ಛೆ, ಪಕ್ಕದ್ಮನೆ ಹೆಂಗ್ಸು ಲವೀನಾ ಗಂಡಂಗೆ ಹೀಗ್ಮಾಡೋದಾ?
ಸುಂದರಿ ಲವೀನಾ ಎಂಟು ತಿಂಗಳ ತುಂಬು ಗರ್ಭಿಣಿ. ಇಂಥ ಸಮಯದಲ್ಲಿ ಎಷ್ಟು ಕಾಳಜಿ ತೆಗೆದುಕೊಂಡರೂ ಕಮ್ಮಿ ಎಂದು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದೆ, ಗಂಡ ಯತೀಶನಿಂದ ರಾತ್ರಿ ಸಮಯದಲ್ಲಿ ದೂರ ಮಲಗುತ್ತಿದ್ದಳು. ಲವೀನಾ ಮಂಚದ ಮೇಲೆ ಮಲಗುತ್ತಿದ್ದರೆ ಬಡಪಾಯಿ ಗಂಡ ಯತೀಶ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದ.
ಆದರೆ, ಯಾವ ಪಾಪಿ ಗಂಡನಿಗೂ ಬರಬಾರದು ಹಾಗಾಗಿತ್ತು ಯತೀಶನ ಪಾಡು. ನಿಂತರೆ ನಿಲ್ಲಲು ಆಗುತ್ತಿರಲಿಲ್ಲ, ಕುಂತರೆ ಕೂಡಲು ಆಗುತ್ತಿರಲಿಲ್ಲ, ಮಲಗಿದರೆ ನಿದ್ದೆ ಬರುತ್ತಿರಲಿಲ್ಲ. ಆತನ ಅವಸ್ಥೆ ಕಂಡು ಲವೀನಾ ಕಿಸಕ್ಕನೆ ನಕ್ಕರೆ ಇನ್ನಷ್ಟು ಉರಿದುಕೊಂಡು ಬಿಡುತ್ತಿದ್ದ, ಲವೀನಾ ಮತ್ತಷ್ಟು ರಂಗೇರುತ್ತಿದ್ದಳು. ಆತನ ಆಸೆಗಳು ಮತ್ತಷ್ಟು ಗರಿಗೆದರುತ್ತಿದ್ದವು, ಆದರೆ ಏನೂ ಮಾಡುವಂತಿರಲಿಲ್ಲ.
ಹೀಗೇ ಒಂದು ರಾತ್ರಿ ಚಾಪೆಯ ಮೇಲೆ ಅಂಗಾತ ಮಲಗಿಕೊಂಡು ತಿರುಗುತ್ತಿದ್ದ ಫ್ಯಾನನ್ನೇ ದಿಟ್ಟಿಸಿಕೊಂಡು ನೋಡುತ್ತಿದ್ದ ಸೀನನ್ನು ನೋಡಿದ ಲವೀನಾಳ ಕರುಳು ಚುರುಕ್ ಎಂದಿತು. ಒಂಟಿ ಕಣ್ಣಿನಿಂದ ಒಂದೇ ಹನಿ ನೀರನ್ನು ತಂದುಕೊಂಡು ಎದ್ದುಬಂದ ಲವೀನಾ ಸೀಕ್ರಿಟ್ ಪಾಕೇಟಲ್ಲಿ ಇಟ್ಟುಕೊಂಡಿದ್ದ ಐನೂರು ರು. ಹೊರತೆಗೆದು ಗಂಡ ಕೈಗಿಡುತ್ತಾಳೆ.
ಟ್ಯೂಬ್ ಲೈಟ್ ಬ್ರೇನಿನ ಯತೀಶನಿಗೆ ಅಚ್ಚರಿಯೋ ಅಚ್ಚರಿ. ಯಾಕೆ, ಏನು ಎಂದು ಚೂರೂ ಅರ್ಥವಾಗಲಿಲ್ಲ.
