ಸ್ಟ್ಯಾನ್ಲಿಯ ಪ್ರಾಮಾಣಿಕ ತಪ್ಪೊಪ್ಪಿಗೆಗೆ ಬೆಚ್ಚಿಬಿದ್ದ ಫಾದರ್ ಸೋನಿ!

ಹಿಂದಿನ ದಿನ ನಡೆದ ಘಟನೆಯಿಂದ ಸ್ಟ್ಯಾನ್ಲಿಗೆ ತೀವ್ರ ಪಾಪಪ್ರಜ್ಞೆ ಕಾಡುತ್ತಿತ್ತು, ಮನದಲ್ಲಿ ಇಟ್ಟುಕೊಳ್ಳಲಾಗದೆ, ಹೇಳಲಾಗದೆ ಇಡೀ ರಾತ್ರಿ ತೊಳಲಾಡಿಬಿಟ್ಟ. ಬೆಳಗಾಗುತ್ತಿದ್ದಂತೆ ಒಂದು ಗಟ್ಟಿ ನಿರ್ಧಾರಕ್ಕೆ ಬಂದ.

ಕನ್ಪೆಷನ್ ಬಾಕ್ಸ್ ನಲ್ಲಿ ತಾನು ಮಾಡಿದ ತಪ್ಪನ್ನು ಫಾದರ್ ಸೋನಿ ಎದುರು ಒಪ್ಪಿಕೊಳ್ಳಲೇಬೇಕು ಎಂದು ನಿರ್ಧಾರ ತೆಗೆದುಕೊಂಡು ನೇರವಾಗಿ ಚರ್ಚಿಗೆ ತೆರಳಿದ.

ಕನ್ಫೆಷನಲ್ ನಲ್ಲಿ ನಿಂತುಕೊಂಡು ಉಸಿರು ಬಿಗಿ ಹಿಡಿದುಕೊಂಡು ಹೇಳೇಬಿಟ್ಟ, "ಫಾದರ್, ಫಾದರ್, ನಿನ್ನೆ ನಾನು ನನ್ನ ಹೆಂಡತಿಯನ್ನು ಸಂಭೋಗಿಸಿಬಿಟ್ಟೆ!"

ಅತ್ಯಂತ ಶಾಂತಚಿತ್ತನಾಗಿದ್ದ ಫಾದರ್ ಸೋನಿ, "ಮೈ ಸನ್, ಅದರಲ್ಲೇನೂ ತಪ್ಪಿಲ್ಲ. ಗಂಡ ಹೆಂಡಿರ ಮಧ್ಯೆ ಅದು ಅತ್ಯಂತ ಸಹಜವಾದ ಕ್ರಿಯೆ" ಎಂದರು.

Confession by Stanley before Father Soni

"ಹಾಗಲ್ಲ ಫಾದರ್, ನಾನು ಹಾಗೆ ಮಾಡಬಾರದಿತ್ತು. ಆದರೆ, ನನಗೆ ಹೆಂಡತಿಯನ್ನು ನೋಡಿದ ಕೂಡಲೆ ತಡೆದುಕೊಳ್ಳಲು ಆಗಲೇ ಇಲ್ಲ" ಎಂದು ಎರಡೂ ಕೈಗಳ ಬೆರಳುಗಳನ್ನು ಸೇರಿಸಿ ಗದ್ದದ ಕೆಳಗೆ ಇಟ್ಟುಕೊಂಡು ಗದ್ಗಿತನಾಗಿ ಹೇಳಿದ.

ತುಸು ಸಾವರಿಸಿಕೊಂಡ ಫಾದರ್ ಸೋನಿ, "ಮಗನೆ, ಅದ್ಯಾಕೆ ಅಷ್ಟು ಬೇಜಾರು ಪಟ್ಟುಕೊಳ್ಳುತ್ತಿ. ಇಟ್ಸ್ ಆಲ್ ರೈಟ್" ಎಂದು ಕೈ ಅಮುಕಿದ.

