ವಾರಾಂತ್ಯದಲ್ಲಿ ಮನಸ್ಸು ಹಗುರಾಗಿಸುವ, ನಕ್ಕು ನಗಿಸುವ ಜೋಕು!
ವಾರಾಂತ್ಯದಲ್ಲಿ ಮನಸ್ಸನ್ನು ಹಗುರಾಗಿಸುವ, ನಕ್ಕು ನಲಿಸಿ ಹೊಟ್ಟೆ ಹುಣ್ಣಾಗಿಸುವ ಒಂದಷ್ಟು ಜೋಕುಗಳು ಇಲ್ಲಿವೆ.
ವಾರಪೂರ್ತಿ ಕೆಲಸ ಮಾಡಿ, ದಣಿದಿರುವವರಿಗೆ ಇದು ಸಾಂತ್ವನದ ಟಾನಿಕ್!
ಇಂಗ್ಲಿಷ್ ಅಲ್ಲದೆ, ಕನ್ನಡದಲ್ಲೂ ಸೈಲೆಂಟ್ ಅಕ್ಷರಗಳು ಇವೆ ಯಾವುದು ಗೊತ್ತಾ? ರಾತ್ರಿ ಎರಡು ಗಂಟೆಗೆ ಕುಡಿದು ಮನೆಗೆ ಬಂದ ಗಂಡ ತನ್ನ ಹೆಂಡತಿಗೆ ಹೇಳಿದ್ದೇನು ಕೇಳಿ...! ತಮ್ಮ ಲವ್ ವಿಷ್ಯಾನಾ ಮನೇಲಿ ಮೆಲ್ಲದೆ ಹೇಳಿದ ಗುಂಡನ ಕತೆ ನೋಡಿ...!
ಒಟ್ಟಿನಲ್ಲಿ ವೀಕೆಂಡ್ ಮಸ್ತಿಗಾಗಿ ಈ ಸ್ಲೈಡ್ ಗಳಲ್ಲಿರುವ ಜೋಕು ಓದು, ಮನಸ್ಸು ತಿಳಿಯಾಗಿಸಿಕೊಳ್ಳಿ!

ಕನ್ನಡದಲ್ಲೂ ಸೈಲೆಂಟ್ ಪದಗಳಿವೆ ಗೊತ್ತಾ..?
ಇಂಗ್ಲೀಷ್ ಅಲ್ಲದೆ ಕನ್ನಡದಲ್ಲೂ ಸಹ ಕೆಲ ಪದಗಳು ಸೈಲೆಂಟಾಗಿರುತ್ತವೆ.
ಉದಾಹರಣೆಗೆ ಈ ಕೆಳಗಿನ ಸಂಭಾಷಣೆಗಳನ್ನ ಸರಿಯಾಗಿ ಗಮನಿಸಿ.
ಅಂಗಡಿಯವ ವಸ್ತುವಿನ ಬೆಲೆ ಹೇಳುವಾಗ "ನಿಮಗೆ ಹೆಚ್ಚು ಹೇಳ್ತಿಲ್ಲಾ" ಅಂತ ಹೇಳುತ್ತಾನೆ.ಇದರಲ್ಲಿ "ಸುಳ್ಳು" ಎಂಬ ಪದ ಸೈಲೆಂಟ್ ಆಗಿರುತ್ತದೆ.
ಮದುವೆ ಸಮಯದಲ್ಲಿ "ನಮ್ಮ ಮಗಳು ಹಸುವಿದ್ದಂತೆ" ಎಂದು ಹೇಳುತ್ತಾರೆ.ಇದರಲ್ಲಿ "ಇರಿಯುವ " ಎಂಬ ಪದ ಸೈಲೆಂಟ್ ಆಗಿರುತ್ತದೆ.
ಮದುವೆಯ ಕೊನೆಯಲ್ಲಿ ಮದುಮಗನಿಗೆ "ಹುಷಾರಾಗಿ ನೋಡಿಕೊ" ಎಂದು ಹೇಳುತ್ತಾರೆ.ಇದರಲ್ಲಿ "ನಿನ್ನನ್ನ" ಎಂಬ ಪದ ಸೈಲೆಂಟ್ ಆಗಿರುತ್ತದೆ.

ರಾತ್ರಿ 2 ಗಂಟೆಗೆ ಕುಡಿದು ಮನೆಗೆ ಬಂದ ಗಂಡ...
ರಾತ್ರಿ ೨ ಗಂಟೆಗೆ ಕುಡಿದು ಬಂದ ಗಂಡನನ್ನು ನೋಡಿದ ಹೆಂಡತಿ ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.
ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು

ಲವ್ ವಿಷ್ಯಾನಾ ಮನೇಲಿ ಮೆಲ್ಲಗೆ ಹೇಳಿದ ಗಂಡ.. ಆಮೇಲೇನಾಯ್ತು!
ಹುಡ್ಗ : ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ
ಹುಡ್ಗಿ : ವ್ಹಾವ್.!! ಆಮೇಲ್ ಏನಾಯ್ತು.?
ಹುಡ್ಗ : ಆಗೋದೇನು.? ಮೆಲ್ಲಗೆ ಹೇಳಿದ್ರಿಂದ ಯಾರಿಗೂ ಕೇಳಿಸ್ಲಿಲ್ಲ.. ಬಚಾವಾಗ್ಬಿಟ್ಟೆ.

ಅಯ್ಯಯ್ಯೋ ಪಮ್ಮಿ, ಮಮ್ಮಿ ಕನ್ ಫ್ಯೂಶನ್!
ಬಾಯ್ : ಹಲೋ, ಪಮ್ಮಿ ಡಾರ್ಲಿಂಗ್ . ಹೇಗಿದ್ದೀಯಾ ?
ಗರ್ಲ್ : ಯಾರಿದು?
ಬಾಯ್ : ನಾನು ನಿನ್ ನ ಪ್ರಣಯಕಾಂತ!
ಗರ್ಲ್ : ನೀನು ದಿವ್ಯರಾಜ್ ತಾನೆ
ಬಾಯ್ : ಹೌದು, ನಿನಗೇಗೆ ಗೊತ್ತು?
ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ?
ಬಾಯ್ : ನಿನಗೆ ಹೆಗೋತ್ತು ?
ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ?
ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು?
ಗರ್ಲ್ : ಕಚ್ಡಾ ನನ್ನ ಮಗನೇ.... ನಿನ್ನಮ್ಮ ಕಣೋ ನಾನು!
ನೀನು ಕುಡಿದು 'ಪಮ್ಮಿ' ಗೆ ಅಲ್ಲ, 'ಮಮ್ಮಿ' ಗೆ ಫೋನ್ ಮಾಡಿದಿಯಾ!












Click it and Unblock the Notifications