ಮೊದಲ ರಾತ್ರಿ ಮಗನ ಡೌಟಿಗೆ ಅಪ್ಪನ ಪರಿಹಾರ
ಸರ್ಕಲ್ ರೌಡಿ ಸುಬ್ಬುವಿನ ಮಗ ಚಬ್ಬು ಮಹಾ ಓತ್ಲಾ ಪಾರ್ಟಿ. ಕೆಲಸವಿಲ್ಲದೆ ಅಬ್ಬೆಪಾರಿಯಂತೆ ತಿರುಗಿಕೊಂಡು ಬಿದ್ದಿದ್ದ ಅವನಿಗೆ, ಮದುವೆಯಾದರೂ ಸರಿಹೋದಾನು ಎಂದು, ಅದೂಇದೂ ಹೇಳಿ ಹೆಣ್ಣಿನವರನ್ನು ನಂಬಿಸಿ ಓರ್ವ ಯುವತಿಗೆ ಗಂಟುಕಟ್ಟಿಬಿಡುತ್ತಾರೆ.
ಮೊದಲ ರಾತ್ರಿಯ ರೋಮಾಂಚನಕ್ಕೆ ಸಿದ್ಧನಾದ ಚಬ್ಬುವಿಗೆ ಒಂದೇ ಡೌಟು. ತಾನು ಮದುವೆಯಾಗಿರುವ, ಮೊದಲ ರಾತ್ರಿಯಂದು ಸಂಧಿಸಲಿರುವ ಹೆಂಡತಿ ಇನ್ನೂ ಕನ್ಯೆಯಾಗಿದ್ದಾಳೋ ಇಲ್ಲವೋ ಎಂಬ ಸಂದೇಹ. ಇನ್ನೇನು ಬೆಡ್ ರೂಂ ಒಳಪ್ರವೇಶಿಸಬೇಕು ಅಪ್ಪನಿಗೆ ತನ್ನ ಸಂದೇಹ ಪರಿಹರಿಸೆಂದು ಗಂಟುಬೀಳುತ್ತಾನೆ.
ಅಪ್ಪನಿಗೆ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಅತ್ತಕಡೆ, ಹೆಂಗಳೆಯರು ಮುಹೂರ್ತ ಮೀರುತ್ತಿದೆ ಎಂದು ಗಡಿಬಿಡಿ ಮಾಡುತ್ತಿರುತ್ತಾರೆ. ಚಬ್ಬುವಿನ ತಾಳ್ಮೆ ಮಿತಿಮೀರುತ್ತಿರುತ್ತದೆ. ತಂದೆ ಸುಬ್ಬುವಿಗೆ ಒಂದೇಸವನೆ ಬಲವಂತ ಮಾಡಲು ಪ್ರಾರಂಭಿಸುತ್ತಾನೆ.
ಆಗ ಒಂದು ಐಡಿಯಾ ಛಕ್ಕನೆ ಐಡಿಯಾ ಹೊಳೆಯುತ್ತದೆ. ಆತನ ಕೈಗೆ ಒಂದು ಗನ್ ಕೊಟ್ಟು. ಆಕೆ ಕನ್ಯೆಯಾಗಿದ್ದರೆ ಗಾಳಿಯಲ್ಲಿ ಗುಂಡು ಹಾರಿಸು, ಇಲ್ಲದಿದ್ದರೆ ಅವಳಿಗೆ ಹಾರಿಸು ಅಂತ ಖತರನಾಕ್ ಐಡಿಯಾ ಕೊಡುತ್ತಾನೆ. ಅಪ್ಪನ ಮಾತೆಂದರೆ ಶಿರಸಾವಹಿಸಿ ಪಾಲಿಸುತ್ತಿದ್ದ ಚಬ್ಬು ಸರಿ ಎಂದು ಗನ್ ಇಸಿದುಕೊಂಡ.
ಮೊದಲ ರಾತ್ರಿ ಚಬ್ಬು ಮತ್ತು ಆತನ ಹೆಂಡತಿಯ ಮಿಲನ ಮಹೋತ್ಸವ ನಡೆದುಹೋಯಿತು. ಬೆಳಗಾನೆದ್ದು ಚಬ್ಬು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಸರ್ಕಲ್ ರೌಡಿ ಸುಬ್ಬು ಆ ಸದನ್ನು ಕೇಳಿ ತುಂಬಾ ಖುಷಿಗೊಂಡಿದ್ದ. ಗುಂಡು ಹಾರಿಸಿದ್ದರ ಅರ್ಥ ಆತನಿಗೆ ಮಾತ್ರ ಗೊತ್ತಿತ್ತು. ಆದರೆ, ಸುಬ್ಬು ತಬ್ಬಿಬ್ಬಾಗುವಂತೆ ಮರುದಿನ ಚಬ್ಬು ಮತ್ತೊಂದು ಗುಂಡು ಹಾರಿಸಿದ್ದ. ಚಬ್ಬು ಮತ್ತೊಂದು ಗುಂಡು ಹಾರಿಸುತ್ತಾನೆ ಎಂದು ಸುಬ್ಬು ನಿರೀಕ್ಷಿಸಿರಲೇ ಇಲ್ಲ.












Click it and Unblock the Notifications