ಆದರೂ ಸ್ಟ್ಯಾನ್ಲಿಗೆ ಸಮಾಧಾನವಾಗಲಿಲ್ಲ. "ಆದರೆ ಫಾದರ್, ಇದು ಮಟಮಟ ಮಧ್ಯಾಹ್ನದಲ್ಲಿ ನಾವಿಬ್ಬರೂ ದೈಹಿಕ ಸುಖವನ್ನು ಅನುಭವಿಸಿದೆವು" ಅಂದ.

ಸ್ಟ್ಯಾನ್ಲಿಯ ಅದೇಅದೇ ಮಾತುಗಳನ್ನು ಕೇಳಿ ಫಾದರ್ ಸೋನಿಗೆ ತಲೆಕೆಟ್ಟರೂ ಸಾವರಿಸಿಕೊಂಡು, ಇಂಥದೆಲ್ಲ ಒಮ್ಮೊಮ್ಮೆ ಆಗತ್ತೆ ಅಂತ ಸಮಾಧಾನ ಮಾಡಲು ಯತ್ನಿಸಿದ.

ಇವನು ಕೇಳಬೇಕಲ್ಲ? ಫಾದರ್ ತೆರಳಬೇಕೆನ್ನಿಸುವಷ್ಟರಲ್ಲಿ, "ಫಾದರ್ ಫಾದರ್ ಕೇಳಿಸಿಕೊಳ್ಳಿ, ಮಧ್ಯಾಹ್ನ ಆಕೆ ಫ್ರಿಜ್ ಬಳಿ ಇದ್ದಳು. ಆಕೆಯ ಸೌಂದರ್ಯ, ಮೈಮಾಟ ನೋಡಿ ನನಗೆ ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಲ್ಲೇ, ಆಸ್ಥಳದಲ್ಲೇ ನೆಲದ ಮೇಲೆ ಆಕೆಯನ್ನು ಕೆಡವಿ... ಇಂಥ ಕೆಲಸ ಮಾಡಿದ್ದಕ್ಕೆ ಚರ್ಚಿನಿಂದ ಬಹಿಷ್ಕಾರ ಹಾಕುತ್ತೀರಾ?" ಎಂದು ಬೆವರೊರೆಸಿಕೊಂಡ.

ಉಕ್ಕಿ ಬರುತ್ತಿದ್ದ ಸಿಟ್ಟನ್ನು ನಿಗ್ರಹಿಸಿಕೊಂಡ ಫಾದರ್ ಸೋನಿ, "ಖಂಡಿತ ಇಲ್ಲ" ಎಂದು ಸ್ಟ್ಯಾನ್ಲಿಯ ಕೈಬೆರಳು ಲಟಲಟ ಮುರಿಯುವಂತೆ ಗಟ್ಟಿಯಾಗಿ ಅಮುಕಿದ.

"ಥ್ಯಾಂಕ್ ಗಾಡ್. ಆದರೆ, ನನ್ನನ್ನು ಮತ್ತು ನನ್ನ ಹೆಂಡತಿಯನ್ನು ನಾವು ಕೆಲಸ ಮಾಡುತ್ತಿದ್ದ ಮಾಲ್ ನ ಮಾಲಿಕ ಬಹಿಷ್ಕಾರ ಹಾಕಿದ್ದಾನೆ" ಎಂದು ಪ್ರಾಮಾಣಿಕವಾಗಿ ಹೇಳಿ ಸ್ಟ್ಯಾನ್ಲಿ ತಪ್ಪೊಪ್ಪಿಗೆ ಬಾಕ್ಸ್ ನಿಂದ ಹೊರನಡೆದ. ಫಾದರ್ ಸೋನಿ ಆವಾಕ್ಕಾದ. ಫಾದರ್ ತಲೆಯಲ್ಲಿ ಏನೇನೋ ಓಡಾಡಲು ಆರಂಭಿಸಿತು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+