಮಾಡುವ ಸ್ಥಳದಲ್ಲಿ ದುರ್ವರ್ತನೆಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ಕಚೇರಿಗಳಲ್ಲಿ ಸುಖಾಸುಮ್ಮನೆ ಮುಟ್ಟಲು ಪ್ರಯತ್ನಿಸುವುದು, ಏಕಾಏಕಿ ಹೆಚ್ಚು ಆತ್ಮೀಯರಂತೆ ವರ್ತಿಸುವುದು, ಬೇಡವಾದ ವಿಚಾರಗಳನ್ನು ಪ್ರಸ್ತಾಪಿಸುವುದು, ಕಡೆಗಣಿಸಿದರೂ ಫೋನ್ ನಂಬರ್ ಕೇಳುವುದು, ಅಶ್ಲೀಲವಾಗಿ ಮಾತನಾಡಲು ಬಯಸುವುದು ಇವೆಲ್ಲವೂ ಗಮನಕ್ಕೆ ಬಂದಿರುತ್ತವೆ. ಇಂಥಹ ವರ್ತನೆಗಳಿಂದ ದೂರವಿರುವುದು ಹೇಗೆ ಎನ್ನುವ ಚಿಂತೆ ಕೆಲವರಿಗೆ ಕಾಡಬಹುದು. ಚಿಂತಿಸಬೇಡಿ. ಇಂಥಹ ಜನ ನೀವು ಎಲ್ಲೇ ಹೋದರೂ ಇದ್ದೇ ಇರುತ್ತಾರೆ. ಅಂಥವರನ್ನು ಎದುರಿಸುವಂತಹ ಜಾಣ್ಮೆಯನ್ನು ನಾವು ಕಲಿತಿರಬೇಕು ಅಷ್ಟೆ.
* ಅಂಥವರ ಮಾತುಗಳನ್ನು ನಿರ್ಲಕ್ಷಿಸಿ.
* ಅವರತ್ತ ನೋಡಬೇಡಿ. ಅವರಿಂದ ಸಾಧ್ಯವಾದಷ್ಟು ದೂರವಿರಿ.
* ನಿಮ್ಮ ನೋಟದಿಂದ ಅವರಿಗೆ ಉತ್ತರವನ್ನು ಕೊಡಿ.
* ಕೆಲವೊಮ್ಮೆ ನಿಮ್ಮ ಸೂಕ್ಷ್ಮವಾದ ಮಾತುಗಳಿಂದಲೂ ಅವರಿಗೆ ಉತ್ತರ ನೀಡಬಹುದು.
* ಮೈ-ಕೈ ಮುಟ್ಟಲು ಬಂದರೆ ನೇರವಾಗಿ ಹೇಳಿ.
* ಹೆಚ್‌ಆರ್ ಗಮನಕ್ಕೆ ತರುವ ಮೂಲಕವೂ ಇದನ್ನು ನೀವು ತಡೆಯಬಹುದು
* ಅತಿರೇಕಕ್ಕೆ ಹೋದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರೂ ತಪ್ಪಲ್ಲ
ಪ್ರಯಾಣದ ಸ್ಥಳಗಳಲ್ಲಿ ದುರ್ವರ್ತನೆಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ಇನ್ನೂ ಪ್ರಯಾಣದ ವೇಳೆ ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ ಜನರಿರುತ್ತಾರೆ. ಪ್ರಯಾಣದ ವೇಳೆ ಸುಖಾ ಸುಮ್ಮನೆ ಮೈ ಮೇಲೆ ಬೀಳುವುದು, ಖಾಸಗಿ ಬಾಗಗಳನ್ನು ಮುಟ್ಟುವುದು, ಮಾತನಾಡಿಸುವುದು, ಕರೆಯುವುದು, ತಮ್ಮಷ್ಟಕ್ಕೆ ತಾವು ಫೋನಿನಲ್ಲಿ ಮಾತನಾಡುವಂತೆ ವರ್ತಿಸಿ ನಿಮ್ಮೊಂದಿಗೆ ಮಾತನಾಡುವುದು, ರೇಟ್ ಕೇಳುವುದು, ಅಶ್ಲೀಲವಾದ ಪದಗಳನ್ನು ಬಳಸುವುದು ಇವೆಲ್ಲವೂ ನಡೆಯುತ್ತವೆ. ಇಂಥಹ ಸಂದರ್ಭಗಳನ್ನು ನೀವು ಎದುರಿಸಿದ್ದರೆ ಅಥವಾ ಎಂದಾದರೂ ಎದುರಿಸುವ ಸಂದರ್ಭ ಬಂದಲ್ಲಿ ಭಯ ಪಡಬೇಡಿ. ಅವುಗಳನ್ನು ಜಾಣ್ಮೆಯಿಂದ ನಿಭಾಯಿಸಬೇಕು.