ಆಗ ಲವೀನಾಳೆ, "ಮೈ ಸ್ವೀಟ್ ಹಾರ್ಟ್. ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗತ್ತೆ. ಇದನ್ನು ತಗೊಂಡು ಪಕ್ಕದ್ಮನೆಗೆ ಹೋಗಿ. ಚಮೇಲಿ ಸದ್ಯಕ್ಕೆ ಒಬ್ಬಳೇ ಇದ್ದಾಳೆ. ಆಕೆಯ ಗಂಡ ಮಗನನ್ನು ಕರ್ಕೊಂಡು ಊರಿಗೆ ಹೋಗಿದ್ದಾನೆ. ಆಕೆಯ ಜೊತೆ ಎಲ್ಲಾ ಮಾತಾಡಿದ್ದೀನಿ. ಇದೊಂದೇ ರಾತ್ರಿ ಗೊತ್ತಾಯ್ತಾ? ಇಂಥ ಚಾನ್ಸ್ ಮತ್ತೆಂದೂ ದೊರೆಯುವುದಿಲ್ಲ, ಅಪೇಕ್ಷಿಸಲೂಬೇಡಿ" ಎಂದು ಒಂದೇ ಟೇಕಿನಲ್ಲಿ ಹೇಳಿದಳು.
ಪಿಟಕ್ ಅಂದರೆ ಕೆಲಸ ಕೆಟ್ಟೀತೆಂದು ಫಕ್ಕನೆ 500 ರು. ಇಸಿದುಕೊಂಡು ಪಕ್ಕದ್ಮನೆಗೆ ಹೋದ ಯತೀಶ. ಆದರೆ, ಅರ್ಧ ಗಂಟೆಯಲ್ಲಿ ಮನೆಗೆ ವಾಪಸ್ ಮರಳಿದ್ದ. ಇಷ್ಟು ಬೇಗನೆ ಆಗಿಹೋಗಿತಾ ಅಂತ ಲವೀನಾಗೆ ಅಚ್ಚರಿ. ಆದರೆ, ಯತೀಶನ ಮುಖ ನೋಡಿ ಅಂಥದ್ದೇನೂ ಆಗಿಲ್ಲ ಎಂಬುದು ಲವೀನಾಗೆ ಅರ್ಥವಾಗಿತ್ತು. ಹುಬ್ಬೇರಿಸಿ ಕೇಳಿದಳು.
"ಯಾವ ಸೀಮೆ ಹೆಂಗಸವ್ಳು? ಇಷ್ಟು ಸಾಲಲ್ವಂತೆ, ಸಾವಿರ ರು.ನೇ ಬೇಕಂತೆ" ಎಂದು ಹ್ಯಾಪ್ ಮೋರೆ ಹಾಕಿಕೊಂಡು ಯತೀಶ ಹೇಳಿದ.
ಲವೀನಾ ನಖಶಿಖಾಂತ ಉರಿದುಹೋಗಿಬಿಟ್ಟಳು. ಕಣ್ಣುಗಳು ಭಗಭಗನೆ ಉರಿಯುತ್ತಿದ್ದವು, ಕಿವಿ ಹೊಗೆ ಉಗುಳುವಂತೆ ಕೆಂಪಾಗಿದ್ದವು, ಎದೆಯ ಏರಿಳಿತ ಏರುಪೇರಾಗಿತ್ತು. "ಅದೆಷ್ಟು ಧೈರ್ಯ ಅವಳಿಗೆ ಸಾವಿರ ರು. ಕೇಳೋಕೆ? ಆಕೆ ಗರ್ಭಿಣಿಯಾಗಿದ್ದಾಗ, ಆಕೆಯ ಗಂಡನೂ ಇಲ್ಲಿಗೊಂದು ದಿನ ಬಂದಿದ್ದ. ಆಗ ನಾನು ಚಾರ್ಜ್ ಮಾಡಿದ್ದು ಕೇವಲ 500 ರು. ಮಾತ್ರ. ಈಗ ಅವಳಿಗೆ ಸಾ..." ಆಕೆ ತನ್ನ ಮಾತು ಮುಗಿಸುವ ಮೊದಲೇ ಯತೀಶ ಚಾಪೆಯ ಮೇಲೆ ಕುಸಿದುಕುಳಿತಿದ್ದ. [ಲವೀನಾ ಜೋಕ್ಸ್]












Click it and Unblock the Notifications