• search

ಪ್ರಾಣೇಶ್ ಶುರು ಮಾಡಿದ 'ಬೀಗ ಬೇಡ' ಹಾಸ್ಯ ಸರಣಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  'ಅಭಿನವ ಬೀಚಿ' ಎಂದೇ ಜನಪ್ರಿಯರಾಗಿರುವ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಗಂಗಾವತಿಯ ಪ್ರಾಣೇಶ ಅವರು 'ವೀಕೇಂಡ್ ವಿಥ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕುಳಿತು ಹೇಳಿದ ಸಾಲುಗಳು ಸದ್ಯ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ.

  ಏನಿದು ಬೀಗಬೇಡ ಜೋಕ್ಸ್.. ಎಂದು ಹಲವಾರು ಮಂದಿ ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ತಲೆ ಕೆಡಿಸಿಕೊಂಡಿದ್ದು ಇದೆ. ತಮ್ಮದೇ ಜೋಕುಗಳನ್ನು ಸೃಷ್ಟಿಸಿದ್ದು ಇದೆ.

  ಪ್ರಾಣೇಶ್ ಅವರು ಅಂದು ಮಾತನಾಡುತ್ತಾ,ನನಗೆ ಯಾವಾಗಲೂ ಒಂದು ಕೊಟೇಷನ್ ನೆನಪಾಗುತ್ತದೆ ಎನ್ನುತ್ತಾ ನಾಲ್ಕು ಸಾಲು ಹೇಳುತ್ತಾರೆ...

  ಎತ್ತರದಲ್ಲಿದ್ದೇನೆ ಎಂದು ಬೀಗಬೇಡ, ನಕ್ಷತ್ರಗಳು ಉರುಳುವುದನ್ನು ನಾನು ನೋಡಿದ್ದೇನೆ.
  ನನ್ನಲ್ಲಿ ಆಳವಾದ ಪಾಂಡಿತ್ಯವಿದೆ ಎಂದು ಗರ್ವಪಡಬೇಡ, ಬತ್ತುವ ಸಮುದ್ರವನ್ನು ನೋಡಿದ್ದೇನೆ.
  ನನ್ನಲ್ಲಿ ಸೌಂದರ್ಯವಿದೆ ಎಂದು ಹಿಗ್ಗಬೇಡ, ಮೋನಾಲಿಸಾ ಮಣ್ಣಾಗಿದ್ದನ್ನು ನೋಡಿದ್ದೇನೆ
  ಎಲ್ಲವನ್ನು ಗೆದ್ದೆ ಎನ್ನುವ ಅಲೆಕ್ಸಾಂಡರ್ ನನ್ನು ನೋಡಬೇಡ, ಕೊನೆಗೆ ಅವನು ಏನನ್ನೂ ಒಯ್ಯುವುದಿಲ್ಲ ಎಂಬುದನ್ನು ನೋಡಿದ್ದೇನೆ.

  Jokes for the day : Beegabeda Pranesh trending Jokes

  ಇದೇ ಧಾಟಿಯಲ್ಲಿ ಒಂದಷ್ಟು ಹಾಸ್ಯಭರಿತ ಸಾಲುಗಳಿವೆ...

  ಹೊಸಾ ಕಾರ್ ತಗೊಂಡೆ ಅಂತ ಮೆರಿಯಬೇಡ...

  ಫೆರಾರಿಯಲ್ಲಿ ಓಡಾಡ್ತಿದ್ದ ವಿಜಯ್ ಮಲ್ಯ ಪರಾರಿಯಾಗಿದ್ದನ್ನ ಕಂಡಿದ್ದೇನೆ..
  ****

  ಫೇಸ್ಬುಕ್ ಫೋಟೋ ತೋರಿಸಿ ಬೀಗಬೇಡ...

  ನಿನ್ನ ವೋಟರ್ ಐಡಿಯಲ್ಲಿನ ಫೋಟೋವನ್ನೂ ನೋಡಿದ್ದೇನೆ...