* ಪ್ರಯಾಣದ ವೇಳೆ ಆದಷ್ಟು ಮಹಿಳೆಯರೊಂದಿಗೆ ನಿಂತುಕೊಳ್ಳಲು ಪ್ರಯತ್ನಿಸಿ
* ಪುರುಷರೊಂದಿಗೆ ನಿಂತುಕೊಳ್ಳುವ ಸಂದರ್ಭ ಬಂದಲ್ಲಿ ನಿಮ್ಮೊಂದಿಗೆ ಕೆಟ್ಟದಾಗಿ ಯಾರಾದರು ನಡೆದುಕೊಳ್ಳುತ್ತಿದ್ದಾರೆಂದು ನಿಮಗನಿಸಿದಲ್ಲಿ ನಿಮ್ಮೊಂದಿಗಿರುವ ಮಹಿಳೆಯರಿಗೆ ಮಾಹಿತಿ ನೀಡಿ.
* ಪ್ರಯಾಣದ ವೇಳೆ (ಕಂಡಕ್ಟರ್, ಸಹ ಪ್ರಯಾಣಿಕರು, ಸಹಾಯವಾಣಿಗೂ ಕರೆ ಮಾಡಬಹುದು) ಇತರ ಪುರುಷರ ಸಹಾಯ ಪಡೆಯಿರಿ.
* ಪ್ರಯಾಣದ ವೇಳೆ ನಿಮ್ಮೊಂದಿಗೆ ಸೇಫ್ಟಿ ಪಿನ್ ಹಾಗೂ ಚೂಪಾದ ಕ್ಲಿಪ್ ಇಟ್ಟುಕೊಂಡಿರಿ. ಇದು ನಿಮ್ಮ ಬಳಿ ಇರುವುದು ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲು ಪ್ರಯತ್ನಿಸುವವರಿಗೆ ಗೊತ್ತುಪಡಿಸಿ.
* ಮಿತಿ ಮೀರಿದ ವರ್ತನೆಯನ್ನು ಎಂದಿಗೂ ಸಹಿಸಬೇಡಿ. ಅದಕ್ಕೆ ತಕ್ಕ ಉತ್ತರವನ್ನು ಕೊಟ್ಟು ಸಹಪ್ರಯಾಣಿಕರ ಸಹಾಯದಿಂದ ಪೊಲೀಸರಿಗೆ ಕರೆ ಮಾಡಿ.
ಆಟೋ, ಕ್ಯಾಬ್‌ನಲ್ಲಿ ದುರ್ವರ್ತನೆಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ಕೆಲ ಬಾರಿ ನೀವು ತಡರಾತ್ರಿ ಒಂಟಿಯಾಗಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು. ಆಗ ನೀವು ಪ್ರಯಾಣಿಸುವ ಕ್ಯಾಬ್ ಅಥವಾ ಆಟೋ ಚಾಲಕರು ನಿಮಗೆ ಸೇಫ್ ಅನಿಸದೇ ಇರಬಹುದು. ಆಗ ನೀವು ನಿಮ್ಮ ರಕ್ಷಣೆಯನ್ನು ಸ್ವತ: ಮಾಡಿಕೊಳ್ಳಬೇಕಾಗುತ್ತದೆ.
* ಇಂತಹ ಸಂದರ್ಭಗಳಲ್ಲಿ ನೀವು ನಿಮ್ಮವರೊಂದಿಗೆ ನಿಮ್ಮ ಗಮ್ಯ ಸ್ಥಳವನ್ನು ತಲುಪುವವರೆಗೂ ಫೋನ್ ಕರೆಯಲ್ಲಿಯೇ ಇರಿ.
* ನೀವು ಪ್ರಯಾಣಿಸುವ ಚಾಲಕ ಸೇಫ್ ಅನಿಸದೇ ಇದ್ದಲ್ಲಿ ಫೋನ್ ಹಿಡಿದುಕೊಂಡು ಪೊಲೀಸರೊಂದಿಗೆ ಮಾತನಾಡುವಂತೆ ವರ್ತಿಸಿ.
