ಫೈನಾನ್ಸ್ ಜೋಕ್ : ಶ್ರೀಮಂತ ಲಗ್ನವಾಗಿದ್ದು ಯಾರನ್ನು?

ಯೌವನದ ತುದಿಯಲ್ಲಿದ್ದ ಒಬ್ಬ ಸಿಕ್ಕಾಪಟ್ಟೆ ಶ್ರೀಮಂತ ಪುರುಷ ಮದುವೆಯ ಹಂತ ತಲುಪಿರುತ್ತಾನೆ. ಅವನ ಸ್ನೇಹಿತರೆಲ್ಲ ತೀರ ಬಲವಂತ ಮಾಡಿದ್ದರಿಂದ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿರುತ್ತಾನೆ. ಕೊನೆಗೆ ತಾನು ಮದುವೆಯಾಗಬೇಕಿರುವ ಯುವತಿಯನ್ನು ಪರೀಕ್ಷೆಗೆ ಒಳಪಡಿಸಿ ನಂತರ ಮದುವೆಯಾಗಬೇಕೆಂದು ನಿರ್ಧರಿಸುತ್ತಾನೆ.

ತನ್ನ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಮೂವರು ಸುಂದರಿಯರನ್ನು ಆಯ್ದುಕೊಳ್ಳುತ್ತಾನೆ. ಮೂರವನ್ನು ಬೇರೆಬೇರೆಯಾಗಿ ಕರೆಯಿಸಿಕೊಂಡು ಅವರಿಗೆ 1 ಲಕ್ಷ ರು. ಕೊಟ್ಟು, ನೀವು ಈ ಹಣವನ್ನು ಹೇಗೆ ಬಳಸುತ್ತೀರಿ ನೋಡಿ ನಂತರ ನಿಮ್ಮನ್ನು ಮದುವೆಯಾಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಹೇಳುತ್ತಾನೆ. ಅವರಿಗೆ ಒಂದು ತಿಂಗಳ ಕಾಲಾವಕಾಶ ಕೊಟ್ಟು, ಗಲ್ಲಕ್ಕೆ ಮುತ್ತು ಕೊಟ್ಟು ಕಳಿಸುತ್ತಾನೆ.

ತಿಂಗಳ ನಂತರ ಬಂದ ಒಬ್ಬಳ ರೂಪಲಾವಣ್ಯವೇ ಬದಲಾಗಿರುತ್ತದೆ. ಎಂದೂ ಖರೀದಿಸದಂತಹ ದುಬಾರಿ ಬಟ್ಟೆಗಳನ್ನು ಖರೀದಿಸಿರುತ್ತಾಳೆ. ಫೇಶಿಯಲ್, ಹೈರ್ ಡೈಯಿಂಗ್, ಬಾಡಿ ವ್ಯಾಕ್ಸಿಂಗ್ ಮಾಡಿಸಿರುತ್ತಾಳೆ. ತನ್ನಂತಹ ಸುಂದರಿ ಈ ಕಂಪನಿಯಲ್ಲೇ ಇಲ್ಲ ಎಂದು ಬೀಗುತ್ತಿರುತ್ತಾಳೆ. "ನಿಮ್ಮ ಹೆಂಡತಿ ಜಗತ್ತಿನಲ್ಲಿಯೇ ಸುಂದರವಾಗಿರಬೇಕೆಂದು ನನ್ನ ಸೌಂದರ್ಯವನ್ನೇ ಬದಲಾಯಿಸಿಕೊಂಡೆ. ನಿಮ್ಮನ್ನೆಷ್ಟು ಪ್ರೀತಿಸುತ್ತೇನೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಹೇಳುತ್ತಾಳೆ.

ನಂತರ ಎರಡನೇಯವಳ ಸರದಿ. ಆಕೆ, ತನಗಾಗಿ ಹಣ ಖರ್ಚು ಮಾಡುವ ಬದಲು ಕಂಪನಿ ಮಾಲಿಕನಿಗಾಗಿ ಟಿವಿ, ಫ್ರಿಜ್ಜು, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಸಾಮಗ್ರಿಗಳನ್ನೂ ಕೊಂಡಿರುತ್ತಾಳೆ. "ನಾನು ನನ್ನ ಸ್ವಂತಕ್ಕಾಗಿ ಏನ್ನೂ ಕೊಂಡಿಲ್ಲ, ಎಲ್ಲ ನಮ್ಮ ಮುಂದಿನ ಸಂಸಾರಕ್ಕಾಗಿ. ನಿಮ್ಮನ್ನೆಷ್ಟು ಪ್ರೀತಿಸುತ್ತೇನೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಹೇಳಿ ಹೋಗುತ್ತಾಳೆ. ಪರವಾಗಿಲ್ವೆ ಅಂದುಕೊಳ್ಳುತ್ತಾನೆ.

ಈಗ ಮೂರನೆಯವಳ ಸರದಿ. ಆಕೆಯಾದರೂ ಕಡಿಮೆಯಾ? ಬಲು ಜಾಣೆ ಅವಳು. ತನ್ನಗೆ ಕೊಟ್ಟ ಹಣವನ್ನು ಹೂಡಿಕೆ ಮಾಡಿ ಲಾಭ ಗಳಿಸಿ, ಆತ ಕೊಟ್ಟಿದ್ದ 1 ಲಕ್ಷ ರು. ಹಣವನ್ನು ಅವನಿಗೇ ಹಿಂದಿರುಗಿಸಿ, ಉಳಿದ ಹಣವನ್ನು ಮತ್ತೆ ಹೂಡಿಕೆ ಮಾಡಿರುತ್ತಾಳೆ. ಮೆಚ್ಚುಗೆಯಿಂದ ಆಕೆಯ ಗಲ್ಲವನ್ನು ತಟ್ಟಿ, ಕೊನೆಗೊಂದು ಮುತ್ತನ್ನೂ ಕೊಟ್ಟು ಕಳುಹಿಸುತ್ತಾನೆ.

ಈಗ ಹೇಳಿ ಆತ ಯಾವ ಯುವತಿಯನ್ನು ಮದುವೆಯಾಗಬೇಕು? ಮೊದಲನೆಯವಳಾ, ಎರಡನೆಯವಳಾ, ಕೊನೆಯವಳಾ? ಒಂದು ತಿಂಗಳು ಸುದೀರ್ಘವಾಗಿ ವಿಚಾರ ಮಾಡಿ ಆತ ಕೊನೆಗೆ ಒಂದು ನಿರ್ಧಾರಕ್ಕೆ ಬರುತ್ತಾನೆ. ಆತ ಯಾರನ್ನು ಮದುವೆಯಾಗುತ್ತಾನೆ ಎಂದು ಗೊತ್ತಾ? ವಿಚಾರ ಮಾಡಿ... ವಿಚಾರ ಮಾಡಿ...

ಯು ಆರ್ ರಾಂಗ್.... ಆತ ಮದುವೆಯಾಗಿದ್ದು ಅತ್ಯಂತ ಸುಂದರವಾದ ಮತ್ತು ಅತ್ಯಂತ ದಷ್ಟಪುಷ್ಟವಾದ ಸ್ತನಗಳನ್ನು ಹೊಂದಿದ ಯುವತಿಯನ್ನು! ಆತ ಹೀಗೇಕೆ ಮಾಡಿದ ಎಂದು ಉತ್ತರ ಹೇಳಬೇಕಾದ ಸರದಿ ಈಗ ನಿಮ್ಮದು. ಹೇಳ್ತೀರಿ ತಾನೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+