ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಈ ಹಣ್ಣುಗಳು ಬೆಸ್ಟ್
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕೆಲವು ನಿರ್ದಿಷ್ಟ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಬೆಳಿಗ್ಗೆ ಸಮಯದಲ್ಲಿ ದೇಹವು ಪೋಷಕಾಂಶವನ್ನು ಹೀರಿಕೊಳ್ಳುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಣ್ಣುಗಳನ್ನು ಸೇವಿಸುವುದರಿಂದ ಇಡೀ ದಿನ ನಿಮ್ಮ ಉತ್ಸಾಹವನ್ನು ದೇಹವು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುತ್ತದೆ.
ಮುಂಜಾನೆ ಸಮಯದಲ್ಲಿ ತಿನ್ನಬಹುದಾದ 10 ಹಣ್ಣುಗಳ ವಿವರ
ಸೇಬು ಹಣ್ಣು: ದಿನಕ್ಕೆ ಒಂದು ಸೇಬು ತಿನ್ನುವುದರಿಂದ ನಿಜವಾಗಿಯೂ ವೈದ್ಯರನ್ನು ದೂರವಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶ ಹೊಟ್ಟೆ ತುಂಬಿದ ಅನುಭವ ನೀಡಿ, ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಪಪ್ಪಾಯಿ ಹಣ್ಣು: ಪಪ್ಪಾಯಲ್ಲಿ ಪಪೈನ್ ಎನ್ನುವ ಪೋಷಕಾಂಶ ಇದ್ದು ಇದು ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ಮುಂಜಾನೆ ಇದನ್ನು ತಿನ್ನುವುದರಿಂದ ಹೊಟ್ಟೆ ಸಮಸ್ಯೆಗಳು ಕಡಿಮೆ ಆಗುತ್ತದೆ.
ಬಾಳೆಹಣ್ಣು: ಬಾಳೆಹಣ್ಣು ಶಕ್ತಿ ನಿಡುವ ಉತ್ತಮ ಹಣ್ಣು, ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಅಧಿವಾಗಿದ್ದು ದೇಹದ ಎಲೆಕ್ಟ್ರೊಲೈಟ್ ಅಂಶವನ್ನು ಸಮತೂಲನದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.
ದಾಳಿಂಬೆ ಹಣ್ಣು: ದಾಳಿಂಬೆಯಲ್ಲಿ ಕಬ್ಬಿಣ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಅಧಿಕವಾಗಿದ್ದು ರಕ್ತಹೀನತೆ ಇರುವವರಿಗೆ ಇದು ಉಪಯೋಗವಾಗುತ್ತದೆ.
ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿಡಲು ಮತ್ತು ಹೈಡ್ರೇಶನ್ ಕಾಪಾಡಲು ಉತ್ತಮ ಇದರಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.
ಪೇರಳೆ ಹಣ್ಣು: ಪೇರಳೆ ವಿಟಾಮಿನ್ ಸಿ ಮತ್ತು ಫೈಬರ್ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಿವಿ ಹಣ್ಣು: ಕಿವಿ ಹಣ್ಣು ವಿಟಾಮಿನ್ ಸಿ ಸಮೃದ್ಧವಾಗಿದ್ದು ಚರ್ಮದ ಆರೋಗ್ಯಕ್ಕೆ, ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿಯಾಗಿದೆ.
ಮಾವಿನ ಹಣ್ಣು: ಮಾವಿನ ಹಣ್ಣು ವಿಟಮಿನ್ A ಮತ್ತು C ಅಧಿಕವಾಗಿದೆ. ಆದರೆ ಸಕ್ಕರೆ ಪ್ರಮಾಣ ಹೆಚ್ಚಿರುವುದರಿಂದ ಮಿತವಾಗಿ ತಿನ್ನುವುದು ಉತ್ತಮ
ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಗುಣವಿದ್ದು ದೇಹದ ಡಿಟಾಕ್ಸ್ ಪ್ರಕ್ರಿಯೆಯಲ್ಲಿ ಸಹಾಯವಾಗುತ್ತದೆ ಇದರಿಂದ ಶಕ್ತಿ ಹೆಚ್ಚಾಗುತ್ತದೆ.
ಅನಾನಸ್ ಹಣ್ಣು: ಅನಾನಸ್ ಹಣ್ಣಿನಲ್ಲಿ ಬ್ರೊಮೆಲೈನ್ ಪ್ರೋಟೀನ್ ಇದ್ದು ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ದೇಹದ ಉರಿಯನ್ನು ಕಡಿಮೆ ಮಾಡುತ್ತದೆ.
ಕೊನೆಯ ಮಾತು: ಆರೋಗ್ಯಕರ ಜೀವನಶೈಲಿಗೆ ದೊಡ್ಡ ಬದಲಾವಣೆಗಳೇ ಬೇಕಿಲ್ಲ ಬೆಳಿಗ್ಗೆ ಒಂದು ಹಣ್ಣು ತಿನ್ನುವ ಸಣ್ಣ ಅಭ್ಯಾಸವು ನಿಮ್ಮನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಬಲ್ಲದು.












Click it and Unblock the Notifications