* ನೀವು ನಿಮ್ಮ ಸ್ಥಳಕ್ಕೆ ತಲುಪುವ ಮುನ್ನವೇ ನಿಮ್ಮನ್ನು ಪೋಷಕರು ಮಾರ್ಗ ಮಧ್ಯೆ ಕರೆದೊಯ್ಯಲಿದ್ದಾರೆನ್ನುವಂತೆ ವರ್ತಸಿ.
* ಯಾವುದೇ ಕಾರಣಕ್ಕೂ ಭಯ ಬೀಳಬೇಡಿ. ಭಯಗೊಂಡವರಂತೆ ವರ್ತಿಸಬೇಡಿ. ಧೈರ್ಯವಾಗಿ ಎಲ್ಲವನ್ನೂ ಫೇಸ್ ಮಾಡಿ. ಇಂಥಹ ಸಂದರ್ಭಗಳನ್ನು ಎದರಿಸಲು ನೀವು ಧೈರ್ಯವಾಗಿರಬೇಕು.
* ರಾತ್ರಿ ಪ್ರಯಾಣ ಮಾಡುವ ಮಹಿಳೆಯರು ಸ್ವರಕ್ಷತೆಗೆ ಬೇಕಾದ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಿ.
ನಿರ್ಜನ ಪ್ರ ದೇಶದಲ್ಲಿ ದುರ್ವರ್ತನೆಯಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ?
ಕೆಲ ಬಾರಿ ಮಹಿಳೆಯರಿಗೆ ಜನನಿಬಿಡ ಪ್ರದೇಶಗಳಲ್ಲೇ ಕೆಟ್ಟ ವರ್ತನೆ ತೋರುವ ಜನರಿರುವುದಿಲ್ಲ. ಬದಲಿಗೆ ಅಂಥಹ ಜನ ನಿರ್ಜನ ಪ್ರದೇಶದಲ್ಲೋ ಅಥವಾ ಒಂಟಿಯಾಗಿ ಇರುವಾಗಲೂ ನಡೆಯಬಹುದು. ಬಲವಂತವಾಗಿ ಎಳೆದೊಯ್ಯುವುದು, ಸ್ಪೇ ಹಾಕಲು ಪ್ರಯತ್ನಿಸುವುದು, ಪ್ರಜ್ಞೆ ತಪ್ಪಿಸಲು ಪ್ರಯತ್ನಿಸುವುದು ಇಂತಹ ಸಂದರ್ಭಗಳನ್ನೂ ಎದುರಿಸಿರಬಹುದು.
* ಇಂತಹ ಕೆಟ್ಟ ಪರಿಸ್ಥಿತಿ ಬಂದರೆ ನಿಮ್ಮ ಸುತ್ತಲು ಇರುವ ಯಾವ ವಸ್ತುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಚಿಂತಿಸಿ.
* ಭಯ, ಆತಂಕಕ್ಕೆ ಒಳಗಾಗಬೇಡಿ. ಅಂಥವರ ಮೇಲೆ ದಾಳಿಗೆ ಮುಂದಾಗಿ.
* ಖಾರದ ಪುಡಿ, ಉಪ್ಪು, ಮಣ್ಣು, ಕಲ್ಲು, ಕಟ್ಟಿಗೆ ಇಂಥಹ ವಸ್ತುಗಳು ನಿಮ್ಮ ರಕ್ಷಣೆಗೆ ಸಾಹಯವಾಗುಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ದುರ್ವರ್ತನೆ:
ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಜಾತ್ರೆ, ಮಹೋತ್ಸವ, ವಿಶೇಷ ದಿನಗಳಲ್ಲಿ ಜನ ದಟ್ಟನೆ, ತೆರೆದ ಮೈದಾನದಲ್ಲಿ ಸಂಜೆ ಕಾರ್ಯಕ್ರಮಗಳಲ್ಲೂ ಇಂತಹ ಕೆಟ್ಟ ವ್ಯಕ್ತಿಗಳು ಇರುತ್ತಾರೆ. ಇವರಿಂದಲೂ ನೀವು ಕೆಲ ಬಾರು ತೊಂದರೆಗೆ ಒಳಗಾಗಬಹುದು.
* ಸಾರ್ವಜನಿಕ ಸ್ಥಳಗಳಲ್ಲಿ ಇಂಥವರನ್ನು ಎದುರಿಸಲು ಹಿಂಜರಿಯಲೇಬೇಡಿ. ಯಾಕೆಂದರೆ ಕೆಟ್ಟವರು ಇರುವಂತೆ ಒಳ್ಳೆಯವರು ಇರುತ್ತಾರೆ ಅನ್ನೋದನ್ನು ಮರೆಬೇಡಿ.