  ***
  100 ಸ್ಪೀಡಲ್ಲಿ ಗಾಡಿ ಓಡಿಸ್ತೀನಿ ಅಂತ ಮೆರೀಬೇಡ.
  100 ರಲ್ಲಿ ಹೋಗಿ 108 ರಲ್ಲಿ ವಾಪಸ್ ಬಂದವ್ರನ್ನ ನೋಡಿದ್ದೇನೆ...

  *****

  ನಮ್ಮೂರು, ನಮ್ಮೇರಿಯಾ ಎನ್ನಬೇಡ...

  ಸ್ವಂತ ಕ್ಷೇತ್ರದಲ್ಲೇ 36000 ಮತಗಳ ಅಂತರದಿಂದ ಹೀನಾಯವಾಗಿ ಸೋತವರನ್ನ ನೋಡಿದ್ದೇನೆ...
  ***

  ಗ್ಲಿಸರಿನ್ ಹಾಕೊಂಡ್ರೆನೇ ಕಣ್ಣೀರು ಬರೋದು ಅಂದುಕೊಬೇಡ!!
  ವಿಕ್ಸ್ ನಲ್ಲೇ ಕಣ್ಣೀರು ಬರಿಸ್ಕೊಂಡೋರನ್ನ ನೋಡಿದ್ದೇನೆ!!

  ****

  ಫ್ರೆಂಡ್ ಲಿಸ್ಟ್ ನಲ್ಲಿ ತುಂಬಾ ಹುಡುಗಿಯರಿದ್ದಾರೆ ಅಂತ ಮೆರೀಬೇಡ...

  ಅದರಲ್ಲಿ ಅರ್ಧದಷ್ಟು ಫೇಕ್ ಅನ್ನೋದನ್ನೂ ನೋಡಿದ್ದೇನೆ...
  ***
  ತುಂಬಾ ಓದಿದ್ದೆನೆಂದು ಬಿಗಬೇಡಾ..!😏
  ಕಡಿಮೇ ಓದಿ ಶಿಕ್ಷಣಮಂತ್ರಿ ಆಗಿರೊದನ್ನು ನಾನು ಕಂಡಿದ್ದೆನೆ..! 😂
  ****
  ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ದೇಶ ಬಿಡುತ್ತೇನೆ ಎನ್ನಬೇಡ

  ಕಳೆದ ಸಾರಿ ಹಾಗೆ ಅಂದು ಮೂರು ಬಿಟ್ಟು ಇಲ್ಲೆ ಗೂಟಾ ಹೋಡ್ಕೊಂಡು ಕುಂತೊರ ನೋಡಿದ್ದೇನೆ😜
  ****
  ದೊಡ್ಡ ಶತ್ರುತ್ವ ಪಾಲಿಸುವ ಮಾತಾಡಬೇಡ...

  ಅಪ್ಪನಾಣೆ ಸಿಎಂ ಆಗಲ್ಲ ಅಂದವರ ಜೊತೆಗೇ ಸೇರಿ ಸರ್ಕಾರ ರಚಿಸಿದವರನ್ನ ನೋಡಿದ್ದೇನೆ...

  ****

  MLA ಆಪ್ತ ಎಂದು ಬೀಗಬೇಡ
  13 ಬಾರಿ MLA 5 ಬಾರಿ CM ಆದವರಿಗಾಗಿ 6 ಅಡಿ 3 ಜಾಗಕ್ಕೆ ಕೋರ್ಟಿನಲ್ಲಿ ಅನುಮತಿ ಕೇಳುತ್ತಿರುವುದನ್ನು ಈಗ ಟಿವಿ ಯಲ್ಲಿ ನೋಡಿದ್ದಿನಿ.....🙂🙂

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Jokes for the day : Beegabeda trending Jokes started abuzz on social media sites. It all started after watching Pranesh's quotes on Weekend with Ramesh program.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more