
ಗಂಡ, ಹೆಂಡತಿ, ಗರ್ಲ್ ಫ್ರೆಂಡ್ ಕಮಲಾ ಮತ್ತು ಬ್ರೆಡ್
ಸಾಂಸಾರಿಕ ಜೀವನದಲ್ಲಿ ಗಂಡ ಮತ್ತು ಹೆಂಡತಿ ನಡುವೆ ಒಬ್ಬರಿಗೊಬ್ಬರಿಗೆ ಕಾಡುವ ಸಂಶಯದ ಬಗ್ಗೆ ಹಲವಾರು ಜೋಕ್ಸ್ ಗಳು ಹರಿದಾಡುತ್ತಲೇ ಇರುತ್ತವೆ. ಅಂತದ್ದೊಂದು ಜೋಕ್ಸ್ ಇಲ್ಲಿದೆ:
ದುಬಾರಿ ಆಸ್ಟ್ರೇಲಿಯಾ ದೇಶಕ್ಕೆ ಕುಂದಾಪ್ರದ ಮಧ್ಯಮ ವರ್ಗದ ಕುಟುಂಬ ಹೋದಾಗ..
ಹೆಂಡತಿ: ರೀ.. ಮನೆಗೆ ಬರುತ್ತಾ ಬ್ರೆಡ್ ತರೋದನ್ನು ಮರೆಯಬೇಡಿ.. ನಿಮ್ಮ ಗರ್ಲ್ ಫ್ರೆಂಡ್ ಕಮಲಾ ನಮ್ ಮನೇಲೇ ಇದ್ದಾಳೆ..
ಗಂಡ: ಅರೇ..ಯಾವ ಕಮಲಾ..?
ಹೆಂಡತಿ: ಸುಮ್ಮನೆ ಹೇಳ್ದೆ, ನನ್ನ ಮೆಸೇಜ್ ನೋಡ್ತೀರಾ ಇಲ್ವಾ ಎಂದು ಚೆಕ್ ಮಾಡೋಕೆ, ಹಾಗೇ ಹೇಳ್ದೆ..
ಗಂಡ: ಆದರೆ.. ನಾನು ಕಮಲಾ ಜೊತೆಗೇನೇ ಇದ್ದೀನಲ್ವಾ... ನೀನು ನಮ್ಮನ್ನು ನೋಡಿದೆ ಅನ್ಕೊಂಡೆ..
ಹೆಂಡತಿ: ವಾಟ್ ನಾನ್ ಸೆನ್ಸ್.. ಎಲ್ಲಿ ಇದ್ದೀರಾ ಈಗ ನೀವು?
ಗಂಡ: ಇಲ್ಲೇ ಕಣೇ.. ನಮ್ ಮನೆ ಪಕ್ಕದ ಬೇಕರಿಯಲ್ಲಿ..
ಹೆಂಡತಿ: ಇರಿ.. ಎರಡು ನಿಮಿಷ ಬರ್ತೀನೀ..
ಐದು ನಿಮಿಷದ ನಂತರ..
ಹೆಂಡತಿ: ಎಲ್ರೀ ಇದ್ದೀರಾ.. ಬೇಕರಿ ಹತ್ರ ಇದ್ದೀನಿ ನಾನು..
ಗಂಡ: ಸುಮ್ನೆ ನಿನ್ನನ್ನು ಚೆಕ್ ಮಾಡೋಕೆ ಹೇಳ್ದೆ. ನಾನು ಆಫೀಸ್ ನಲ್ಲಿ ಇದ್ದೇನೆ. ಹೇಗೂ, ಬೇಕರಿ ಹತ್ರ ಇದ್ದೀಯಲ್ಲಾ.. ಬ್ರೆಡ್ ನೀನೇ ತೆಗೆದುಕೊಂಡು ಹೋಗು ಮನೇಗೆ..
--
ಗಂಡ ಮತ್ತು ಹೆಂಡತಿ ಮಾರ್ಕೆಟ್ ನಲ್ಲಿ ಕೈಕೈ ಹಿಡಿದುಕೊಂಡು ಸುತ್ತಾಡಿಕೊಂಡು ಓಡಾಡುತ್ತಿರುತ್ತಾರೆ. ಅಚಾನಕ್ ಆಗಿ ಗಂಡನ ಸ್ನೇಹಿತ ರಾಜು ಎದುರುಗಡೆ ಬರುತ್ತಾನೆ...
ರಾಜು: ಏ..ಕುಮಾರ್, ಹೆಂಡತಿಯನ್ನು ಅದೆಷ್ಟು ಪ್ರೀತಿ ಮಾಡುತ್ತೀಯಾ ನೀನು?
ಕುಮಾರ್: ಯಾಕೆ?
ರಾಜು: ಮದುವೆಯಾಗಿ ಇಷ್ಟು ವರ್ಷವಾದರೂ ನಿಮ್ಮ ನಡುವಿನ ಪ್ರೀತಿ ಬತ್ತಿಲ್ಲಾ.. ಇನ್ನೂ ಹೆಂಡತಿಯ ಕೈಹಿಡಿದುಕೊಂಡೇ ಓಡಾಡುತ್ತಿದ್ದೀಯಾ?
ಕುಮಾರ್ ಮೆತ್ತಗೆ ಸ್ನೇಹಿತನ ಕಿವಿಯಲ್ಲಿ ಹೇಳುತ್ತಾನೆ, 'ಆತರ ಏನಿಲ್ಲಾ ಕಣೋ.. ಕೈ ಬಿಟ್ಟರೆ ಯಾವುದಾದರೂ ಅಂಗಡಿಗೆ ಶಾಪ್ಪಿಂಗ್ ಗೆ ಹೋಗಿ ಬಿಡುತ್ತಾಳೆ'.