* ಗುಂಪಾಗಿ ಹೋಗಲು ಪ್ರಯತ್ನಿಸಿ. ನಿಮ್ಮೊಂದಿಗೆ ಯಾರೂ ಇಲ್ಲವಾದರೂ ಯಾರಾದರೂ ನಿಮ್ಮೊಂದಿಗೆ ಇರುವಂತೆ ವರ್ತಿಸಿ. ನೀವು ಒಂಟಿ ಎನ್ನುವುದನ್ನು ಗೊತ್ತಾಗುವಂತೆ ನಡೆದುಕೊಳ್ಳಬೇಡಿ.
* ಸಭ್ಯ ಕುಟುಂಬಗಳಿದ್ದರೆ ಅವರ ಹಿಂದೆ ಮುಂದೆ ಇರಿ. ನೀವಿರುವ ಸ್ಥಳವನ್ನು ಬದಲಾಯಿಸಿ ಅಥವಾ ಒಳ್ಳೆಯವರೆನಿಸಿದವರ ಸಹಾಯ ಪಡೆಯಿರಿ.
ಪ್ರೀತಿ ಮಾಡುವಂತೆ ಪೀಡಿಸುವವರಿಂದ ತಪ್ಪಿಸಿಕೊಳ್ಳುವುದು ಹೇಗೆ?
ಅಸಭ್ಯ ವರ್ತನೆ ಹುಚ್ಚು ಪ್ರೀತಿ ಮಾಡುವವರಿದಂಲೂ ನಿಮ್ಮ ಹಿಂದೆ ನಿತ್ಯ ಬಂದು ಪ್ರೀತಿಸುವಂತೆ ಪೀಡಿಸುವವರಿಂದಲೂ ನಿಮಗಾಗಬಹುದು. ಅಂಥವರಿಂದ ನಿಮ್ಮನ್ನು ನೀವು ಸುಲಭವಾಗಿ ರಕ್ಷಣೆ ಮಾಡಿಕೊಳ್ಳಬಹುದು.
* ಯಾರಾದರು ನಿಮ್ಮನ್ನು ಹಿಂಬಾಲಿಸಿದರೆ ಅಥವಾ ಹಿಂಬಾಲಿಸುತ್ತಿದ್ದಾರೆಂದು ನಿಮಗೆ ತಿಳಿದು ಬಂದಿರೆ. ಫೋನಿನಲ್ಲಿ ಮಾತನಾಡಿ. (ಮಾತನಾಡುವಾಗ ಸೈಲೆಂಡ್ ಮೂಡ್‌ಗೆ ಹಾಕಿ)
* ನಿಮಗೆ ಈಗಾಗಲೇ ಪ್ರಿಯತಮ ಇರುವಂತೆ ಫೋನಿನಲ್ಲಿ ಮಾತನಾಡಿ.
* ಫೋನಿನಲ್ಲಿ ಮಾತನಾಡುವಾಗ ಪ್ರೀತಿಯಿಂದ ಮಾತನಾಡಿ. ಮುಂದೆ ಮಾರ್ಗ ಮಧ್ಯೆ ಪ್ರಿಯತಮಗೆ ಸಿಗುವುದಾಗಿಯೂ ಹೇಳಿ ವರ್ತಿಸಿ.
* ನಿಮಗೆ ಗೊತ್ತಿರುವವರಿಗೆ ಸ್ಥಳಕ್ಕೆ ಬರಲು ಸಂದೇಶವನ್ನು ಕಳುಹಿಸಿ.
* ನಿಮ್ಮ ಸುತ್ತಮುತ್ತಲು ನಿಮಗೆ ಗೊತ್ತಿರುವವರು ಇರುವಂತೆ ಮಾತನಾಡಿ.
* ನೀವು ನಿತ್ಯ ಓಡಾಡುವ ಮಾರ್ಗವನ್ನು ಬದಲಾಯಿಸಿ.
ಹೀಗೆ ಸಾಕಷ್ಟು ವಿಧಾನಗಳ ಮೂಲಕ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆದರೆ ಯಾವುದೇ ರೀತಿಯ ಅತಿರೇಖದ ವರ್ತನೆಯನ್ನು ತಡೆಯಲು ಪೊಲೀಸರನ್ನು ನೇರವಾಗಿ ಸಂಪರ್ಕಿಸಿ. ಯಾವುದೇ ಹಿಂಜರಿಕೆ ಇಲ್ಲದೆ ಅವರ ಸಹಾಯ ಪಡೆದು ಯಾವುದೇ ಅಹಿತಕ ಘಟನೆ ನಡೆಯದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications