• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉದ್ಯಮಿಗೆ ಟೀಚರ್ ಹೇಳಿದ ಸುಖದ ಪಾಠ!

|

ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ಟೀಚರ್ ಒಬ್ಬರಿಗೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಪ್ರೇಮಾಂಕುರವಾಗಿ ಬಿಟ್ಟಿತು. ಮನೆ ಪಕ್ಕದಲ್ಲಿ ವಾಸಿಸುತ್ತಿದ್ದ ಯುವ ಉದ್ಯಮಿಯನ್ನು ನೋಡಿದಾಗಿನಿಂದ ಕಾಲು ನಿಂತಲ್ಲಿ ನಿಲ್ಲುತ್ತಿರಲಿಲ್ಲ, ಮಕ್ಕಳಿಗೆ ಸರಿಯಾಗಿ ಪಾಠವನ್ನೂ ಹೇಳಿಕೊಡಲಾಗುತ್ತಿರಲಿಲ್ಲ. ಆತನನ್ನು ನೋಡಿದಾಗಲೆಲ್ಲ ಮೈಬಿರಿದಂತೆ ಅನುಭವವಾಗುತ್ತಿತ್ತು. ಏನು ಮಾಡಬೇಕು ಎಂಬ ಚಟಪಡಿಕೆಯಲ್ಲಿಯೇ ದಿನ ದೂಡುತ್ತಿದ್ದರು.

ಇದನ್ನು ಗಮನಿಸುತ್ತಿದ್ದ ಯುವ ಉದ್ಯಮಿಗೂ ಅದೇ ರೀತಿ ಆಗಲು ಪ್ರಾರಂಭಿಸಿತು. ಕಡೆಗೊಂದು ದಿನ ಇಬ್ಬರು ಮನೆಯ ಮುಂದೆ ಒಬ್ಬರನ್ನೊಬ್ಬರು ಸಂಧಿಸಿದರು, ಕಣ್ಣು ಕಣ್ಣು ಕಲೆತವು, ಉಸಿರು ಉಸಿರು ಬೆರೆತವು. ಉದ್ಯಮಿ ಧೈರ್ಯ ಮಾಡಿ ಕೇಳೇಬಿಟ್ಟರು, "ನಂಜೊತೆ ಡೇಟಿಂಗ್ ಮಾಡಲು ನೀವು ರೆಡಿಯಾಗಿದ್ದೀರಾ?" ಟೀಚರ್ ತಕ್ಷಣಕ್ಕೆ ಓಕೆ ಅಂದುಬಿಟ್ಟಳು.

ಮರುದಿನ ಆತ ರೆಡಿಯಾಗಿ ಬಂದ, ಟೀಚರ್ ಕೂಡ ಅರೆಪಾರದರ್ಶಕ ಸೀರೆಯುಟ್ಟು ಬಲು ಸೆಕ್ಸಿಯಾಗಿ ಕಾಣುತ್ತಿದ್ದಳು. ಒಂದು ಸುಂದರವಾದ ಪ್ರದೇಶಕ್ಕೆ ಹೋದರು. ಕೈಕೈ ಹಿಡಿದು ನಡೆದಾಡಿದರು, ಏನೇನೋ ಮಾತಾಡಿಕೊಂಡರು. ಕಾರಿನಲ್ಲಿ ಎಲ್ಲವನ್ನೂ ತಂದಿದ್ದ ಉದ್ಯಮಿ ಟೀಚರ್‌ಗೆ ಡ್ರಿಂಕ್ಸ್ ಆಫರ್ ಮಾಡಿದ. ಅದಕ್ಕೆ ಟೀಚರ್, "ನಾ ಬಾಬಾ, ನಾಳೆ ಮಕ್ಕಳಿಗೆ ಏನು ಪಾಠ ಹೇಳಿ ಕೊಡಲಿ" ಎಂದು ಜಾರಿಕೊಂಡರು.

ಅವರು ಹೇಳಿದ್ದು ಸರಿಯಾಗಿದೆ ಎಂದು ಅರಿತ ಉದ್ಯಮಿ, ನಂತರ ಸಿಗರೇಟ್ ಹೊರಗೆಳೆದು ಸೇದುತ್ತೀರಾ ಎಂದು ಕೇಳಿದ. ಅದಕ್ಕೆ ಟೀಚರ್, "ಬೇಡ್ವೇ ಬೇಡ, ನಾಳೆ ಮಕ್ಕಳಿಗೆ ಏನು ಪಾಠ ಹೇಳಿ ಕೊಡಲಿ" ಎಂದು ಮತ್ತೆ ಜಾರಿಕೊಂಡರು. ಉದ್ಯಮಿಗೆ ಬೇಜಾರಾಯಿತು. ತುಸು ಕೋಪದಿಂದಲೇ ಕಾರು ಹತ್ತಿರೆಂದು ಹೇಳಿ ವಾಪಸ್ ಬರಲು ಶುರುಮಾಡಿದರು.

ಹಾದಿಯಲ್ಲಿ ಒಂದು ಹೋಟೆಲ್ ಕಂಡಿತು. ತಕ್ಷಣ ಟೀಚರ್, "ನಿಮಗೇನೂ ಅಭ್ಯಂತರವಿಲ್ಲದಿದ್ದರೆ, ಒಂದು ರಾತ್ರಿ ಆ ಹೋಟೆಲಿನಲ್ಲಿ ಕಳೆಯೋಣ" ಅಂತ ತುಸು ನಾಚಿಕೆ, ತುಸು ಭಯದಿಂದ ಯುವ ಉದ್ಯಮಿಯನ್ನು ಕೇಳಿದಳು. ಉದ್ಯಮಿಗೆ ಆಶ್ಚರ್ಯವೋ ಆಶ್ಚರ್ಯ. "ಅಲ್ಲಾ ಮೇಡಂ, ನಾಳೆ ನಿಮ್ಮ ವಿದ್ಯಾರ್ಥಿಗಳಿಗೆ ಏನೆಂದು ಪಾಠ ಹೇಳಿ ಕೊಡುತ್ತೀರಿ?" ಎಂದು ಕಿಚಾಯಿಸಿದ.

ಅದಕ್ಕೆ ಟೀಚರ್, "ನಾನು ಇದನ್ನು ನಮ್ಮ ಮಕ್ಕಳಿಗೆ ಯಾವತ್ತೂ ಹೇಳುತ್ತಲೇ ಇರುತ್ತೇನೆ. ನಾಳೆಯೂ ಅದನ್ನೇ ಹೇಳುತ್ತೇನೆ. ಅದೇನೆಂದರೆ, ನಮಗೆ ಜೀವದಲ್ಲಿ ಸುಖ ಬೇಕಿದ್ದರೆ ಸಿಗರೇಟು ಮತ್ತು ಮದ್ಯ ಯಾವತ್ತೂ ಮುಟ್ಟಬಾರದು ಎಂದು!"

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Adult Kannada jokes : One fine day teacher of a school falls in love with a business man. He also feels the heartbeat of teacher and offers her to take for dating.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more