ಅಯ್ಯೋ, ಆ ದೊಡ್ಡ ಬೆಟ್ಟ ಏನು ಹತ್ತೀಯಾ?
ಗುಡ್ಡಗಾಡಿನಲ್ಲಿ ಚಾರಣಕ್ಕೆ ಹೊರಟ ಗುಂಪಿನಿಂದ ರಾಜಾ ಮತ್ತು ರಾಣಿ ತಪ್ಪಿಸಿಕೊಂಡುಬಿಟ್ಟಿರುತ್ತಾರೆ. ಆದರೂ ಇಬ್ಬರೂ ವಿಚಲಿತರಾಗುವುದಿಲ್ಲ. ಹೇಗಾದರೂ ಮಾಡಿ ಉಳಿದ ತಂಡವನ್ನು ಕೂಡಿಕೊಳ್ಳಲೇಬೇಕೆಂದು ಚಾರಣ ಮುಂದುವರಿಸುತ್ತಾರೆ. ಇಬ್ಬರಲ್ಲಿ ರಾಣಿ ಚಾರಣದಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ ರಾಜಾ ಅಂತಹ ನುರಿತ ಚಾರಣಿಗನಲ್ಲ, ಆದರೆ ಆತನಲ್ಲಿ ಉತ್ಸಾಹಕ್ಕೇನೂ ಕೊರತೆ ಇರುವುದಿಲ್ಲ.
ನಡೆದು ನಡೆದು ಸುಸ್ತಾಗಿ ಕೊನೆಗೆ ಒಂದು ಸಮತಟ್ಟವಾದ ಪ್ರದೇಶವನ್ನು ಸೂರ್ಯ ಮುಳುಗುವ ಹೊತ್ತಿಗೆ ತಲುಪುತ್ತಾರೆ. ರಾತ್ರಿ ಚಾರಣ ಮಾಡುವುದು ಅಪಾಯಕರ ಎಂದು ತಿಳಿದಿದ್ದರಿಂದ ಅಲ್ಲೇ ಟೆಂಟ್ ಹಾಕಿ, ಕ್ಯಾಂಪ್ ಫೈರ್ ಹಾಕಿ ಸ್ವಲ್ಪ ಹೊತ್ತು ಕಾಯಿಸಿಕೊಂಡು ಟೆಂಟ್ ಒಳಗಡೆ ಸೇರಿಕೊಳ್ಳುತ್ತಾರೆ.
ಹೊರಗಡೆ ವಿಪರೀತ ಚಳಿ, ಟೆಂಟ್ ಒಳಗೆ ಸ್ವಲ್ಪ ಬೆಚ್ಚಗಿನ ವಾತಾವರಣ. ಬೆಳಗಾಗುತ್ತಿದ್ದಂತೆ ಟ್ರೆಕ್ಕಿಂಗ್ ಮತ್ತೆ ಮುಂದುವರಿಸಬೇಕೆಂದು ನಿಶ್ಚಯಿಸಿ ಇಬ್ಬರೂ ಹೊದ್ದು ಮಲಗುತ್ತಾರೆ. ಆ ರಾತ್ರಿ ಯಾವ ಆತಂಕವೂ ಇಲ್ಲದೆ ಬೆಳಗು ಹರಿದಿರುತ್ತದೆ. ಹೊರಗಡೆ ವಿಪರೀತ ಚಳಿಯಿದ್ದರೂ ವಾತಾವರಣ ಸುಂದರವಾಗಿರುತ್ತದೆ. ಹತ್ತಿರದಲ್ಲಿಯೇ ಝುಳುಝುಳು ನದಿ ಹರಿಯುವ ಶಬ್ದ, ಹಕ್ಕಿಗಳ ಚಿಲಿಪಿಲಿ.
ವಾವ್ ಸ್ವರ್ಗವೇ ಭೂಮಿಯ ಮೇಲೆ ಇಳಿದುಬಂದಿದೆ ಎಂದು ರಾಜಾನಿಗೆ ಭಾಸವಾಗುತ್ತದೆ. ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಂದು ತನ್ನ ಸಾಮಾನು ಸರಂಜಾಮುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ರಾಜಾ ಮತ್ತೆ ಚಾರಣಕ್ಕೆ ಸಿದ್ಧನಾಗುತ್ತಾನೆ. ಚಾರಣದಲ್ಲಿ ಭಾರೀ ನುರಿತವಳು ಎಂದು ಖ್ಯಾತಿ ಪಡೆದಂತಹ ರಾಣಿಯೇ ಯಾಕೋ ಮಂಕಾದಂತೆ ಮತ್ತು ಕೋಪಗೊಂಡಂತೆ ಕಾಣಿಸುತ್ತಾಳೆ.
ಇದನ್ನು ನೋಡಿದ ರಾಜಾ, "ಯಾಕ್ ರಾಣಿ, ಮುಂದಿನ ಚಾರಣ ನೆನೆಸಿಕೊಂಡು ಹೆದರಿಬಿಟ್ಟೆಯಾ. ಉಳಿದವರು ಸಿಕ್ಕೇ ಸಿಗ್ತಾರೆ. ಬಾ ಹೋಗೋಣ ನಾನಿದ್ದೀನಲ್ಲ" ಎಂದು ಹುಮ್ಮಸ್ಸು ತುಂಬಲು ಯತ್ನಿಸಿದ.
"ನನಗೇನು ಹೆದರಿಕೆಯಿಲ್ಲ. ಏಕಾಂಗಿಯಾಗಿ ಚಾರಣ ಮುಗಿಸಬಲ್ಲ ತಾಕತ್ತು ನನಗಿದೆ. ಆ ಬೆಟ್ಟ ನೋಡಿದೆಯಾ? ನಿನಗೇ ಆ ಬೆಟ್ಟ ಹತ್ತಲು ಸಾಧ್ಯವಿಲ್ಲ" ಎಂದು ರಾಣಿ ಖಡಾಖಂಡಿತವಾಗಿ ಹೇಳುತ್ತಾಳೆ.
ರಾಜಾನಿಗೆ ಅವಮಾನವಾದಂತಾಗುತ್ತದೆ. "ಯಾಕೆ ಯಾಕ್ ಹತ್ತೋಕಾಗಲ್ಲ. ಖಂಡಿತ ಹತ್ತುತ್ತೇನೆ" ಎಂದು ಬುಸುಗುಡುತ್ತ ಹೇಳುತ್ತಾನೆ.
ಅದಕ್ಕೆ ರಾಣಿ "ಅಯ್ಯೋ, ರಾತ್ರಿ ಎರಡು ಸಣ್ಣ ಬೆಟ್ಟ ಹತ್ತೋಕೇ ನಿನಗಾಗಿಲ್ಲ. ಇನ್ನು ಆ ದೊಡ್ಡ ಬೆಟ್ಟ ಏನು ಹತ್ತೀಯಾ?"












Click it and Unblock the Notifications